`ಆಸ್ಪತ್ರೆಯಲ್ಲಿ ನಾನು ಬೆತ್ತಲಾಗಿದ್ದಾಗಲೂ ವೈದ್ಯರು, ನರ್ಸ್ ವಿಡಿಯೋ ತೆಗೆದಿದ್ರು`: ನಟ ಸಿದ್ದಾರ್ಥ್ ಹೇಳಿಕೆ
Actor Siddharth Statement on Social Media: ನಟ ಸಿದ್ದಾರ್ಥ್ ಹೈದರಾಬಾದ್’ನಲ್ಲಿ ಭಾವುಕರಾಗಿದ್ದರು. ಸಿದ್ದಾರ್ಥ್ ನಿರ್ಮಿಸಿ ನಟಿಸಿರುವ `ಚಿಕ್ಕು` ಚಿತ್ರದ ಸುದ್ದಿಗೋಷ್ಠಿ ಅದಾಗಿತ್ತು.
Actor Siddharth Statement on Social Media: ಇತ್ತೀಚೆಗೆಯಷ್ಟೇ ಕಾವೇರಿ ಹೋರಾಟದ ಸಂದರ್ಭದಲ್ಲಿ ಸಿನಿಮಾ ಸುದ್ದಿಗೋಷ್ಠಿ ನಡೆಸಿದ್ದ ತಮಿಳು ನಟ ಸಿದ್ದಾರ್ಥ್ ವಿರುದ್ಧ ಕೆಲ ಸಂಘಟನೆಗಳು ಆಕ್ರೋಶ ಹೊರಹಾಕಿದ್ದವು. ಅಷ್ಟೇ ಅಲ್ಲದೆ, ಸುದ್ದಿಗೋಷ್ಠಿಗೆ ಅಡ್ಡಿ ಪಡಿಸಿದ್ದರೂ ಕೂಡ. ಇದೇ ವಿಚಾರ ಬಗ್ಗೆ ಮಾತನಾಡಿದ ನಟ ಸಿದ್ದಾರ್ಥ್ ಹೈದರಾಬಾದ್’ನಲ್ಲಿ ಭಾವುಕರಾಗಿದ್ದರು. ಸಿದ್ದಾರ್ಥ್ ನಿರ್ಮಿಸಿ ನಟಿಸಿರುವ 'ಚಿಕ್ಕು' ಚಿತ್ರದ ಸುದ್ದಿಗೋಷ್ಠಿ ಅದಾಗಿತ್ತು.
ಇದನ್ನೂ ಓದಿ: ವಿರಾಟ್ ಅಂದ್ರೆ ಇಷ್ಟನಾ? ಇಷ್ಟ ಇಲ್ವಾ?... ಗೌತಮ್ ಗಂಭೀರ್ ಕೊಟ್ಟ ಉತ್ತರ ಏನು ಗೊತ್ತಾ?
ಇನ್ನು ಈ ಘಟನೆಗೆ ವಿಷಾದ ತೋರಿದ ನಟ ಶಿವರಾಜ್‌ಕುಮಾರ್ ಕ್ಷಮೆ ಕೂಡ ಕೇಳಿದ್ದರು. ಇನ್ನು ಫಿಲ್ಮ್ ಕಂಪಾನಿಯನ್ ಸಂದರ್ಶನದಲ್ಲಿ ಮಾತನಾಡಿದ ಸಿದ್ದಾರ್ಥ್, ಸೋಶಿಯಲ್ ಮೀಡಿಯಾಗಳ ಬಗ್ಗೆ ಶಾಕಿಂಗ್ ಹೇಳಿಕೆ ನೀಡಿದ್ದಾರೆ.
"ನಾನು ಸಿನಿಮಾ ಕಾರ್ಯಕ್ರಮಕ್ಕೆ ಬಂದರೆ ಮಾತನಾಡೋದು ನನ್ನ ಕೆಲಸ. ಶೂಟಿಂಗ್’ಗೆ ಹೋದರೆ ಕ್ಯಾಮರಾ ಮುಂದೆ ನಟಿಸೋದು ನನ್ನ ಕೆಲಸ. ಆದರೆ ದಿನದ 24 ಗಂಟೆ ಕಾಮೆಂಟ್’ಗಳಿಗೆ ಉತ್ತರಿಸುತ್ತಿರುವುದು ನನ್ನ ಕೆಲಸ ಅಲ್ಲ. ನಾನು ಸಿನಿಮಾ ಪ್ರಚಾರಕ್ಕೆ ಬಂದರೆ ನನ್ನ ಸಿನಿಮಾ ಮತ್ತು ನನ್ನ ವೃತ್ತಿ ಬಗ್ಗೆ ಮಾತನಾಡುತ್ತೇನೆ. ನೀವು ಏನೇ ಪ್ರಶ್ನೆ ಕೇಳಿದರೂ ನಾನು ಉತ್ತರಿಸುತ್ತೇನೆ. ಆದರೆ ಉಳಿದ ವಿಚಾರಗಳ ಬಗ್ಗೆ ಮಾತನಾಡಲು ನಾನು ಬಂದಿಲ್ಲ. ಏರ್‌ಪೋರ್ಟ್‌ಗೆ ಹೋದರೆ ಏರ್‌ಪೋರ್ಟ್ ಲುಕ್ ಅಂತ ಹೇಳ್ತಾರೆ. ಏರ್‌ಪೋರ್ಟ್’ನಲ್ಲಿ ನನ್ನ ಫೋಟೋ ತೆಗೆಯಬೇಡಿ. ಅದರಿಂದ ನನಗೆ 1 ರೂ. ಕೂಡ ಸಿಗಲ್ಲ, ಜೊತೆಗೆ ನನ್ನ ಅಭಿಮಾನಿಗಳು ಅದನ್ನು ಇಷ್ಟಪಡಲ್ಲ" ಎಂದಿದ್ದಾರೆ
"ಇಂತಹ ಫೋಟೋಗಳನ್ನೆಲ್ಲಾ ಬಳಸಿಕೊಂಡು ಕೆಲವರು ಬ್ಯುಸಿನೆಸ್ ಮಾಡ್ತಾರೆ. ನೀವು ಕಲಾವಿದರು. ನೀನು ಎಲ್ಲೇ ಇದ್ದರೂ ಜನರೊಟ್ಟಿಗೆ ಫೋಟೊ ಕ್ಲಿಕ್ಕಿಸಿಕೊಳ್ಳುವುದು ನಿಮ್ಮ ಜವಾಬ್ದಾರಿ ಅಂತಾ ಕೆಲವರು ಹೇಳ್ತಾರೆ. ಆದರೆ ಅದು ತಪ್ಪು. ಏಕೆಂದರೆ ಒಂದು ವಿಚಾರ ಹೇಳ್ತೀನಿ. ನಾನು ಆಸ್ಪತ್ರೆಯಲ್ಲಿ ಬೆತ್ತಲಾಗಿದ್ದಾಗ ಆಸ್ಪತ್ರೆ ವೈದ್ಯರು, ನರ್ಸ್’ಗಳು ಫೋಟೊ ಕ್ಲಿಕ್ಕಿಸಿದ್ದಾರೆ. ಸರ್ ಒಂದು ಫೋಟೊ ಪ್ಲೀಸ್ ಅಂತ ಬರ್ತಾರೆ. ನಾನು ಬಟ್ಟೆ ಇಲ್ಲದೇ ಬೆತ್ತಲಾಗಿ ಎಕ್ಸ್‌ರೇ ತೆಗೆಸುತ್ತಿದ್ದರೆ ಆ ಸಮಯದಲ್ಲೂ ಫೋಟೊಗಳನ್ನು ತೆಗೆದುಕೊಂಡಿದ್ದಾರೆ. ನರ್ಸ್'ಗಳು ವಿಡಿಯೋ ಮಾಡಿದ್ದಾರೆ. ಏನ್ ಮಾಡ್ತಿದ್ದೀರಾ ನೀವು? ಅಂತ ಕೇಳ್ದೆ… ಈ ಘಟನೆ ಈಗಿನದ್ದಲ್ಲ, ಹಲವು ವರ್ಷಗಳ ಹಿಂದೆ ನಡೆದಿತ್ತು" ಎಂದಿದ್ದಾರೆ.
ಇದನ್ನೂ ಓದಿ: ತೆರೆಯಿತು 28ರ ಹರೆಯದ ಆಟಗಾರನ ಅದೃಷ್ಟದ ಬಾಗಿಲು..! ಟೀಂ ಇಂಡಿಯಾಗೆ ಪದಾರ್ಪಣೆ ಮಾಡಿದ ಆಲ್’ರೌಂಡರ್
"ಸರಿಯಾಗಿ ಫೋನ್ ಬಳಸಲು ಗೊತ್ತಿಲ್ಲದವರ ಕೈಗೆ ಮೊಬೈಲ್ ಕೊಟ್ಟರೆ ಕೆಟ್ಟದಾಗಿಯೇ ಬಳಕೆ ಆಗುತ್ತದೆ. ಸೋಶಿಯಲ್ ಮೀಡಿಯಾ ಅಂದ್ರೆ ನನಗೆ ಭಯ ಹುಟ್ಟಿಸುತ್ತದೆ. ಅಂತ್ಯಕ್ರಿಯೆಗೆ ಹೋದಾಗಲೂ ಫೋಟೊ, ವಿಡಿಯೋ ಮಾಡುತ್ತಾರೆ. ಅದು ವಿಚಿತ್ರವಾದ ಭಯವನ್ನುಂಟು ಮಾಡುತ್ತದೆ" ಎಂದಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ