ಬೈಕ್ ಮೇಲೆ ಬೆತ್ತಲೆಯಾಗಿ ಕುಳಿತು ಪ್ರಯಾಣಿಸಿದ ಸ್ಟಾರ್ ನಟ..! ಇಷ್ಟು ಮಾಡೋಕೆ.. ಕೋಟಿ.. ಕೋಟಿ.. ಹಣ
Entertainment news : ನಟ-ನಟಿಯರು ಸಿನಿಮಾಗಾಗಿ ಮತ್ತು ಚಿತ್ರದಲ್ಲಿನ ಪಾತ್ರಕ್ಕಾಗಿ ಎನ್ ಬೇಕಾದರೂ ಮಾಡ್ತಾರೆ.. ಅದರಿಂದಲೇ ಅವರು ಸ್ಟಾರ್ ಪಟ್ಟ ಪಡೆಯುತ್ತಾರೆ.. ಈ ಪೈಕಿ ಸ್ಟಾರ್ ನಟರೊಬ್ಬರು ನಡು ರಸ್ತೆಯಲ್ಲಿ ಬೆತ್ತಲೆಯಾಗಿ ಓಡಿ.. ನಂತರ ಬೈಕ್ ಮೇಲೆ ಪ್ರಯಾಣಿಸಿದ್ದರು.. ಅಷ್ಟಕ್ಕೂ ಆ ನಟ ಯಾರು..? ಬೆತ್ತಲಾಗಿದ್ದು ಏಕೆ..? ಬನ್ನಿ ನೋಡೋಣ..
Actor Siddharth boys movie : ಮಣಿರತ್ನಂ ಬಳಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದ ನಟ ಸಿದ್ಧಾರ್ಥ್, ಶಂಕರ್ ನಿರ್ದೇಶನದ ʼಬಾಯ್ಸ್ʼ ಎಂಬ ತಮಿಳು ಚಿತ್ರದ ಮೂಲಕ ಹೀರೋ ಆದರು. ತೆಲುಗಿನಲ್ಲಿ ʼನುವುವೊಸ್ತಾನಂಟೆ ನೆನು ಒದ್ದಂಟಾನಾʼ ಮತ್ತು ಬೊಮ್ಮರಿಲ್ಲು ಸೇರಿದಂತೆ ಮುಂತಾದ ಯಶಸ್ವಿ ಚಿತ್ರಗಳಲ್ಲಿ ನಟಿಸಿದ್ದಾರೆ.
'ಬಾಯ್ಸ್' ಚಿತ್ರದಲ್ಲಿ ಪ್ರಮುಖ ಪಾತ್ರವನ್ನು ನಿರ್ವಹಿಸಿದ ಸಿದ್ಧಾರ್ಥ್ ಅವರ ನಟನೆಯನ್ನ ಗುರುತಿಸಿದ ತೆಲುಗು ನಿರ್ಮಾಪಕ ಎಂಎಂಎಸ್ ರಾಜು ಅವರು 'ನುವುವೊಸ್ತಾನಂಟೆ ನೆನು ಒದ್ದಂಟಾನಾ' ಮೂಲಕ ತೆಲುಗು ಪ್ರೇಕ್ಷಕರಿಗೆ ಪರಿಚಯಿಸಿದರು. ನಟ ಮತ್ತು ನೃತ್ಯ ನಿರ್ದೇಶಕ ಪ್ರಭುದೇವ ನಿರ್ದೇಶಕರಾದದ್ದು ಈ ಚಿತ್ರದ ಮೂಲಕ.
ಇದನ್ನೂ ಓದಿ:ಎಂಥಾ ಚೆಲುವು..! ಈ ನಟಿಯ ಅಂದವನ್ನ ನೋಡದವರ ಕಣ್ಣುಗಳಿದ್ದರೂ ವೇಸ್ಟ್ ಗುರು.. ಫೋಟೋಸ್ ಇಲ್ಲಿವೆ..
ತೆಲುಗಿನ ಚುಕ್ಕಲ್ಲೋ ಚಂದ್ರುಡು, ಬೊಮ್ಮರಿಲ್ಲು, ಆಟ, ಕಡ್ಮ್ ಲೈಕ್-ಕೊಂಡ್ಮೇಶ್ ದುಕ್ತಿ, ಓಯ್, ಅನಗನಾಗ ಓ ಧಿರುಡು, ಬಾವಾ, ಓ ಮೈ ಫ್ರೆಂಡ್, ಜಬರ್ದಸ್ತ್ ಮುಂತಾದ ಚಿತ್ರಗಳಲ್ಲಿ ನಟಿಸಿದ್ದ ತಮಿಳು ಮತ್ತು ತೆಲುಗು ಸಿನಿ ಪ್ರೇಕ್ಷಕರಿಗೆ ಹತ್ತಿರವಾದರು.
ಅಂದಹಾಗೆ, ಸಿದ್ಧಾರ್ಥ್ ಒಂದು ಸಿನಿಮಾದ ಶೂಟಿಂಗ್ ವೇಳೆ ಏನಾಯಿತು ಎಂಬುದು ಇಂದಿಗೂ ಚೆನ್ನೈ ಜನತೆಗೆ ನೆನಪಿದೆ. ಹೌದು.. ಡೈರೆಕ್ಟರ್ ಶಂಕರ್ ಬಗ್ಗೆ ಹೆಚ್ಚು ಹೇಳಬೇಕಿಲ್ಲ.. ಸಿನಿಮಾಗಾಗಿ ಎಷ್ಟಾದ್ರೂ ಖರ್ಚು ಮಾಡ್ತಾರೆ.. ಕಥೆಗೆ ತಕ್ಕಂತೆ ಎಷ್ಟೇ ಕಷ್ಟವಾದ್ರೂ ಬೇಕಿರುವ ದೃಶ್ಯವನ್ನ ಸೃಷ್ಟಿ ಮಾಡ್ತಾರೆ..
ಇದನ್ನೂ ಓದಿ:ಕಾಲಿನ ಸ್ಪರ್ಶ ಜ್ಞಾನ, ಬೆನ್ನು ಹುರಿ..! ಅಸಲಿಗೆ ದರ್ಶನ್ ಆರೋಗ್ಯ ಸ್ಥಿತಿ ಕೇಳಿದ್ರೆ ಕಣ್ಣೀರು ಹಾಕ್ತೀರಾ..
ಅದರಂತೆ.. ಶಂಕರ್ ಅವರು ʼಬಾಯ್ಸ್ʼ ಚಿತ್ರದಲ್ಲಿ ಸಿದ್ಧಾರ್ಥ.. ಜೆನಿಲಿಯಾ ಪ್ರೀತಿಗಾಗಿ ಬೀದಿಗಳಲ್ಲಿ ಬೆತ್ತಲೆಯಾಗಿ ಓಡುವ ದೃಶ್ಯವಿದೆ. ಈ ದೃಶ್ಯ ಶೂಟ್ ಮಾಡೋಕೆ.. ಸಾವಿರಾರು ರೂಪಾಯಿ ಖರ್ಚು ಮಾಡಿ ಚೆನ್ನೈನ ಮೌಂಟ್ ರೋಡ್ ಬಂದ್ ಮಾಡಲಾಗಿತ್ತು.
ಈ ಸೀನ್ ಸೃಷ್ಟಿಗೆ ಮಧ್ಯಾಹ್ನ 2 ಗಂಟೆಯಿಂದ ಸಂಜೆ 6 ಗಂಟೆಯವರೆಗೆ 15 ದಿನಗಳ ಕಾಲ ಲಕ್ಷಗಟ್ಟಲೆ ಖರ್ಚು ಮಾಡಲಾಗಿತ್ತು.. ನೂರಾರು ವಾಹನಗಳನ್ನು ಬಾಡಿಗೆಗೆ ಪಡೆದು ಸಾರ್ವಜನಿಕರಿಗೆ ಕಷ್ಟವಾಗದಂತೆ ಕ್ರಮಕೈಗೊಳ್ಳಲಾಗಿತ್ತು. ಇದರ ಒಟ್ಟು ವೆಚ್ಚ ಒಂದು ಕೋಟಿ ರೂಪಾಯಿಗೂ ಹೆಚ್ಚು. ಅಂದರೆ ಬೆತ್ತಲೆಯಾಗಿ ಓಡೋಕೆ.. ಕೋಟಿ.. ಕೋಟಿ ಖರ್ಚು ಮಾಡಬೇಕಾಯಿತು..
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ