ಬೆಂಗಳೂರು : ಸ್ಯಾಂಡಲ್‌ವುಡ್ ರಿಯಲ್ ಸ್ಟಾರ್ ಉಪೇಂದ್ರ ಆರೋಗ್ಯದಲ್ಲಿ ಏರುಪೇರಾಗಿದ್ದು ಆಸ್ಪತ್ರೆಗೆ ದಾಖಲಾಗಿದ್ದಾರೆ ಎನ್ನುವ  ಸುಳ್ಳು ಮಾಹಿತಿ ಸೋಷಿಯಲ್‌ ಮೀಡಿಯಾದಲ್ಲಿ ಹಬ್ಬಿದೆ. ಉಸಿರಾಟ ಸಮಸ್ಯೆಯಿಂದ ಬಳಲುತ್ತಿದ್ದ ಉಪೇಂದ್ರ ಅವರನ್ನು ತಕ್ಷಣ ಆಸ್ಪತ್ರೆಗೆ ದಾಖಲಿಸಲಾಗಿದೆ ಅನ್ನೋದು ಸುಳ್ಳು. ಸದ್ಯ ಈ ಕುರಿತು ಸ್ವತಃ ಉಪೇಂದ್ರ ಅವರೇ ಸ್ಪಷ್ಟನೆ ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಈ ಕುರಿತು ಫೇಸ್‌ಬುಕ್‌ ಲೈವ್‌ ಬಂದು ಮಾತನಾಡಿರುವ ಉಪೇಂದ್ರ ಅವರು, ಸದ್ಯ ನಾನು ಸ್ಟುಡಿಯೋದಲ್ಲಿಯೇ ಇದ್ದೇನೆ. ಎಲ್ಲಾ ಇಲ್ಲಿಯೇ ಇದ್ದಾರೆ ನೋಡಿ, ನಮ್ಮ ಡೈರೆಕ್ಷನ್‌ ವಿಭಾಗದವರು ಸೇರಿದಂತೆ ಎಲ್ಲರೂ ಇಲ್ಲಿಯೇ ಇದ್ದೇವೆ.  ನಾನು ಆರೋಗ್ಯವಾಗಿ ಇದ್ದೇನೆ, ಏನು ತೊಂದರೆ ಆಗಿಲ್ಲ. ಸ್ವಲ್ಪ ಡಸ್ಟ್‌ ಜಾಸ್ತಿ ಇತ್ತು ಕೆಮ್ಮಿದೆ ಅಷ್ಟೇ. ಅದೇ ಏನೆನೋ ಸುದ್ದಿಯಾಗಿದೆ. ದಯವಿಟ್ಟು ಅನ್ಯತಾ ಸುದ್ದಿಗಳನ್ನು ಹಬ್ಬಿಸಬೇಡಿ. ಸದ್ಯ ನಾವು ಶೂಟಿಂಗ್‌ ಮುಂದುವರೆಸುತ್ತಿದ್ದೇವೆ ಎಂದು ಹೇಳಿದ್ದಾರೆ.


ಇದನ್ನೂ ಓದಿ:ರಿಯಲ್‌ ಸ್ಟಾರ್‌ ಉಪೇಂದ್ರ ಆಸ್ಪತ್ರೆಗೆ ದಾಖಲು : ಚಿಂತೆಯಲ್ಲಿ ಫ್ಯಾನ್ಸ್‌..!


ರಿಯಲ್‌ ಸ್ಟಾರ್‌ ಉಪೇಂದ್ರ ಅವರು ಉಸಿರಾಟದ ಸಮಸ್ಯೆ ಹಿನ್ನೆಲೆ ಆಸ್ಪತ್ರೆಗೆ ದಾಖಲಾಗಿದ್ದಾರೆ. ಸಿನಿಮಾ ಶೂಟಿಂಗ್‌ ವೇಳೆ ಈ ಘಟನೆ ನಡೆದಿದೆ ಎಂದು ಹೇಳಲಾಗಿತ್ತು. ಅಲ್ಲದೆ, ಅವರು ನೆಲಮಂಗಲ ಹರ್ಷ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ ಎಂದು ವರದಿಯಾಗಿತ್ತು. ಇದೀಗ ಅವರೇ ತಾವು ಆರೋಗ್ಯವಾಗಿರುವ ಕುರಿತು ಮಾಹಿತಿ ನೀಡಿದ್ದಾರೆ. ಅಲ್ಲದೆ, ಅಭಿಮಾನಿಗಳು ಚಿಂತೆ ಮಾಡುವಂತಹ ಘಟನೆ ಏನೂ ನಡೆದಿಲ್ಲ ಎಂದು ತಿಳಿಸಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.