ಬೆಂಗಳೂರು : ತಮಿಳು ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರಾಗಿರುವ ವಿಶಾಲ್ ಅವರು ಕಾಶಿಗೆ ತೆರಳಿ ಕಾಶಿ ವಿಶ್ವನಾಥನ ದರ್ಶನ ಮಾಡಿ ಗಂಗಾನದಿಯಲ್ಲಿ ಮಿಂದೆದ್ದಿದ್ದಾರೆ. ಅಲ್ಲದೆ, ಕಾಶಿಯ ಸೌಂದರ್ಯ ಹಾಗೂ ಪಾವಿತ್ರ್ಯತೆ ಕಾಪಾಡಿದ್ದಕ್ಕೆ ಪ್ರಧಾನಿ ಮೋದಿಯವರಿಗೆ ಟ್ಟೀಟ್‌ ಮೂಲಕ ಧನ್ಯವಾದಗಳನ್ನು ತಿಳಿಸಿದ್ದಾರೆ.


COMMERCIAL BREAK
SCROLL TO CONTINUE READING

ದೇವರ ದರ್ಶನ ನಂತರ ತಮ್ಮ ಟ್ವಿಟ್ಟರ್‌ನಲ್ಲಿ ʼಪ್ರೀತಿಯ ಮೋದಿಜೀ, ನಾನು ಕಾಶಿಗೆ ಭೇಟಿ ನೀಡಿದ್ದೇನೆ, ಅದ್ಭುತವಾದ ದರ್ಶನ/ಪೂಜೆಯನ್ನು ಮಾಡಿದ್ದೇನೆ ಮತ್ತು ಗಂಗಾನದಿಯ ಪವಿತ್ರಜಲವನ್ನು ಮುಟ್ಟಿದ್ದೇನೆ. ದೇವಸ್ಥಾನವನ್ನು ನವೀಕರಿಸುವ ಮೂಲಕ ಮತ್ತು ಅದನ್ನು ಇನ್ನಷ್ಟು ಅದ್ಭುತವಾಗಿ ಮತ್ತು ಸುಲಭವಾಗಿ ಕಾಣುವಂತೆ ಮಾಡಿದ್ದೀರಿ. ದೇವರು ನಿಮ್ಮನ್ನು ಆಶೀರ್ವದಿಸುತ್ತಾನೆ. ಹ್ಯಾಟ್ಸ್ ಆಫ್, ಸೆಲ್ಯೂಟ್ ಯು ಎಂದು ಹೇಳಿದ್ದಾರೆ.


ಇದನ್ನೂ ಓದಿ: ನಾಲ್ಕೂವರೆ ಕೆಜಿ ನಕಲಿ ಚಿನ್ನ ಅಡವಿಟ್ಟು ಕೊಟ್ಯಂತರ ರೂಪಾಯಿ ವಂಚನೆ!


ಸತತ ಸೋಲು ಅನುಭವಿಸಿದ್ದ ವಿಶಾಲ್‌ ಸದ್ಯ ವಿಶಾಲ್‌, ಲಾಠಿ, ತುಪ್ಪರಿವಾಲನ್ 2 ಮತ್ತು ಮಾರ್ಕ್ ಆಂಟನಿ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ಬ್ಯುಸಿಯಾಗಿದ್ದಾರೆ. ತುಪ್ಪರಿವಾಲನ್‌ ಈಗಾಗಲೇ ಪ್ರೇಕ್ಷಕರ ಮನ ಗೆಲ್ಲುವಲ್ಲಿ ಯಶಸ್ವಿಯಾಗಿತ್ತು. ಇನ್ನು ಭಾಗ ಎರಡು ತೆರೆಗೆ ಬರಲು ಸಿದ್ಧವಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.