salman khan: ಹಲವು ದಿನಗಳಿಂದ ಸಾಮಾಜಿಕ ಜಾಲತಾಣಗಳಲ್ಲಿ ಸಿನಿಮಾ ತಾರೆಯರ ಬಾಲ್ಯದ ಫೋಟೋಗಳು ಹರಿದಾಡುತ್ತಿರುವುದು ಗೊತ್ತೇ ಇದೆ. ನೆಟಿಜನ್‌ಗಳು ತಮ್ಮ ನೆಚ್ಚಿನ ತಾರೆಯರ ವೈಯಕ್ತಿಕ ವಿಷಯಗಳು ಮತ್ತು ಬಾಲ್ಯದ ಫೋಟೋಗಳನ್ನು ಥ್ರೋಬ್ಯಾಕ್ ಟ್ರೆಂಡ್ ಆಗಿ ನೋಡಲು ಆಸಕ್ತಿ ತೋರಿಸುತ್ತಿದ್ದಾರೆ. 


COMMERCIAL BREAK
SCROLL TO CONTINUE READING

ಮೇಲಿನ ಫೋಟೋ ನೋಡಿದ್ದೀರಾ ಆ ಮಗು ಈಗ ಪ್ಯಾನ್ ಇಂಡಿಯಾದಲ್ಲಿ ಸೂಪರ್ ಸ್ಟಾರ್. ಅತಿ ಹೆಚ್ಚು ಸಂಭಾವನೆ ಪಡೆಯುತ್ತಿರುವ ನಾಯಕರಲ್ಲಿ ಇವರೂ ಒಬ್ಬರು. ಉದ್ಯಮದ ಕಿರೀಟವಿಲ್ಲದ ರಾಜಕುಮಾರ. ಹಲವು ಸೂಪರ್ ಹಿಟ್ ಚಿತ್ರಗಳಲ್ಲಿ ನಟಿಸಿ ಪ್ರೇಕ್ಷಕರ ಹೃದಯದಲ್ಲಿ ವಿಶೇಷ ಸ್ಥಾನ ಗಳಿಸಿದ್ದಾರೆ. ಅವರ ಆಸ್ತಿ ಮೌಲ್ಯ ಸುಮಾರು 2900 ಕೋಟಿ ರೂ. ಸದ್ಯ ಈ ನಾಯಕನಿಗೆ 58 ವರ್ಷ. ಆದರೂ ಅವರು ಇನ್ನೂ ಅವಿವಾಹಿತ.. ಅವರೇ ಬಾಲಿವುಡ್ ಸ್ಟಾರ್ ಹೀರೋ ಸಲ್ಮಾನ್ ಖಾನ್.


ಇದನ್ನೂ ಓದಿ-ಬಿಗ್‌ಬಾಸ್ ಮನೆಯಲ್ಲೇ ʼನಾನು 4 ತಿಂಗಳ ಗರ್ಭಿಣಿʼ ಎಂದು ಘೋಷಿಸಿದ ಖ್ಯಾತ ಸ್ಪರ್ಧಿ!


ಬಾಲಿವುಡ್‌ನ ಟಾಪ್‌ ನಟ ಸಲ್ಮಾನ್ ಖಾನ್ ಬ್ಯಾಚುಲರ್ ಆಗಿಯೇ ಮುಂದುವರೆದಿದ್ದಾರೆ. ನಟನ ನಿವ್ವಳ ಮೌಲ್ಯ ರೂ.2,900. ಸಲ್ಮಾನ್ ಖಾನ್ 1988 ರಲ್ಲಿ 'ಬಿವಿ ಹೋ ತೋ ಈಸಿ' ಚಿತ್ರದ ಮೂಲಕ ಸಿನಿರಂಗಕ್ಕೆ ಪಾದಾರ್ಪಣೆ ಮಾಡಿದರು. ಆದರೆ ಅವರು 1989 ರಲ್ಲಿ ಬಿಡುಗಡೆಯಾದ ಮೈನೆ ಪ್ಯಾರ್ ಕಿಯಾದಲ್ಲಿ ಮೊದಲ ಬಾರಿಗೆ ನಾಯಕರಾಗಿ ನಟಿಸಿದರು. ಈ ಸಿನಿಮಾ ಆ ಕಾಲಕ್ಕೆ ಭರ್ಜರಿ ಯಶಸ್ಸು ಕಂಡಿತ್ತು. ಅದರ ನಂತರ ಅವರು ಏಕ್ ಲಡ್ಕಾ ಏಕ್ ಲಡ್ಕಿ, ಚಂದ್ರ ಮುಖಿ, ಕುಚ್ ಕುಚ್ ಹೋತಾ ಹೈ, ದಬಾಂಗ್, ಏಕ್ ಥಾ ಟೈಗರ್, ಹಮ್ ದಿಲ್ ದೇ ಚುಕೆ ಸನಮ್, ತೇರೆ ನಾಮ್, ಟೈಗರ್ ಜಿಂದಾ ಹೈ, ಬಜರಂಗಿ ಬಾಯಿಜಾನ್, ಸುಲ್ತಾನ್, ಕಿಕ್, ಪ್ರೇಮ್ ರತನ್ ಧನ್ ಪಾಯೋ ಮುಂತಾದ ಅನೇಕ ಹಿಟ್‌ಗಳನ್ನು ನೀಡಿದರು.. 


ಸಲ್ಮಾನ್ ಖಾನ್ ಖ್ಯಾತ ಬಾಲಿವುಡ್ ಬರಹಗಾರ ಸಲೀಂ ಖಾನ್ ಮತ್ತು ಸುಶೀಲಾ ಚರಕ್ ಅವರ ಹಿರಿಯ ಮಗ. ನಟರಾದ ಅರ್ಬಾಜ್ ಖಾನ್ ಮತ್ತು ಸೊಹೈಲ್ ಖಾನ್ ಸಹೋದರರು. ಸಲ್ಮಾನ್‌ಗೆ ಅಲ್ವಿರಾ ಮತ್ತು ಅರ್ಪಿತಾ ಎಂಬ ಇಬ್ಬರು ತಂಗಿಯರಿದ್ದಾರೆ. ಸಲ್ಮಾನ್ ಖಾನ್ ನಟ ಮಾತ್ರವಲ್ಲದೆ ನಿರ್ಮಾಣ ಕ್ಷೇತ್ರದಲ್ಲೂ ಸಕ್ರಿಯರಾಗಿದ್ದಾರೆ. ಸಲ್ಮಾನ್ ಹಿಂದಿಯ ಜನಪ್ರಿಯ ರಿಯಾಲಿಟಿ ಶೋ ಬಿಗ್ ಬಾಸ್ ನ ನಿರೂಪಕರೂ ಹೌದು.


ಇದನ್ನೂ ಓದಿ-ಜನರ ತೆರಿಗೆ ದುಡ್ಡಿನಲ್ಲಿ ಬೆಳಗಾವಿಯಲ್ಲಿ ನಕಲಿ ಗಾಂಧಿಗಳ ವಿಜೃಂಭಣೆ; ಹೆಚ್‌.ಡಿ.ಕುಮಾರಸ್ವಾಮಿ ಕಿಡಿ


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.