Vidyut Jamwal Viral Photos: ವಿದ್ಯುತ್ ಜಮ್ವಾಲ್’ಗೆ ಇಂದು 43ನೇ ಹುಟ್ಟುಹಬ್ಬದ ಸಂಭ್ರಮ. ಆದರೆ, ಇದೇ ದಿನದಂದು ಅಭಿಮಾನಿಗಳಿಗೆ ಭರ್ಜರಿ ಶಾಕ್ ನೀಡಿದ್ದಾರೆ. ಹೌದು...ಇತ್ತೀಚೆಗಷ್ಟೇ ನಟ ಇನ್’ಸ್ಟಾಗ್ರಾಂನಲ್ಲಿ ವಿಶೇಷವಾದ ಪೋಸ್ಟ್ ಶೇರ್ ಮಾಡಿದ್ದು, ಸಂಚಲನ ಮೂಡಿಸಿದ್ದಾರೆ. ಇತ್ತೀಚಿನ ಪೋಸ್ಟ್‌’ನಲ್ಲಿ, ವಿದ್ಯುತ್ ಜಮ್ವಾಲ್ ಬಟ್ಟೆ ಇಲ್ಲದೆ ಕಾಡಿನಲ್ಲಿ ತಿರುಗುತ್ತಿರುವುದನ್ನು ಕಾಣಬಹುದು. ಈ ಸ್ಟೈಲ್‌’ನಲ್ಲಿರುವ ನಟನನ್ನು ನೋಡಿದ ನೆಟಿಜನ್ಸ್ ನಾನಾ ರೀತಿಯ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಪಾಕಿಸ್ತಾನ ಕ್ರಿಕೆಟ್ ತಂಡಕ್ಕೆ ಕೋಚ್ ಆಗ್ತೀರಾ?- ಮೂರೇ ಪದದಲ್ಲಿ ಶಾಕಿಂಗ್ ಉತ್ತರ ಕೊಟ್ಟ ಜಡೇಜಾ


ನಟ ವಿದ್ಯುತ್ ಜಮ್ವಾಲ್ ಇಂದು ತಮ್ಮ 43ನೇ ಹುಟ್ಟುಹಬ್ಬವನ್ನು ಆಚರಿಸಿಕೊಳ್ಳುತ್ತಿದ್ದಾರೆ. ಆದರೆ ಈ ಸಂದರ್ಭದಲ್ಲಿ ವಿದ್ಯುತ್ ಬಟ್ಟೆಯಿಲ್ಲದ ಫೋಟೋಗಳನ್ನು ಸಾಮಾಜಿಕ ಮಾಧ್ಯಮದಲ್ಲಿ ಪೋಸ್ಟ್ ಮಾಡಿದ್ದಾರೆ.


“ಹಿಮಾಲಯ ಶ್ರೇಣಿಗಳಿಗೆ ನನ್ನ ಮರಳುವಿಕೆ… ದೇವರ ವಾಸಸ್ಥಾನ. ಇದು 14 ವರ್ಷಗಳ ಹಿಂದೆ ಪ್ರಾರಂಭವಾಯಿತು, ನಾನು ಅದನ್ನು ಅರಿತುಕೊಳ್ಳುವ ಮೊದಲು, ಪ್ರತಿ ವರ್ಷ 7-10 ದಿನಗಳ ಕಾಲ ಒಬ್ಬಂಟಿಯಾಗಿರುವುದು ನನ್ನ ಜೀವನದ ಅವಿಭಾಜ್ಯ ಅಂಗ. ಐಷಾರಾಮಿ ಪ್ರಪಂಚದಿಂದ ಇಲ್ಲಿಗೆ ಬಂದ ನಾನು ನನ್ನ ಏಕಾಂತವನ್ನು ಕಂಡುಕೊಳ್ಳಲು ಇಷ್ಟಪಡುತ್ತೇನೆ. ನಾನು ಏನೂ ಅಲ್ಲ ಎಂಬುದನ್ನು ತಿಳಿದುಕೊಳ್ಳುವ ಪ್ರಾಮುಖ್ಯತೆಯನ್ನು ಅನುಭವಿಸಲು ನಾನು ಇಷ್ಟಪಡುತ್ತೇನೆ. ನಾನು ಯಾರೆಂದು ತಿಳಿದುಕೊಳ್ಳಲು ಮತ್ತು ಶಾಂತಿಯಿಂದ ನನ್ನನ್ನು ರಕ್ಷಿಸಿಕೊಳ್ಳಲು ಇದು ಮೊದಲ ಹೆಜ್ಜೆಯಾಗಿದೆ” ಎಂದು ಹೇಳಿದ್ದಾರೆ.


“ನಾನು ಪ್ರಕೃತಿಯ ನೈಸರ್ಗಿಕ ಸೌಂದರ್ಯದೊಂದಿಗೆ ಬೆರೆತು ಹೋಗಿದ್ದೇನೆ. ನಾನು ನನ್ನನ್ನು ಸ್ಯಾಟಲೈಟ್ ಡಿಶ್ ಆಂಟೆನಾ ಎಂದು ಕಲ್ಪಿಸಿಕೊಳ್ಳುತ್ತೇನೆ. ಇದು ಸಂತೋಷ ಮತ್ತು ಪ್ರೀತಿಯ ಕಂಪನಗಳನ್ನು ಆಕರ್ಷಿಸುತ್ತದೆ ಮತ್ತು ಹರಡುತ್ತದೆ” ಎಂದು ಬರೆದುಕೊಂಡಿದ್ದಾರೆ.


ಇದನ್ನೂ ಓದಿ: “ಆತ ಮುಸ್ಲಿಂ.. ಧರ್ಮಕ್ಕಾಗಿ ಪ್ರೀತಿ ತ್ಯಾಗ ಮಾಡುತ್ತಿದ್ದೇವೆ”- 4 ವರ್ಷಗಳ ಪ್ರೇಮಕ್ಕೆ ಬ್ರೇಕಪ್ ಹೇಳಿದ ಬಿಗ್’ಬಾಸ್ ಜೋಡಿ


“ನನ್ನ ಜೀವನದಲ್ಲಿ ಹೊಸ ಅಧ್ಯಾಯವನ್ನು ಅನುಭವಿಸಲು ನಾನು ಸಿದ್ಧನಿದ್ದೇನೆ - ಪುನರ್ಜನ್ಮ. ಈ ಏಕಾಂತವು ಮನಸ್ಸಿನ ಊಹೆಗೂ ನಿಲುಕದ್ದು, ಆದರೆ ಅದನ್ನು ಅರಿತುಕೊಂಡರೆ ಈ ಅನುಭವವನ್ನು ಆನಂದಿಸಲು ಸಾಧ್ಯವಾಗುತ್ತದೆ” ಎಂದಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://t.co/lCSPNypK2U
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ