Rishab Shetty Adopted School: ಸ್ಯಾಂಡಲ್‌ವುಡ್‌ ಡಿವೈನ್‌ ಸ್ಟಾರ್‌ ನಟ ರಿಷಬ್​ ಶೆಟ್ಟಿಗೆ, ಹುಟ್ಟೂರಿನ ಬಗ್ಗೆ ಅಪಾರ ಪ್ರೀತಿ, ಅಭಿಮಾನ ಇದ್ದು, ತಮ್ಮ ಸಿನಿಮಾಗಳಲ್ಲಿ ಕೂಡ ಕರಾವಳಿಯ ವಿಷಯಗಳನ್ನು ಆಯ್ದುಕೊಳ್ಳುತ್ತಾರೆ. ಸದ್ಯಕ್ಕೆ ‘ಕಾಂತಾರ: ಚಾಪ್ಟರ್​ 1’ ಚಿತ್ರದ ಕೆಲಸಗಳಲ್ಲಿ ಬ್ಯುಸಿ ಆಗಿರುವ ರಿಷಬ್​ ಶೆಟ್ಟಿ ಬಿಡುವಿನಲ್ಲಿ, ತಾವು ಓದಿದ ಕೆರಾಡಿಯ ಕನ್ನಡ ಮಾಧ್ಯಮ ಶಾಲೆಗೆ ತೆರಳಿ ಒಂದಷ್ಟು ಸಮಯ ಕಳೆದಿದ್ದಾರೆ. ಹಾಗೆಯೇ ಅಲ್ಲಿನ ಮಕ್ಕಳು ಮತ್ತು ಶಿಕ್ಷಕರ ಜೊತೆ ಅವರು ಮಾತುಕತೆ ನಡೆಸಿದ್ದಾರೆ.


COMMERCIAL BREAK
SCROLL TO CONTINUE READING

ನಟ-ನಿರ್ದೇಶಕ ರಿಷಬ್‌ ಶೆಟ್ಟಿ ಸಿನಿಮಾ ಮಾತ್ರವಲ್ಲದೇ ಒಂದಷ್ಟು ಸಾಮಾಜಿಕ ಕೆಲಸಗಳ ಮೂಲಕವೂ ಗಮನ ಸೆಳೆಯುತ್ತಿದ್ದಾರೆ. ಇವರು ಕನ್ನಡದ ಶಾಲೆಗಳ ಉಳಿವಿಗಾಗಿ ಪ್ರಯತ್ನಿಸುತ್ತಿದ್ದು, ಅದರ ಅಂಗವಾಗಿ ತಾವು ಓದಿದ ಕೆರಾಡಿ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ತೆಗೆದುಕೊಂಡಿದ್ದಾರೆ. ನಟ ರಿಷಬ್​ ಶೆಟ್ಟಿಯ ಈ ಕಾರ್ಯಕ್ಕೆ ಎಲ್ಲರೂ ಮೆಚ್ಚುಗೆ ಸೂಚಿಸುತ್ತಿದ್ದಾರೆ. 


ಇದನ್ನೂ ಓದಿ: ಧೂಳೆಬ್ಬಿಸಿದ ʻಕಾಟೇರʼ ಆಕ್ಷನ್ ಪ್ಯಾಕ್ಡ್ ಟ್ರೇಲರ್‌: ವಿಭಿನ್ನ ಪಾತ್ರದಲ್ಲಿ ಚಾಲೆಂಜಿಂಗ್‌ಸ್ಟಾರ್‌!


ರಿಷಬ್​ ಶೆಟ್ಟಿಯವರ ಸಾಮಾಜಿಕ ಕೆಲಸಗಳಿಗಾಗಿ ತಮ್ಮದೇ ಫೌಂಡೇಶನ್​ ಆರಂಭಿಸಿ, ‘ರಿಷಬ್​ ಶೆಟ್ಟಿ ಫೌಂಡೇಶನ್​’ ಮೂಲಕ ಅನೇಕ ಕಾರ್ಯಗಳು ಆಗುತ್ತಿವೆ. ಕನ್ನಡ ಶಾಲೆಯನ್ನು ಉಳಿಸುವ ಮತ್ತು ಬೆಳೆಸುವ ಕಾರ್ಯದಲ್ಲಿ ನಿರತರಾಗಿದ್ದು, ಕೆರಾಡಿಯ ಕನ್ನಡ ಮಾಧ್ಯಮ ಶಾಲೆಯನ್ನು ದತ್ತು ಪಡೆದಿದ್ದಕ್ಕಾಗಿ ರಿಷಬ್​ ಶೆಟ್ಟಿಗೆ ಊರಿನ ಹಿರಿಯರು ಮತ್ತು ಪ್ರಮುಖರು ಅಭಿನಂದನೆ ತಿಳಿಸಿದ್ದಾರೆ.


ನಟನಾಗಿ, ನಿರ್ದೇಶಕನಾಗಿ ಮತ್ತು ನಿರ್ಮಾಪಕನಾಗಿ ರಿಷಬ್​ ಶೆಟ್ಟಿ ಕನ್ನಡ ಚಿತ್ರರಂಗದಲ್ಲಿ ನೆಲೆ ಕಂಡುಕೊಂಡಿದ್ದು, ‘ಕಿರಿಕ್​ ಪಾರ್ಟಿ’, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’, ‘ಕಾಂತಾರ’ ರೀತಿಯ ಸಿನಿಮಾಗಳ ಮೂಲಕ  ಛಾಪು ಮೂಡಿಸಿದ್ದಾರೆ. ಈ ಹಿಂದೆ ರಿಷಬ್‌ ಶೆಟ್ಟಿ, ‘ಸರ್ಕಾರಿ ಹಿರಿಯ ಪ್ರಾಥಮಿಕ ಶಾಲೆ’ ಚಿತ್ರದಲ್ಲಿ ಕನ್ನಡ ಶಾಲೆಯ ಉಳಿವಿನ ಬಗ್ಗೆ ಸಂದೇಶ ನೀಡಿದವರು, ಇದೀಗ ರಿಯಲ್​ ಲೈಫ್‌ನಲ್ಲಿಯೂ ಅದೇ ಕೆಲಸವನ್ನು ಮಾಡುವ ಮೂಲಕ  ಅನೇಕರಿಗೆ ಮಾದರಿಯಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ