ಆ್ಯಂಕರ್ ಅನುಶ್ರೀಗೆ ಸ್ಪೆಷಲ್ ಗಿಫ್ಟ್ ಕೊಟ್ಟ ನಟ ಶಿವರಾಜ್ ಕುಮಾರ್!
ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ನಟ ಶಿವರಾಜ್ಕುಮಾರ್ ಜಡ್ಜ್ ಆಗಿದ್ದಾರೆ. ಇದೀಗ ಶಿವಣ್ಣನಿಂದ ಅನುಶ್ರೀಗೆ ಗಿಫ್ಟ್ ಒಂದು ಸಿಕ್ಕಿದೆ.
ಕನ್ನಡ ಕಿರುತೆರೆ ಲೋಕದಲ್ಲಿ ಟಾಪ್ ನಿರೂಪಕಿ ಆಗಿ ಮಿಂಚುತ್ತಿದ್ದಾರೆ ಆ್ಯಂಕರ್ ಅನುಶ್ರೀ. ಅನೇಕ ಮನೋರಂಜನಾತ್ಮಕ ಕಾರ್ಯಕ್ರಮಗಳನ್ನು ಅನುಶ್ರೀ ನಡೆಸಿಕೊಡುತ್ತಾರೆ. ಜೀ ಕನ್ನಡ ಚಾನೆಲ್‌ನಲ್ಲಿ ಪ್ರಸಾರವಾಗುವ ʻಡ್ಯಾನ್ಸ್ ಕರ್ನಾಟಕ ಡ್ಯಾನ್ಸ್ʼ ಕಾರ್ಯಕ್ರಮ ನಡೆಸಿಕೊಡುತ್ತಿದ್ದಾರೆ. ಈ ಶೋನಲ್ಲಿ ನಟ ಶಿವರಾಜ್ಕುಮಾರ್ ಜಡ್ಜ್ ಆಗಿದ್ದಾರೆ. ಇದೀಗ ಶಿವಣ್ಣನಿಂದ ಅನುಶ್ರೀಗೆ ಗಿಫ್ಟ್ ಒಂದು ಸಿಕ್ಕಿದೆ.
ಇದನ್ನೂ ಓದಿ: "ನಿಮ್ಮ ಸಂತಸದ ಕ್ಷಣದಲ್ಲಿ ನಾವು ಇರಲಿಲ್ಲ": ಆಲಿಯಾ-ರಣಬೀರ್‌ಗೆ ಶುಭಾಶಯ ತಿಳಿಸಿದ ಕಾಂಡೋಮ್ ಕಂಪನಿ
ಶಿವರಾಜ್ ಕುಮಾರ್ ತಾವು ಧರಿಸಿದ್ದ ಜಾಕೆಟ್ ಅನ್ನು ಅನುಶ್ರೀಗೆ ಉಡುಗೊರೆಯಾಗಿ ಕೊಟ್ಟಿದ್ದಾರೆ. ಅನುಶ್ರೀಗೆ ಇಷ್ಟವಾದ ಜಾಕೆಟ್ ಮೇಲೆ ಶಿವರಾಜ್ ಕುಮಾರ್, ''ಪ್ರೀತಿಪೂರ್ವಕವಾಗಿ ಪ್ರೀತಿಯ ಗೆಳತಿ ಅನುಗೆ'' ಎಂದು ಬರೆದು, ತಮ್ಮ ಕೈಯಾರೆ ತೊಡಿಸಿದ್ದಾರೆ. ಈ ವಿಡಿಯೋವನ್ನು ಅನುಶ್ರೀ ತಮ್ಮ ಇನ್‌ಸ್ಟಾಗ್ರಾಂ ಖಾತೆಯಲ್ಲಿ ಹಂಚಿಕೊಂಡಿದ್ದು, ಸಂತಸ ವ್ಯಕ್ತಪಡಿಸಿದ್ದಾರೆ.
"ಇದು ಯಾವ ಜನ್ಮದ ಪುಣ್ಯ. ಕಳೆದ ವಾರ dkd ಶೂಟ್ ವೇಳೆ ಹೇಳಿದೆ ಅಣ್ಣ ಜಾಕೆಟ್ ಸಕ್ಕತ್ ಆಗಿದೆ ಅಂತ. ಆಯ್ತು ಬಿಡಮ್ಮ ನಿಂಗೆ ಕೊಡ್ತೀನಿ ಅಂದ್ರು. ನಾನು ಸುಮ್ನೆ ಹೇಳಿರ್ತಾರೆ ಅನ್ಕೊಂಡೆ. ಆದ್ರೆ ಎಷ್ಟೇ ಆದ್ರೂ ಅಣ್ಣಾವರ ರಕ್ತ ಅಲ್ವಾ, ಆಕಾಶ ನೋಡದ ಕೈ ಪ್ರೀತಿ ಹಂಚಿದ ಕೈಗಳು ಅದು. ಹೊರಡುವ ಮುನ್ನ, ಜಾಕೆಟ್ ಬಿಚ್ಚಿ ಅದರ ಮೇಲೆ "With lots of love to dearest friend Anu” ಅಂತ ಬರೆದು ಸಹಿ ಹಾಕಿ, ತಮ್ಮ ಕೈಯಾರೆ ಜಾಕೆಟ್ ತೊಡಿಸಿ, ಮತ್ತೊಮ್ಮೆ ಮಮತೆ ಮೆರೆದ ಮುತ್ತಣ್ಣ. Thanku.. ನಿಮ್ಮ ರೂಪದಲ್ಲಿ ನಮ್ಮ ಪರಮಾತ್ಮನನ್ನು ಕಾಣ್ತಿದೀವಿ.." ಎಂದು ಅನುಶ್ರೀ ಬರೆದುಕೊಂಡಿದ್ದಾರೆ.
ಇದನ್ನೂ ಓದಿ: Vikrant Rona: ʻವಿಕ್ರಾಂತ್ ರೋಣʼನ ಬಗ್ಗೆ ಹೀಗಂದ್ರು ಅಮಿತಾಬ್ ಬಚ್ಚನ್!
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.