ʼಆ ಬೆತ್ತಲೆ ಫೋಟೋ ನಂದಲ್ಲʼ : ವಿಚಾರಣೆ ವೇಳೆ ರಣವೀರ್ ಸಿಂಗ್ ಶಾಕಿಂಗ್ ಹೇಳಿಕೆ
ಪೊಲೀಸ್ ವಿಚಾರಣೆ ವೇಳೆ ಬೆತ್ತಲೆ ಫೋಟೋ ಕುರಿತು ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅಚ್ಚರಿ ಹೇಳಿಕೆಯೊಂದನ್ನ ನೀಡಿದ್ದು, ವೈರಲ್ ಆಗಿರುವ ಫೋಟೋ ನನ್ನದಲ್ಲ. ಯಾರದೋ ದೇಹಕ್ಕೆ ನನ್ನ ಮುಖ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಬೆಂಗಳೂರು : ಪೊಲೀಸ್ ವಿಚಾರಣೆ ವೇಳೆ ಬೆತ್ತಲೆ ಫೋಟೋ ಕುರಿತು ಬಾಲಿವುಡ್ ಸ್ಟಾರ್ ನಟ ರಣವೀರ್ ಸಿಂಗ್ ಅಚ್ಚರಿ ಹೇಳಿಕೆಯೊಂದನ್ನ ನೀಡಿದ್ದು, ವೈರಲ್ ಆಗಿರುವ ಫೋಟೋ ನನ್ನದಲ್ಲ. ಯಾರದೋ ದೇಹಕ್ಕೆ ನನ್ನ ಮುಖ ಜೋಡಿಸಿದ್ದಾರೆ ಎಂದು ತಿಳಿಸಿದ್ದಾರೆ.
ಮ್ಯಾಗಜಿನ್ ಸಲುವಾಗಿ ರಣವೀರ್ ಮಾಡಿಸಿದ ಫೋಟೋಶೂಟ್ ದೊಡ್ಡ ವಿವಾದ ಸೃಷ್ಟಿಸಿತ್ತು. ಅವರ ಬೆತ್ತಲೆ ಫೋಟೋಗಳು ಸಾಮಾಜಿಕ ಜಾಲತಾಣದಲ್ಲಿ ವೈರಲ್ ಆಗಿದ್ದವು. ಸ್ವತಃ ಆ ಫೋಟೋವನ್ನು ಅವರು ತಮ್ಮದೇ ಸೋಷಿಯಲ್ ಮೀಡಿಯಾ ಖಾತೆಯಲ್ಲಿ ಹಂಚಿಕೊಂಡಿದ್ದರು. ಮಹಿಳೆಯರಿಗೆ ಧಕ್ಕೆ ತರುವ ರೀತಿಯಲ್ಲಿ ರಣವೀರ್ ಸಿಂಗ್ ನಡೆದುಕೊಂಡಿದ್ದಾರೆ ಎಂದು ಕಾರಣ ಕೊಟ್ಟು ಎನ್.ಜಿ.ಓ ಸಂಸ್ಥೆಯೊಂದು ಮುಂಬೈನ ಚೆಂಬೂರ್ ಪೊಲೀಸ್ ಠಾಣೆಯಲ್ಲಿ ದೂರು ದಾಖಲಿಸಿತ್ತು.
ಇದನ್ನೂ ಓದಿ: ಟೀಂ ಇಂಡಿಯಾಗೆ ಬಿಗ್ ರಿಲೀಫ್ : ಪಾಕ್ ಟೀಂನಿಂದ ಈ ಡೆಂಜರ್ ಬ್ಯಾಟ್ಸ್‌ಮನ್ ಔಟ್
ಈ ನಿಟ್ಟಿನಲ್ಲಿ ಆಗಸ್ಟ್ 30ರೊಳಗೆ ಠಾಣೆಗೆ ಬಂದು ಹೇಳಿಕೆ ದಾಖಲಿಸುವಂತೆ ರಣವೀರ್ ಸಿಂಗ್ ಅವರಿಗೆ ನೋಟಿಸ್ ನೀಡಲಾಗಿತ್ತು. ಆಗಸ್ಟ್ 29ರ ಬೆಳಗ್ಗೆ 7.30ಕ್ಕೆ ಅವರು ಪೊಲೀಸ್ ಠಾಣೆಯಲ್ಲಿ ಹಾಜರಾಗಿದ್ದರು. ಸುಮಾರು 2 ಗಂಟೆಗಳ ಕಾಲ ಅವರ ವಿಚಾರಣೆ ಮಾಡಲಾಗಿದೆ ಎಂದು ಪೊಲೀಸ್ ಮೂಲಗಳು ತಿಳಿಸಿವೆ.
ವಿಚಾರಣೆ ವೇಳೆ ವೈರಲ್ ಆಗಿರುವ ಎಲ್ಲ ಫೋಟೋಗಳನ್ನು ರಣವೀರ್ ಸಿಂಗ್ ಅವರಿಗೆ ಪೊಲೀಸರು ತೋರಿಸಿದ್ದಾರೆ. ಆದರೆ ಆ ಪೈಕಿ ಒಂದು ಫೋಟೋ ಮಾತ್ರ ತಮ್ಮದಲ್ಲ ಎಂದು ರಣವೀರ್ ಸಿಂಗ್ ಹೇಳಿದ್ದಾರೆ. ಗುಪ್ತಾಂಗ ಕಾಣುವ ರೀತಿಯಲ್ಲಿ ಇರುವ ಬೇರೆ ಯಾರದ್ದೋ ಫೋಟೋಗೆ ತಮ್ಮ ಮುಖವನ್ನು ಜೋಡಿಸಲಾಗಿದೆ ಅಂತ ತಿಳಿಸಿದ್ದಾರೆ. ಸದ್ಯ ಈ ವಿಚಾರಣೆ ಮುಂದುವರಿದಿದೆ.
ಸದ್ಯ ರಣವೀರ್ ಸಿಂಗ್ ʼಸರ್ಕಸ್ʼ ಹಾಗೂ ʼರಾಕಿ ಔರ್ ರಾಣಿ ಕಿ ಪ್ರೇಮ್ ಕಹಾನಿʼ ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಕೆಲವೇ ದಿನಗಳ ಹಿಂದೆ ಅವರು ಬೆಂಗಳೂರಿನಲ್ಲಿ ನಡೆದ ಸೈಮಾ ಅವಾರ್ಡ್ಸ್ ಕಾರ್ಯಕ್ರಮದಲ್ಲಿ ಭಾಗವಹಿಸಿದ್ದರು.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.