Rajinikanth issues public notice : ಸೂಪರ್‌ ಸ್ಟಾರ್‌, ನಟ ರಜನಿಕಾಂತ್ ಅವರು ತಮ್ಮ ಫೋಟೋ, ವ್ಯಕ್ತಿತ್ವ, ಹೆಸರು, ಧ್ವನಿಯನ್ನು ವಾಣಿಜ್ಯ ಉದ್ದೇಶಗಳಿಗಾಗಿ ಬಳಸಿಕೊಳ್ಳುವ ಬ್ರ್ಯಾಂಡ್‌ ಮತ್ತು ಕಂಪನಿಗಳಿಗೆ ಎಚ್ಚರಿಕೆ ನೀಡಿದ್ದಾರೆ. ಅಲ್ಲದೆ, ಕಾನೂನು ಕ್ರಮ ಕೈಗೊಳ್ಳಲು ತಿಳಿಸಿದ್ದಾರೆ. ಭಾರತೀಯ ಚಿತ್ರರಂಗದ ಇತಿಹಾಸದಲ್ಲಿ ಅತ್ಯಂತ ಜನಪ್ರಿಯ ಸೂಪರ್‌ಸ್ಟಾರ್‌ಗಳಲ್ಲಿ ರಜಿನಿ ಒಬ್ಬರು. ಪಾಪ್ ಸಂಸ್ಕೃತಿಯ ಐಕಾನ್ ಆಗಿ ಅವರ ಹೋಲಿಕೆಯನ್ನು ಅನೇಕ ಬ್ರ್ಯಾಂಡ್‌ಗಳು ಜಾಹೀರಾತಿಗಾಗಿ ಬಳಸಿಕೊಳ್ಳಲಾಗುತ್ತಿದೆ. ಇದನ್ನು ಮನಗಂಡ ರಜನಿಕಾಂತ್‌ ಅವರ ಕಾನೂನು ತಂಡವು ಇನ್ನು ಮುಂದೆ ಈ ರೀತಿ ಮಾಡದಂತೆ ಬ್ರ್ಯಾಂಡ್‌ಗಳಿಗೆ ಸೂಚನೆ ರವಾನಿಸಿದೆ.


COMMERCIAL BREAK
SCROLL TO CONTINUE READING

ರಜನಿಕಾಂತ್ ಅವರ ವಕೀಲ ಸುಬ್ಬಯ್ಯ ಎಳಂಭಾರತಿ ಅವರು ಸಹಿ ಮಾಡಿರುವ ಪತ್ರದಲ್ಲಿ, 'ಯಾರಾದರೂ ರಜನಿಕಾಂತ್‌ ಅವರ ವ್ಯಕ್ತಿತ್ವ/ಪ್ರಚಾರ/ಪ್ರಸಿದ್ಧ ಹಕ್ಕುಗಳನ್ನು ಉಲ್ಲಂಘಿಸಿದರೆ' ಕಾನೂನು ಕ್ರಮ ಎದುರಿಸಬೇಕಾಗುತ್ತದೆ ಎಂದು ಬ್ರ್ಯಾಂಡ್‌ಗಳಿಗೆ ಎಚ್ಚರಿಕೆ ನೀಡಲಾಗಿದೆ. ಪತ್ರದಲ್ಲಿ ರಜನಿಕಾಂತ್ ಅವರೇ "ತಮ್ಮ ವ್ಯಕ್ತಿತ್ವ, ಹೆಸರು, ಧ್ವನಿ, ಚಿತ್ರ, ಹೋಲಿಕೆ ಮತ್ತು ಇತರ ಗುಣಲಕ್ಷಣಗಳ ವಾಣಿಜ್ಯ ಬಳಕೆಯ ಮೇಲೆ ನಿಯಂತ್ರಣ ಹೊಂದಿರುವ ಏಕೈಕ ವ್ಯಕ್ತಿಯಾಗಿದ್ದಾರೆ ಎಂದು ಸ್ಪಷ್ಟ ಪಡಿಸಲಾಗಿದೆ.


ಸೆಟ್ಟೇರಿದ ನೈಜ ಘಟನೆ ಆಧಾರಿತ ‘ರೇಸರ್’ ಸಿನಿಮಾ


ಇದರರ್ಥ ಅವರ ಮುಖ, ನಡವಳಿಕೆ ಮತ್ತು ಧ್ವನಿಯ ಅನುಕರಣೆ ಹಕ್ಕು ಉಲ್ಲಂಘನೆ ಎಂದು ತಿಳಿಸಲಾಗಿದೆ. ಹಾಗೂ ಕಾನೂನು ಪ್ರಕಾರ ಸಿವಿಲ್ ಮತ್ತು ಕ್ರಿಮಿನಲ್ ಸೇರಿದಂತೆ ಎಲ್ಲಾ ಕ್ರಮಗಳನ್ನು ತೆಗೆದುಕೊಳ್ಳಲಾಗುತ್ತದೆ ಎಂದು ನೋಟಿಸ್‌ನಲ್ಲಿ ಹೇಳಲಾಗಿದೆ. ರಜಿಂಕಾಂತ್ ಅವರು ಸೂಪರ್‌ಸ್ಟಾರ್ ರಜನಿ ಎಂದೇ ಜನಪ್ರಿಯರಾಗಿದ್ದಾರೆ. ಅವರು ತಮಿಳು ಚಲನಚಿತ್ರೋದ್ಯಮದ ಪ್ರಮುಖ ಮುಖಗಳಲ್ಲಿ ಒಬ್ಬರು. ಸಿನಿರಂಗದ ಇತಿಹಾಸದಲ್ಲಿ ಕೆಲವು ದೊಡ್ಡ ಹಿಟ್‌ ಸಿನಿಮಾಗಳನ್ನು ನೀಡಿದ್ದಾರೆ. ಹಿಂದಿ ಚಲನಚಿತ್ರಗಳಲ್ಲಿಯೂ ಕಾಣಿಸಿಕೊಂಡಿರುವ ಅವರು ಪ್ಯಾನ್ ಇಂಡಿಯಾ ಲೆವೆಲ್‌ನಲ್ಲಿ ಸ್ಟಾರ್‌ಗಿರಿ ಪಡೆದವರು. ಸಿನಿಮಾ ವಿಚಾರವಾಗಿ ಹೇಳುವುದಾದ್ರೆ, ನಿರ್ದೇಶಕ ನೆಲ್ಸನ್‌ ಅವರ ʼಜೈಲರ್‌ʼ ಚಿತ್ರದಲ್ಲಿ ರಜಿನಿ ಕಾಣಿಸಿಕೊಳ್ಳಲಿದ್ದಾರೆ, ಮಾರ್ಚ್‌ ತಿಂಗಳಲ್ಲಿ ಈ ಸಿನಿಮಾ ಬಿಡುಗಡೆಯಾಗಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.