Siddharth : ನಟ ಸಿದ್ಧಾರ್ಥ್ ದಕ್ಷಿಣ ಭಾರತ ಚಿತ್ರರಂಗದ ಪ್ರಮುಖ ನಟರಲ್ಲಿ ಒಬ್ಬರು. ತಮಿಳು ಮತ್ತು ತೆಲುಗು ಚಿತ್ರರಂಗದಲ್ಲಿ ಹಿಟ್‌ ಸಿನಿಮಾಗಳಲ್ಲಿ ಅಭಿನಯಿಸಿರುವ ಸಿದ್ಧುಗೆ ಅಪಾರ ಅಭಿಮಾನಿ ಬಳಗ ಇದೆ. ನೇರವಾಗಿ ಮಾತನಾಡುವ ಸಿದ್ಧಾರ್ಥ ಅನೇಕ ವಿವಾದಗಳನ್ನು ಮೈಮೇಲೆ ಎಳೆದುಕೊಂಡಿದ್ದರು. ಇದೀಗ ಹಿಂದಿ ಏರಿಕೆ  ವಿರುದ್ಧ ಗುಡುಗಿರುವ ಅವರ ಪೋಸ್ಟ್‌ ಒಂದು ಸೋಷಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದೆ.


COMMERCIAL BREAK
SCROLL TO CONTINUE READING

ನಟ ಸಿದ್ದಾರ್ಥ್ ತಮ್ಮ ಪೋಷಕರೊಂದಿಗೆ ಕೊಡೈಕೆನಾಲ್‌ಗೆ ಪ್ರವಾಸಕ್ಕೆ ತೆರಳಿದ್ದರು ಎನ್ನಲಾಗಿದೆ. ಆ ಸಮಯದಲ್ಲಿ, ಸಿಆರ್‌ಪಿಎಫ್ ಅಧಿಕಾರಿಗಳು ಮಧುರೈ ವಿಮಾನ ನಿಲ್ದಾಣದಲ್ಲಿ ಇವರಿಗೆ ಹಿಂದಿಯಲ್ಲಿ ಮಾತನಾಡುವಂತೆ ಒತ್ತಾಯಿಸಿದ್ದರು ಎಂದು ಹೇಳಲಾಗಿದೆ. ಅಲ್ಲದೆ, ಸಿದ್ಧಾರ್ಥ್ ಮತ್ತು ಅವರ ಪೋಷಕರ ಜೊತೆ ಅಧಿಕಾರಿಗಳು ಕಟುವಾಗಿ ವರ್ತಿಸಿದ್ದಾರೆ ಎಂದು ತಿಳಿದು ಬಂದಿದೆ. ಈ ಕುರಿತು ಸ್ವತಃ ಸಿದ್ಧಾರ್ಥ್ ತಮ್ಮ ಇನ್ಸ್ಟಾಗ್ರಾಮ್ ಸ್ಟೋರಿಯಲ್ಲಿ ಪೋಸ್ಟ್ ಮೂಲಕ ಅಸಮಾಧಾನ ಹೊರಹಾಕಿದ್ದಾರೆ.


ಇದನ್ನೂ ಓದಿ:ವರುಣ್ ಕಟ್ಟೀಮನಿ ನಿರ್ದೇಶನದ ಜವಾರಿ ಭಾಷೆಯ ‘ಬಯಲು ಸೀಮೆ’ ರಿಲೀಸ್ ಗೆ ರೆಡಿ


[[{"fid":"274377","view_mode":"default","fields":{"format":"default","field_file_image_alt_text[und][0][value]":false,"field_file_image_title_text[und][0][value]":false},"type":"media","field_deltas":{"1":{"format":"default","field_file_image_alt_text[und][0][value]":false,"field_file_image_title_text[und][0][value]":false}},"link_text":false,"attributes":{"class":"media-element file-default","data-delta":"1"}}]]


ಸಿದ್ಧಾರ್ಥ್‌ ತಮ್ಮ ಪೋಸ್ಟ್‌ನಲ್ಲಿ, ʼಖಾಲಿ ಇದ್ದ ಮಧುರೈ ವಿಮಾನ ನಿಲ್ದಾಣದಲ್ಲಿ ಸಿಆರ್‌ಪಿಎಫ್ ಅಧಿಕಾರಿಗಳು ನಮಗೆ 20 ನಿಮಿಷಗಳ ಕಾಲ ಕಿರುಕುಳ ನೀಡಿದ್ದಾರೆ. ನನ್ನ ವಯಸ್ಸಾದ ಪೋಷಕರ ಜೇಬಿನಿಂದ ನಾಣ್ಯಗಳನ್ನು ತೆಗೆಯುವಂತೆ ಒತ್ತಾಯಿಸಿದರು. ನಾವು ಅವರನ್ನು ಇಂಗ್ಲಿಷ್‌ನಲ್ಲಿ ಮಾತನಾಡಲು ಕೇಳಿದೆವು, ಆದರೆ ಅವರು ಹಿಂದಿಯಲ್ಲಿ ಮಾತನಾಡುತ್ತಿದ್ದರು. ಹಿಂದಿಯಲ್ಲಿ ಮಾತನಾಡಲು ನಾವು ನಿರಾಕರಿಸಿದ್ದೇವೆ, ಅದಕ್ಕಾಗಿ ಅವರು ನಮ್ಮೊಂದಿಗೆ ತುಂಬಾ ಕಟುವಾಗಿ ವರ್ತಿಸಿದರುʼ ಎಂದು ದೂರಿದ್ದಾರೆ. ಅಲ್ಲದೆ, ಹಿಂದಿ ಏರಿಕೆ ಕುರಿತು ಪ್ರತಿಭಟನೆ ಮಾಡಿದ್ರೆ, ಭಾರತದಲ್ಲಿ ಹೀಗೇ ಇರುತ್ತೆ ಅಂತಾರೆ. ನಿರುದ್ಯೋಗಿಗಳೇ ಶಕ್ತಿ ಪ್ರದರ್ಶನ ಮಾಡುತ್ತಾರೆ ಎಂದು ಪೋಸ್ಟ್ ಮಾಡಿದ್ದಾರೆ.


ಇದೀಗ ಸಿದ್ಧಾರ್ಥ್ ಅವರ ಪೋಸ್ಟ್ ಚರ್ಚೆಗೆ ಗುರಿಯಾಗಿದೆ. ಅನೇಕ ಸೆಲೆಬ್ರಿಟಿಗಳು ಸಿದ್ದು ಪೋಸ್ಟ್‌ಗೆ ಬೆಂಬಲ ನೀಡಿದ್ದಾರೆ. ಪ್ರಸ್ತುತ ಸಿದ್ಧಾರ್ಥ್‌, ಶಂಕರ್ ನಿರ್ದೇಶನದ ಕಮಲ್ ಹಾಸನ್ ಅಭಿನಯದ 'ಇಂಡಿಯನ್ 2' ಚಿತ್ರದಲ್ಲಿ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ ಎಂದು ಹೇಳಲಾಗಿದೆ. ಆದರೆ ಇಂಡಿಯನ್‌ 2 ಚಿತ್ರತಂಡ ಈ ಕುರಿತು ಯಾವುದೇ ಮಾಹಿತಿಯನ್ನು ಬಿಡುಗಡೆ ಮಾಡಿಲ್ಲ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.