Ravi Tejas injury : ಸಿನಿಮಾ ಶೂಟಿಂಗ್‌ ವೇಳೆ ಸಂಭವಿಸಿದ ಅಪಘಾತದಲ್ಲಿ ತೆಲುಗು ಖ್ಯಾತ ನಟ ರವಿತೇಜ ಅವರಿಗೆ ಗಂಭೀರ ಗಾಯವಾಗಿರುವ ಘಟನೆ ಬೆಳಕಿಗೆ ಬಂದಿದೆ. ಮಾಸ್‌ ಮಹಾರಾಜ್‌ ರವಿತೇಜ್‌ ಅವರಿಗೆ ವೈದ್ಯರು 16 ಹೊಲಿಗೆ ಹಾಕಿದ್ದಾರೆ ಎಂದು ಹೇಳಲಾಗುತ್ತಿದೆ. 


COMMERCIAL BREAK
SCROLL TO CONTINUE READING

ಹೌದು.. ರವಿತೇಜ ನಟನೆಯ ಬಹಿನಿರೀಕ್ಷಿತ ಸಿನಿಮಾ ಟೈಗರ್ ನಾಗೇಶ್ವರ ರಾವ್ ಚಿತ್ರದಲ್ಲಿ ಶೂಟಿಂಗ್‌ ಮುಕ್ತಾಯವಾಗಿದೆ. ಈ ಚಿತ್ರ ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ದಸರಾ ( ಅಕ್ಟೋಬರ್ 20) ಹಬ್ಬದಂದು ಬಿಡುಗಡೆಯಾಗಲಿದೆ. ಈ ಸಿನಿಮಾದ ಶೂಟಿಂಗ್ ವೇಳೆ ರವಿತೇಜ್‌ಗೆ ಅಪಘಾತವಾಗಿದ್ದಾಗಿ ಸುದ್ದಿಯಾಗಿದೆ.


ಇದನ್ನೂ ಓದಿ:ʼ777 ಚಾರ್ಲಿ-2ʼ ಸಿನಿಮಾದಲ್ಲಿ ನಟಿಸಲ್ಲ ಎಂದ ರಕ್ಷಿತ್‌ ಶೆಟ್ಟಿ..! ಅಸಲಿ ಕಾರಣವೇನು.?


ರವಿತೇಜ ನಟನೆಯ ಟೈಗರ್ ನಾಗೇಶ್ವರ್ ರಾವ್ ಬಿಡುಗಡೆಗೆ ಸಿದ್ಧವಾಗಿದೆ. ಈ ಸಿನಿಮಾದ ಶೂಟಿಂಗ್‌ ವೇಳೆ ಜರುಗಿದ ಘಟನೆಯೊಂದರ ಬಗ್ಗೆ ಇದೀಗ ಮಾಹಿತಿ ಲಭ್ಯವಾಗಿದೆ. ಶೂಟಿಂಗ್ ಟೈಮಲ್ಲಿ ನಡೆದ ಅವಘಡದಲ್ಲಿ ರವಿತೇಜ್‌ ಅವರಿಗೆ ಗಾಯಗಳಾದ ಬಗ್ಗೆ ಮಾಹಿತಿ ಹೊರ ಬಂದಿದೆ. ಸಾಹಸ ದೃಶ್ಯಗಳ ಚಿತ್ರೀಕರಣದ ವೇಳೆ ನಟ ಅಪಘಾತಕ್ಕೀಡಾಗಿದ್ದಾಗಿ ತಿಳಿದು ಬಂದಿದೆ.


ಟೈಗರ್ ನಾಗೇಶ್ವರ ರಾವ್ ಸಿನಿಮಾದ ರೈಲು ದರೋಡೆ ದೃಶ್ಯದ ಚಿತ್ರೀಕರಣದ ಸಮಯದಲ್ಲಿ ರೈಲಿನ ಮೇಲಿನಿಂದ ಜಿಗಿಯುವ ಭರದಲ್ಲಿ ಬ್ಯಾಲೆನ್ಸ್ ತಪ್ಪಿ ರವಿತೇಜ್‌ ಕೆಳಗೆ ಬಿದ್ದರು. ಈ ವೇಳೆ ಅವರ ಮೊಣಕಾಲಿಗೆ ಗಾಯವಾಗಿತ್ತು. ವೈದ್ಯರು ನಟನಿಗೆ 16 ಹೊಲಿಗೆ ಹಾಕಿದ್ದಾರೆ. ಆದ್ರೆ ಈ ವಿಷಯ ಎಲ್ಲಿಯೂ ವರದಿಯಾಗಿದ್ದಿಲ್ಲ. ಇತ್ತೀಚಿಗೆ ಈ ಸಿನಿಮಾದ ನಿರ್ಮಾಪಕ ಅಭಿಷೇಕ್ ಅಗರ್ವಾಲ್ ಸಂದರ್ಶನವೊಂದರಲ್ಲಿ ಈ ಕುರಿತು ಹೇಳಿಕೊಂಡಿದ್ದಾರೆ.


ಇದನ್ನೂ ಓದಿ: ಬಿಗ್‌ಬಾಸ್‌ ಮನೆಯಲ್ಲಿ ಮೊಬೈಲ್‌ ಬಳಕೆಗೆ ಅವಕಾಶವಿದೆ..! ಈ ವಿಚಾರ ನಿಮ್ಗೆ ಗೊತ್ತಾ..?


ಇತ್ತೀಚೆಗಷ್ಟೇ ಬಿಡುಗಡೆಯಾದ ರವಿತೇಜ್‌ ನಟನೆಯ ʼಧಮಾಕಾʼ ಚಿತ್ರದ ಬಾಕ್ಸ್‌ ಆಫೀಸ್‌ನಲ್ಲಿ ಹಿಟ್‌ ಗಳಿಸಿತ್ತು. ತ್ರಿನಾಥ ರಾವ್ ನಕ್ಕಿನ ನಿರ್ದೇಶನದ ಈ ಚಿತ್ರವನ್ನು ಪೀಪಲ್ಸ್ ಮೀಡಿಯಾ ಫ್ಯಾಕ್ಟರಿ ಮತ್ತು ಅಭಿಷೇಕ್ ಅಗರ್ವಾಲ್ ಆರ್ಟ್ಸ್ ಜಂಟಿಯಾಗಿ ನಿರ್ಮಿಸಿದ್ದರು. ಈ ಸಿನಿಮಾದಲ್ಲಿ ನಾಯಕಿಯಾಗಿ ಶ್ರೀಲೀಲಾ ನಟಿಸಿದ್ದರು. ಭಾರೀ ನಿರೀಕ್ಷೆಗಳ ನಡುವೆ ಬಂದ ಈ ಸಿನಿಮಾ ಡಿಸೆಂಬರ್ 23, 2022 ರಂದು ವಿಶ್ವದಾದ್ಯಂತ ಬಿಡುಗಡೆಯಾಗಿ ಉತ್ತಮ ಯಶಸ್ಸನ್ನು ಪಡೆಯಿತು. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.