ಮುಂಬೈ: ಬಾಲಿವುಡ್‌ & ಸೌತ್‌ ಸಿನಿ ಇಂಡಸ್ಟ್ರಿ ಫೈಟ್‌ ನಿಲ್ಲುವ ಲಕ್ಷಣ ಕಾಣುತ್ತಿಲ್ಲ. ಈ ಸದ್ಯಕ್ಕೆ ಜಗಳ ನೆಕ್ಸ್ಟ್‌ ಲೆವೆಲ್‌ ತಲುಪಿದ್ದು, ಟಾಲಿವುಡ್‌ ನಟ ಮಹೇಶ್‌ ಬಾಬು ಅವರು ಬಾಲಿವುಡ್‌ ಬಗ್ಗೆ ನೀಡಿದ್ದ ಹೇಳಿಕೆಗೆ ಬಾಲಿವುಡ್‌ ಸ್ಟಾರ್‌ಗಳು ಗರಂ ಆಗಿದ್ದಾರೆ. ಅದು ಯಾಕೆ..? ಹೇಗೆ ಅನ್ನೋದರ ಡೀಟೇಲ್ಸ್‌ ಮುಂದಿದೆ ಓದಿ.


COMMERCIAL BREAK
SCROLL TO CONTINUE READING

'ನನ್ನ ನಿಭಾಯಿಸಲು ಬಾಲಿವುಡ್‌ ಕೈಯಲ್ಲಿ ಆಗಲ್ಲ' ಹೀಗೆ ಟಾಲಿವುಡ್‌ ನಟ ಮಹೇಶ್‌ ಬಾಬು ಹೇಳಿಕೆ ನೀಡಿದ್ದೇ ತಡ, ಬಾಲಿವುಡ್‌ ಸ್ಟಾರ್‌ಗಳಿಗೆ ಕೋಪ ಕಂಟ್ರೋಲ್‌ಗೆ ಸಿಗದಂತಾಗಿದೆ. ಸೋಷಿಯಲ್‌ ಮೀಡಿಯಾದಲ್ಲಿ ಈ ಜಗಳ ದೊಡ್ಡ ಮಟ್ಟಕ್ಕೆ ಹೋಗಿರುವ ಹೊತ್ತಲ್ಲೇ ಹಿಂದಿ ನಟ ಸುನೀಲ್‌ ಶೆಟ್ಟಿ, ಟಾಂಗ್‌ ಕೊಟ್ಟಿದ್ದಾರೆ.ಸಿನಿಪ್ರಿಯರಿಗೆ ವೀಕೆಂಡ್ ಧಮಾಕಾ..ಮೇ 13ಕ್ಕೆ ಜೀ5 ಒಟಿಟಿಯಲ್ಲಿ ಮೂರು ಬ್ಲಾಕ್ ಬಸ್ಟರ್ ಸಿನಿಮಾಗಳು ರಿಲೀಸ್..!


'ಬಾಪ್ ಬಾಪ್ ಹೋತಾ ಹೈ..!'


ಕಾರ್ಯಕ್ರಮ ಒಂದರಲ್ಲಿ ಮಾತನಾಡಿರುವ ನಟ ಸುನೀಲ್‌ ಶೆಟ್ಟಿ, 'ತಂದೆ ಯಾವತ್ತಿದ್ರೂ ತಂದೆಯೇ. ಭಾರತೀಯ ಚಿತ್ರರಂಗ‌ ಗುರುತಿಸಿದರೆ, ಬಾಲಿವುಡ್‌ ಮೊದಲಿದೆ.' ಎಂದು ಪ್ರತಿಕ್ರಿಯೆ ನೀಡಿದ್ದಾರೆ. ಸಿನಿಮಾ ಆಗಲಿ, ಒಟಿಟಿ ಆಗಲಿ ಎಲ್ಲವೂ ಒಂದೇ. ಬಾಲಿವುಡ್‌ ಯಾವತ್ತಿದ್ದರೂ ಬಾಲಿವುಡ್‌ ಎಂದು ಸುನೀಲ್‌ ಶೆಟ್ಟಿ ನೀಡಿರುವ ಹೇಳಿಕೆ ಇದೀಗ ಮತ್ತೊಂದು ಸಂಚಲನ ಸೃಷ್ಟಿಮಾಡಿದೆ.


ಇದನ್ನೂ ಓದಿ: ಮೇ 20ಕ್ಕೆ 'ಸಕುಟುಂಬ ಸಮೇತ' ಚಿತ್ರಮಂದಿರಕ್ಕೆ ಬನ್ನಿ


ಮಹೇಶ್‌ ಬಾಬು ಹೇಳಿದ್ದೇನು..?


ಇತ್ತೀಚೆಗೆ ಸಂದರ್ಶನದಲ್ಲಿ ಮಾತನಾಡುತ್ತಾ ಮಹೇಶ್‌ ಬಾಬು ಬಾಲಿವುಡ್‌ಗೆ ಟಾಂಗ್‌ ಕೊಟ್ಟಿದ್ದರು. 'ಬಾಲಿವುಡ್‌ ನನ್ನ‌ ನಿಭಾಯಿಸೋದಕ್ಕೆ ಆಗೋದಿಲ್ಲ. ಹಿಂದಿಯಲ್ಲಿ ಸಾಕಷ್ಟು ಆಫರ್ಸ್ ಬಂದಿವೆ. ಆದರೆ ಅವರೆಲ್ಲಾ ನನ್ನ ಭರಿಸಲು ಸಾಧ್ಯವೇ ಇಲ್ಲ. ಇದೇ ಕಾರಣಕ್ಕೆ ಅಲ್ಲಿ ಕೆಲಸ ಮಾಡುತ್ತಾ ನನ್ನ ಟೈಂ ವ್ಯರ್ಥ ಮಾಡಲು ಬಯಸಲ್ಲ. ನನಗೆ ಇಲ್ಲಿ ಸಿಗುವ ಗೌರವ ದೊಡ್ಡದು. ಹಾಗಾಗಿ ನನ್ನ ಇಂಡಸ್ಟ್ರಿ ಬಿಟ್ಟು ಬೇರೆ ಇಂಡಸ್ಟ್ರಿಗೆ ಹೋಗಲ್ಲ.' ಅಂತಾ ಕಡ್ಡಿಯನ್ನ ತುಂಡು ಮಾಡಿದಂತೆ ಮಾತನಾಡಿದ್ದರು ನಟ ಮಹೇಶ್‌ ಬಾಬು.


ಸದ್ಯಕ್ಕೆ ಸುನೀಲ್‌ ಶೆಟ್ಟಿ ನೀಡಿರುವ ಪ್ರತಿಕ್ರಿಯೆ ಕಾವು ಮತ್ತಷ್ಟು ಹೆಚ್ಚುವಂತೆ ಮಾಡಿದೆ. ಇದರ ಜೊತೆಗೆ ಮತ್ತಷ್ಟು ಬಾಲಿವುಡ್‌ ನಟರು ಇದೇ ರೀತಿ ಹೇಳಿಕೆ ನೀಡುವ ನಿರೀಕ್ಷೆ ಅಭಿಮಾನಿಗಳದ್ದು. ಅದೆಲ್ಲಾ ಏನೇ ಇದ್ದರೂ, ಭಾರತೀಯ ಚಿತ್ರರಂಗ ಒಗ್ಗಟ್ಟಿನಿಂದ ಕೆಲಸ ಮಾಡಲಿ ಎಂಬುದೇ ಫ್ಯಾನ್ಸ್‌ ಆಶಯ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.