ವಿಭಿನ್ನ ಬಗೆಯ ಪಾತ್ರಗಳ ಮೂಲಕ, ತಮ್ಮ ಅಮೋಘ ನಟನೆಯಿಂದ ಕನ್ನಡ ಚಿತ್ರಪ್ರೇಮಿಗಳನ್ನು ರಂಜಿಸುತ್ತಿರುವ ಚಿನ್ನಾರಿ ಮುತ್ತ ವಿಜಯ್ ರಾಘವೇಂದ್ರ ನಟಿಸುತ್ತಿರುವ ರಾಘು ಸಿನಿಮಾದ ಮುಹೂರ್ತ ಇವತ್ತು ಬೆಂಗಳೂರಿನ ರಾಮಾಂಜನೇಯ ಗುಡ್ಡ ದೇವಸ್ಥಾನದಲ್ಲಿ ಸರಳವಾಗಿ ನೆರವೇರಿತು. ರಾಘು ಸಿನಿಮಾಗೆ ಕ್ಲ್ಯಾಪ್ ಮಾಡುವ ಮೂಲಕ ಅಣ್ಣನ ಸಿನಿಮಾಗೆ ತಮ್ಮ ಶ್ರೀಮುರುಳಿ ಸಾಥ್ ನೀಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದರು.


COMMERCIAL BREAK
SCROLL TO CONTINUE READING

ಇದನ್ನೂ ಓದಿ:


ಬಳಿಕ ಮಾತನಾಡಿದ ವಿಜಯ್  ರಾಘವೇಂದ್ರ, ಎಲ್ಲರೂ ಪ್ರೀತಿಯಿಂದ ಬಂದಿದ್ದೀರಾ. ಖುಷಿಯಾಗ್ತಿದೆ. ಆಕ್ಷನ್ ಥ್ರಿಲ್ಲರ್ ಸಿನಿಮಾಗೆ ಶುಭ ಹಾರೈಸೋದಿಕ್ಕೆ ಶ್ರೀಮುರಳಿ ಬಂದಿದ್ದಾರೆ. ಇಡೀ ತಂಡದ ಮೇಲೆ ನಿಮ್ಮ ಸಹಕಾರ ಇರಲಿ ಎಂದರು. 


ಶ್ರೀಮುರಳಿ, ಟೈಟಲ್ ತುಂಬಾ ಚೆನ್ನಾಗಿದೆ. ಇಡೀ ತಂಡ ಎನರ್ಜಿಟಿಕ್ ಟೀಂ. ನಮ್ಮಣ್ಣನಿಗೆ ಒಳ್ಳೆದಾಗಲಿ. ಒಳ್ಳೆ ಸಿನಿಮಾ ಮಾಡಿದಾಗ ಅಭಿಮಾನಿದೇವರುಗಳು ಇಷ್ಟಪಡುತ್ತಾರೆ. ಇಡೀ ತಂಡಕ್ಕೆ ಒಳ್ಳೆದಾಗಲಿ ಎಂದರು.


ಆನ, ಬ್ಯಾಂಗ್ ಸಿನಿಮಾಗಳಲ್ಲಿ ಅಸೋಸಿಯೇಟ್ ಡೈರೆಕ್ಟರ್ ಆಗಿ ಕೆಲಸ ಮಾಡಿರುವ ಆನಂದ್ ರಾಜ್ ರಾಘು ಸಿನಿಮಾಕ್ಕೆ ಆಕ್ಷನ್ ಕಟ್ ಹೇಳಿದ್ದು, ಇದು ಇವರ ನಿರ್ದೇಶನದ ಚೊಚ್ಚಲ ಸಿನಿಮಾವಾಗಿದೆ. ಅಂದಹಾಗೇ ರಾಘು ಥ್ರಿಲ್ಲರ್ ಎಕ್ಸ್ ಪಿರಿಮೆಂಟಲ್ ಸಿನಿಮಾವಾಗಿದ್ದು, ಕನ್ನಡದಲ್ಲಿ ಇದೊಂದು ಹೊಸಬಗೆಯಸಿನಿಮಾವಾಗಿದ್ದು, ವಿಜಯ್ ರಾಘವೇಂದ್ರ ಹಿಂದೆಂದೂ ಮಾಡದ ವಿಭಿನ್ನ ಪಾತ್ರವೊಂದಕ್ಕೆ ಜೀವ ತುಂಬಲಿದ್ದಾರೆ. .


ಇದನ್ನೂ ಓದಿ:


ಡಿಕೆಎಸ್ ಸ್ಟುಡಿಯೋಸ್ ಮತ್ತು ಕೋಟ ಫಿಲ್ಮಂ ಫ್ಯಾಕ್ಟರಿ ಬ್ಯಾನರ್ ನಡಿ ರಣ್ವೀತ್‌ ಶಿವಕುಮಾರ್‌, ಅಭಿಷೇಕ್‌ ಕೋಟ ಚಿತ್ರಕ್ಕೆ ಬಂಡವಾಳ ಹೂಡುತ್ತಿದ್ದು, ಬ್ಯಾಂಗ್', 'ಫ್ಯಾಮಿಲಿ ಪ್ಯಾಕ್' ಖ್ಯಾತಿಯ ಉದಯ್‌ ಲೀಲಾ ಕ್ಯಾಮೆರಾ ವರ್ಕ್,  ಸೂರಜ್‌ ಜೋಯಿಸ್‌ ಸಂಗೀತ ಸಂಯೋಜನೆ, ಅಥರ್ವ್ ಆರ್ಯ ಸಂಭಾಷಣೆ ಬರೆಯುತ್ತಿದ್ದಾರೆ. ಫಸ್ಟ್ ಲುಕ್ ಮೂಲಕ ನಿರೀಕ್ಷೆ ಹೆಚ್ಚಿಸಿರುವ ರಾಘು‌ ಬಳಗ ಇವತ್ತಿನಿಂದ  ಶೂಟಿಂಗ್ ಅಖಾಡಕ್ಕೆ ಧುಮುಕಲಿದೆ.


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.