Sundar raj on Chiranjeevi sarja death : ನಟ ಚಿರಂಜೀವಿ ಸರ್ಜಾ ಅಪಾರ ಅಭಿಮಾನಿಗಳನ್ನು ಅಗಲಿ ಮೂರು ವರ್ಷಗಳೇ ಕಳೆದಿವೆ. ಆದರೆ ಸರ್ಜಾ ಕುಟಂಬದಲ್ಲಿ ಚಿರು ಇಲ್ಲದ ನೋವು ಇನ್ನೂ ಮಾಸಿಲ್ಲ. ಸಧ್ಯ ಚಿರು ಸಾಯುವ ಮೂರು ದಿನಗಳ ಹಿಂದೆ ಏನೆಲ್ಲಾ ನಡೆತು ಎನ್ನುವುದರ ಬಗ್ಗೆ ಹಿರಿಯ ನಟ ಸುಂದರ್‌ ರಾಜ್‌ ಸತ್ಯ ಬಿಚ್ಚಿಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಹೌದು.. ಸರ್ಜಾ ಕುಟುಂಬದಲ್ಲಿ ಚಿರಂಜೀವಿ ಹಾಗು ಧ್ರುವ ರಾಮ-ಲಕ್ಷ್ಮಣರಂತೆ ಇದ್ದರು. 2020ರ ಜೂನ್‌ 7ರಂದು ನಟ ಚಿರಂಜೀವಿ ಸರ್ಜಾ ಹೃದಯಘಾತದಿಂದ ಸಾವನಪ್ಪುತ್ತಾರೆ. ಚಿರು ಅಗಲಿಕೆ ಅವರ ಕುಟುಂಬಕ್ಕೆ ಶಾಕ್‌ ನೀಡಿತ್ತು. ಆ ದಿನವನ್ನು ಅವರು ಎಂದಿಗೂ ಮರೆಯೋಕೆ ಆಗೊಲ್ಲ. ಇಂದಿಗೂ ಧ್ರುವ ಅಣ್ಣನ ನೆನಪಿನಲ್ಲಿಯೇ ಇರುತ್ತಾರೆ. ಮೇಘನಾ ಸಹ ತನ್‌ ಮಗ ರಾಯನ್‌ನಲ್ಲಿ ಚಿರು ಅವರನ್ನ ಕಾಣುತ್ತಾ ಜೀವನ ಸಾಗಿಸುತ್ತಿದ್ದಾರೆ. 


ಇದನ್ನೂ ಓದಿ:ಖ್ಯಾತ ಚಲನಚಿತ್ರ ನಿರ್ದೇಶಕ, ರಾಷ್ಟ್ರ ಪ್ರಶಸ್ತಿ ವಿಜೇತ ಕೆಜಿ ಜಾರ್ಜ್ ನಿಧನ..!


ಆರೋಗ್ಯವಾಗಿದ್ದ ಚಿರು ಇದ್ದಕಿದ್ದಹಾಗೆ ಸಾವೀಗೀಡಾಗಲು ಕಾರಣವೇನೆಂಬುದು ಚಿರು ಫ್ಯಾನ್ಸ್‌ಗೆ ಇನ್ನೂ ಪ್ರಶ್ನೆಯಾಗಿಯೇ ಉಳಿದಿದೆ. ಇತ್ತೀಚಿಗೆ ಚಿರು ಸರ್ಜಾ ಮಾವ ಸುಂದರ್‌ರಾಜ್‌, ತಮ್ಮ ಅಳಿಯನ ಸಾವಿನ ಮೂರು ದಿನಗಳ ಹಿಂದೆ ನಡೆದ ವಿಚಾರದ ಬಗ್ಗೆ ಸತ್ಯ ಬಿಚ್ಚಿಟ್ಟಿದ್ದಾರೆ. ಸುಂದರ್‌ ರಾಜ್ ತಮಿಳಿನ ಯೂಟ್ಯೂಬ್ ಚಾನೆಲ್‌ ಒಂದಕ್ಕೆ ನೀಡಿದ ಸಂದರ್ಶನದಲ್ಲಿ ಚಿರಂಜೀವಿ ಕೊನೆಯ ಮೂರು ದಿನಗಳು ಹೇಗಿತ್ತು ಅನ್ನೋದನ್ನ ವಿವರಿಸಿದ್ದಾರೆ.


ಚಿರಂಜೀವಿ ಸರ್ಜಾ ತಮ್ಮ ಹೊಸ ಸಿನಿಮಾಗಳಿಗಾಗಿ ತಯಾರಿ ನಡೆಸುತ್ತಿದ್ದರು. ಅದಕ್ಕಾಗಿ ಪ್ರತಿದಿನ ಹೆವಿ ವರ್ಕೌಟ್‌ ಸಹ ಮಾಡುತ್ತಿದ್ದರು. ಅದರಿಂದಲೇ ಸಮಸ್ಯೆ ಉಂಟಾಗಿದೆಯೆಂದು ಸುದ್ದಿ ಹಬ್ಬಿತ್ತು. ಆದರೆ ಚಿರು ನಿಜವಾಗಿಯು ಆರೋಗ್ಯವಾಗಿಯೇ ಇದ್ದರು. ಅವರಿಗೆ ಯಾವುದೇ ರೀತಿ ಆರೋಗ್ಯ ಸಮಸೆ ಇರಲಿಲ್ಲ. 


ಇದನ್ನೂ ಓದಿ: ನಿವೇದಿತಾ ಶಿವರಾಜ್‌ಕುಮಾರ್‌ 'ಫೈರ್ ಫ್ಲೈ' ಮೊದಲ‌ ಹಂತದ ಶೂಟಿಂಗ್‌ ಮುಕ್ತಾಯ...!


ಜೂನ್‌ 4ನೇ ತಾರೀಕು ನಾನು ಹಾಗು ಚಿರು ಇಬ್ಬರು ಕಾರ್ಡ್ಸ್‌ ಆಡುತ್ತಿದ್ದೆವು. ಆಮೇಲೆ ಸ್ಟೋರಿ ಕೇಳುವುದು ಇದ್ದೇಯಿದೆ ಎಂದು ಚಿರು ಎದ್ದರು. ಹಾಗೆ ಜೂನ್‌ 5ನೇ ತಾರೀಕು ಕಿಶೋರ್‌ ಸರ್ಜಾ ಅವರ ಹುಟ್ಟುಹಬ್ಬಕ್ಕೆ ಬರಬೇಕು ಅಂತ ಕರೆದು ಹೋದರುʼ, ಅಂತ ಸುಂದರ್‌ ರಾಜ್‌ ಹೇಳಿದರು.


ಜೂನ್‌ 5ರಂದು ನಾವೆಲ್ಲ ಭೇಟಿಯಾದೆವು. ಈ ಪಾರ್ಟಿಯಲ್ಲಿ ಚಿರಂಜೀವಿ ಸರ್ಜಾ ಗ್ರೂಪ್‌ ಫೋಟೋ ತೆಗೆಸಿಕೊಂಡಿದ್ದರು. ಅದನ್ನ ಯಾಕೆ ತೆಗೆಸಿಕೊಂಡರು ಅಂತ ಆವತ್ತು ನನಗೆ ಗೊತ್ತಾಗಲಿಲ್ಲ. ಕಿಶೋರ್‌ ಸರ್ಜಾ ಪುತ್ರ ಹಾಗು ಚಿರು ಇಬ್ಬರ ಪಕ್ಕದಲ್ಲಿಯೇ ನಿಂತು ಫೋಟೋ ತೆಗೆಸಿಕೊಂಡಿದ್ದರು. ಬರ್ತ್‌ಡೇ ಪಾರ್ಟಿ ಮುಗಿಯಿತು. ನಾವೆಲ್ಲಾ ವಾಪಸ್‌ ಬಂದೆವುʼ ಎಂದು ಘಟನೆ ಯನ್ನು ವಿವರಿಸಿದ್ದಾರೆ.


ಇದನ್ನೂ ಓದಿ: ವಿರಾಟ್ ಬಯೋಪಿಕ್‌ನಲ್ಲಿ ತೆಲುಗು ನಟ ರಾಮ್..! ಕಿಂಗ್‌ ಕೊಹ್ಲಿ ಕುರಿತು ನಟನ ಇಂಟ್ರಸ್ಟಿಂಗ್‌ ಹೇಳಿಕೆ ವೈರಲ್‌


ಜೂನ್‌ 6ನೇ ತಾರೀಕು ವಾಟರ್‌ ಟ್ಯಾಂಕ್‌ನಲ್ಲಿ ಏನೋ ಸಮಸ್ಯೆಯಿತ್ತು. ಆವತ್ತು ಕಡಿಮೆ ನಿದ್ದೆ ಮಾಡಿದ್ದರೇನೋ ಗೊತ್ತಿಲ್ಲ. ಅವರು ಟಾಪ್‌ ಫ್ಲೋರ್‌ ಹತ್ತಿದ್ದರು. ಅಲ್ಲಿಂದ ವಾಪಸ್‌ ಇಳಿದ ನಂತರ ಕುಸಿದು ಬಿದ್ದರು. ಮತ್ತೆ ತಕ್ಷಣ ಎದ್ದು ನಿಂತರು. ಆದರೂ ಸಹ ಕೂಡಲೆ ಅವರನ್ನ ಆಸ್ಪತ್ರೆಗೆಯಲ್ಲಿ ಪರೀಕ್ಷೆ ಮಾಡಿಸಲಾಗಿತು. ರಕ್ತ ಪರೀಕ್ಷೆ, ಇಸಿಜಿ ಎಲ್ಲಾ ಮಾಡಾಯ್ತು. ಆ ಸಮಯದಲ್ಲಿ ನಮಗೆ ಓವರ್ ವರ್ಕ್‌ಔಟ್ ಮಾಡಿದ್ದಕ್ಕೆ ಹೀಗಾಗಿರಬಹುದು ಅಂತ ಅನಿಸಿತ್ತು ಎಂದು ಮಾತನಾಡಿದರು.


ನಾನು ಫುಲ್‌ ಬಾಡಿ ಸ್ಕ್ಯಾನ್‌ ಮಾಡಿಸೊಕೆ ಹೇಳಿದೆ. ಅವರು ಮಾಡಿಸಿಕೊಂಡು ಬಂದರು. ಆಗ ಚಿರು ಮೆದುಳಿನಲ್ಲಿ ಸಣ್ಣದಾಗಿ ರಕ್ತ ಹೆಪ್ಪುಕಟ್ಟಿದೆ ಎಂದು ಗೊತ್ತಾಯಿತು. ವೈದರು ವಾಹನ ಚಲಾವಣೆ ಮಾಡಬೇಡಿ. ವಿಶ್ರಾಂತಿ ಪಡೆಯಿರಿ ಎಂದು ಹೇಳಿದರು. ನಾವು ವಾಪಸ್‌ ಬಂದೆವುʼ ಎಂದು ಸ್ಕ್ಯಾನ್‌ ಬಗ್ಗೆ ಹೇಳಿದಾರೆ.


ಇದನ್ನೂ ಓದಿ:ಸೀರೆಗೂ ಸೈ, ತುಂಡುಡುಗೆಗೂ ಜೈ ಈ ಪಟಾಕಿ ಪೋರಿ...ಪೋಟೋಸ್‌ ನೋಡಿ


ಜೂನ್‌ 7ರಂದು ಭಾನುವಾರ ಮದ್ಯಾಹ್ನ 1 ಗಂಟೆಗೆ ನಾನು ನನ್ನ ನಾಯಿ ಕರೆದುಕೊಂಡು ಚಿರು ಮನೆಗೆ ಹೋಗಿದ್ದೆ. ಅಲ್ಲಿ ಎಲ್ಲರು ಊಟ ಮಾಡುತ್ತಿದ್ದರು. ನನ್ನ ಮಗಳನ್ನ ಚಿರು ಎಲ್ಲಿ ಅಂತ ಕೇಳಿದೆ. ಅವಳು ಮಲಗಿದ್ದಾರೆಯೆಂದು ಹೇಳಿದಳು. ಆದರಿಂದ ನಾನು ವಾಪಸ್‌ ಬಂದೆ. ನಾನು ಬಂದ್ಮೇಲೆ ಚಿರು ಎದ್ದು ಬಂದು ಫ್ಯಾನ್‌ ಹಾಕುವಂತೆ ಹೇಳಿದರಂತೆ. ಫ್ಯಾನ್‌ ಹಾಕಿ ಒಂದೇ ಸೆಕೆಂಡ್‌ನಲ್ಲಿ ಕುಸಿದು ಬಿದ್ದರು. 


ನಾನು ಮನೆಗೆ ವಾಪಸ್‌ ಬಂದು 10 ನಿಮಿಷ ಸಹ ಆಗಿರಲಿಲ್ಲ. ಧೃವ ಅಣ್ಣ ಸೀರಿಯಸ್ ಅಂತ ಕರೆ ಮಾಡಿ ತಿಳಿಸಿದರು. ನಾನು ತಕ್ಷಣ ಓಡಿ ಹೋಗಿ ನೋಡಿದರೆ, ಚಿರು ನೋ ಮೋರ್‌ ಅಂತ ಹೇಳಿದರು ಅಂತ ಚಿರಂಜೀವಿ ಸಾವಿನ ದಿನದ ಬಗ್ಗೆ ಸಂದರ್ಶನದಲ್ಲಿ ಹಂಚಿಕೊಂಡಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.