ಬೆಂಗಳೂರು :  'ಪ್ರಜಾಕೀಯ' ಪಕ್ಷ ಘೋಷಿಸುವ ಮೂಲಕ ರಾಜ್ಯ ರಾಜಕಾರಣದಲ್ಲಿ ಕುತೂಹಲ ಮೂಡಿಸಿದ್ದ ಉಪೇಂದ್ರ ಅವರು ಈ ಬಾರಿ ಚುನಾವಣೆಯಲ್ಲಿ ಸ್ಪರ್ಧಿಸದ ಕುರಿತು ಬೇಸರಗೊಂಡಿದ್ದ ಅಭಿಮಾನಿಗಳಿಗೆ ಉಪೇಂದ್ರ ಸಂತಸದ ಸುದ್ದಿಯೊಂದನ್ನು ನೀಡಿದ್ದಾರೆ.


COMMERCIAL BREAK
SCROLL TO CONTINUE READING

ಇದೀಗ ಉಪೇಂದ್ರ ಅವರು 'ಉತ್ತಮ ಪ್ರಜಾಕೀಯ ಪಕ್ಷ' ಎಂಬ ಹೆಸರಿನಲ್ಲಿ ತಮ್ಮ ಹೊಸ ಪಕ್ಷ ಸ್ಥಾಪನೆಗೆ ಮುಂದಾಗಿದ್ದು, ದೆಹಲಿಯ ಕೇಂದ್ರ ಚುನಾವಣಾ ಆಯೋಗಕ್ಕೆ ಭೇಟಿ ನೀಡಿ ಹೊಸ ಪಕ್ಷದ ನೋಂದಣಿ ಕಾರ್ಯದಲ್ಲಿ ಬ್ಯುಸಿ ಆಗಿದ್ದಾರೆ. ಈ ಬಗ್ಗೆ ಸ್ವತಃ ಉಪೇಂದ್ರ ಅವರ ಟ್ವೀಟ್ ಮಾಡಿದ್ದಾರೆ. 



ಈ ಹಿಂದೆ ಹಲವು ಕನಸು, ಭರವಸೆಗಳೊಂದಿಗೆ ಕೆಪಿಜೆಪಿಗೆ ಸೇರಿ, ರಾಜಕೀಯಕ್ಕೆ ಧುಮುಕಿದ್ದ ನಟ ಉಪೇಂದ್ರ, ಆ ಪಕ್ಷದಲ್ಲಿನ ಕೆಲವು ಆಂತರಿಕ ಸಮಸ್ಯೆ ಹಿನ್ನೆಲೆಯಲ್ಲಿ ಪಕ್ಷದಿಂದ ದೂರ ಸರಿದಿದ್ದರು. ಅಲ್ಲದೆ, ಯಾವುದೇ ಕಾರಣಕ್ಕೂ ತಾವು ತಮ್ಮ ತತ್ವ ಸಿದ್ಧಾಂತಗಳೊಂದಿಗೆ ಮೈತ್ರಿ ಮಾಡಿಕೊಳ್ಳುವುದಿಲ್ಲ. ಪ್ರಜಾಕೀಯ ಹೊರತು ಪಡಿಸಿ ರಾಜಕೀಯ ಮಾಡುವುದಿಲ್ಲ. ಸದ್ಯದಲ್ಲೇ ಹೊಸ ಪಕ್ಷ ಹುಟ್ಟುಹಾಕುವುದಾಗಿ ಉಪೇಂದ್ರ ಹೇಳಿದ್ದರು. ಅದರಂತೆ ಇಂದು 'ಉತ್ತಮ ಪ್ರಜಾಕೀಯ ಪಕ್ಷ' ಎಂಬ ಹೆಸರಿನಲ್ಲಿ ಹೊಸ ಪತ್ರ ನೋಂದಣಿ ಕಾರ್ಯದಲ್ಲಿ ಉಪೇಂದ್ರ ತೊಡಗಿದ್ದಾರೆ.