‘ರಿಯಲ್​ ಸ್ಟಾರ್​’ ಉಪೇಂದ್ರ (Upendra) ನಟನೆಯ ‘ಹೋಮ್‌ ಮಿನಿಸ್ಟರ್‌’ ಸಿನಿಮಾ ಏಪ್ರಿಲ್‌ 1ಕ್ಕೆ ತೆರೆಕಾಣುತ್ತಿದೆ. ಚಿತ್ರ ಬಿಡುಗಡೆಯ ಹೊಸ್ತಿಲಲ್ಲೇ ಉಪೇಂದ್ರ ಅವರು ಅಭಿಮಾನಿಗಳಿಗೆ (Uppi Fans) ಟಾಸ್ಕ್‌ ಒಂದನ್ನು ನೀಡಿದ್ದಾರೆ. ಅಲ್ಲದೇ  ನಟರಾದ ಸುದೀಪ್‌, ಯಶ್‌, ಗಣೇಶ್‌ ಹಾಗೂ ಪ್ರಜ್ವಲ್‌ ದೇವರಾಜ್‌ ಅವರಿಗೆ ಸವಾಲೊಂದನ್ನು ಎಸೆದಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: KGF 2 Trailer: `ರಣ ಬೇಟೆಗಾರ’ನ ರೌದ್ರಾವತಾರಕ್ಕೆ ಯೂಟ್ಯೂಬ್​ ಕ್ರ್ಯಾಶ್​


ಉಪೇಂದ್ರ ಅವರಿಗೆ ಅಭಿಮಾನಿ ಬಳಗ ದೊಡ್ಡದು. ಸೋಶಿಯಲ್​ ಮೀಡಿಯಾದಲ್ಲಿ ಉಪ್ಪಿ ಅಭಿಮಾನಿಗಳಿಗೆ ಟಾಸ್ಕ್‌ ಒಂದನ್ನು ನೀಡಿದ್ದಾರೆ. ಅದನ್ನು ಚೆನ್ನಾಗಿ ಮಾಡಿದವರಿಗೆ ಎರಡು ಬಂಪರ್​ ಆಫರ್​ ಸಿಗಲಿದೆ. 


 


Home Minister) ಬಿಡುಗಡೆಗೆ ಸಜ್ಜಾಗಿದೆ. ಏಪ್ರಿಲ್‌ 1 ರಂದು ಈ ಚಿತ್ರ ಬಿಡುಗಡೆ ಆಗಲಿದೆ. ‘ಹೋಮ್​ ಮಿನಿಸ್ಟರ್​’ ಸಿನಿಮಾ ವೀಕ್ಷಿಸಲು ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಉಚಿತವಾಗಿ ಸಿಗಲಿದೆ. ಅಲ್ಲದೇ, ಸೂಪರ್​ ಉಪೇಂದ್ರ ಅವರ ಜೊತೆ ಕುಳಿತು ಊಟ ಮಾಡಬಹುದು.


ಈ ಬಗ್ಗೆ ಉಪೇಂದ್ರ ಸೋಷಿಯಲ್‌ ಮೀಡಿಯಾದಲ್ಲಿ ಮಾಹಿತಿ ಹಂಚಿಕೊಂಡಿದ್ದಾರೆ. ಉಪ್ಪಿ ಹಾಕಿರುವ ಒಂದು ಸವಾಲನ್ನು ಸ್ವೀಕರಿಸಬೇಕು. ಉಪೇಂದ್ರ ಹೇಳಿದ ಕೆಲಸವನ್ನು ತುಂಬ ಚೆನ್ನಾಗಿ ಮಾಡುವ ಮೂವರಿಗೆ ಮಾತ್ರ ಈ ಚಾನ್ಸ್​ ಸಿಗಲಿದೆ. 


ಇದನ್ನೂ ಓದಿ: Sanjay Dutt : ಅಪ್ಪು ಮನೆಗೆ ಮನೆಗೆ ಭೇಟಿ ಕೊಟ್ಟ ಬಾಲಿವುಡ್ ನಟ ಸಂಜಯ್ ದತ್!


ಉಪೇಂದ್ರ ಮನೆ ಕ್ಲೀನ್​ ಮಾಡುವುದು, ಅಡುಗೆ ಮಾಡುವುದು, ಪಾತ್ರೆ ತೊಳೆಯುವುದು, ಹೆಂಡತಿಯ ಸೇವೆ ಮಾಡುವುದು ಸೇರಿದಂತೆ ಅನೇಕ ಕೆಲಸಗಳನ್ನು ನಿಭಾಯಿಸಿದ್ದಾರೆ. ಅದೇ ರೀತಿ ಅಭಿಮಾನಿಗಳು ಕೂಡ ತಮ್ಮ ತಮ್ಮ ಮನೆಗಳಲ್ಲಿ ಈ ಕೆಲಸವನ್ನು ಮಾಡಬೇಕು. ಅದರ ವಿಡಿಯೋವನ್ನು ಸಾಮಾಜಿಕ ಮಾಧ್ಯಮಗಳಲ್ಲಿ ಉಪೇಂದ್ರ ಅವರಿಗೆ ಟ್ಯಾಗ್​ ಮಾಡುವ ಮೂಲಕ ಹಂಚಿಕೊಳ್ಳಬೇಕು ಎಂಬ ಟಾಸ್ಕ್‌ ಒಂದನ್ನು ನೀಡಿದ್ದಾರೆ. 


ತುಂಬಾ ಚೆನ್ನಾಗಿ ರೀಲ್ಸ್​ (Insta Reels) ಮಾಡುವ ಮೂವರಿಗೆ ‘ಹೋಮ್ ಮಿನಿಸ್ಟರ್​’ ಸಿನಿಮಾದ ಫಸ್ಟ್​ ಡೇ ಫಸ್ಟ್​ ಶೋ ಟಿಕೆಟ್​ ಮತ್ತು ಉಪ್ಪಿ ಜೊತೆ ಊಟ ಮಾಡುವ ಬಂಪರ್‌ ಆಫರ್‌ ಸಿಗಲಿದೆ.


ಕನ್ನಡ ಭಾಷೆಯಲ್ಲಿ ಮತ್ತಷ್ಟು ಸ್ವಾರಸ್ಯಕರ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಆಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebook ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.