Vijay upcoming movies : ಕಾಲಿವುಡ್‌ ಸೂಪರ್‌ ಸ್ಟಾರ್‌ ನಟ ವಿಜಯ್ ಅವರನ್ನು ಅಭಿಮಾನಿಗಳು ಪ್ರೀತಿಯಿಂದ 'ಇಳಯದಳಪತಿ' ಅಂತ ಕರೆಯುತ್ತಾರೆ. ಬಾಲನಟನಾಗಿ ಚಿತ್ರರಂಗಕ್ಕೆ ಪ್ರವೇಶ ಮಾಡಿದ ವಿಜಯ್‌ ಅವರಿಗೆ ಈಗ 40 ವರ್ಷ ವಯಸ್ಸು. ಸದ್ಯ ನಟ ಚಿತ್ರರಂಗ ತೊರೆದು ರಾಜಕೀಯ ಸೇರಲಿದ್ದಾರೆ ಎಂಬ ಮಾತು ಹೆಚ್ಚಾಗಿ ಕೇಳಿ ಬರುತ್ತಿದೆ. 


COMMERCIAL BREAK
SCROLL TO CONTINUE READING

ಹೌದು.. ಕಳೆದ ಕೆಲವು ವರ್ಷಗಳಿಂದ ನಟ ವಿಜಯ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ಸುದ್ದಿ ಹರಿದಾಡುತ್ತಿದೆ. ವಿಜಯ್ ಅವರಂತೂ ತಮ್ಮ ಸಿನಿಮಾಗಳಲ್ಲಿ ರಾಜಕೀಯ ಡೈಲಾಗ್‌ಗಳನ್ನು ತುಸು ಗಟ್ಟಿಯಾಗಿಯೇ ಹೇಳುತ್ತಿದ್ದಾರೆ. ಎಲ್. ವಿಜಯ್ ನಿರ್ದೇಶನದ 'ತಲೈವಾ' ಚಿತ್ರದಿಂದ ಆರಂಭವಾದ ವಿಜಯ್ ರಾಜಕೀಯ ಪ್ರವೇಶ ಸುದ್ದಿ 'ಸರ್ಕಾರ್' ಸಿನಿಮಾ ನಂತರ ದೃಢವಾಗಿತ್ತು. ಹೀಗಿರುವಾಗ ಕೊನೆಯ ಚಿತ್ರವೊಂದರಲ್ಲಿ ನಟಿಸಿ ವಿಜಯ್‌ ರಾಜಕೀಯ ಸೇರಲಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ.


ಇದನ್ನೂ ಓದಿ: ಧೀರʼ ಶಿವಣ್ಣನ ಹೊಸ ಸಿನಿಮಾ ಅನೌಸ್ಸ್‌..! ಸಖತ್ತಾಗಿದೆ ಹ್ಯಾಟ್ರಿಕ್‌ ಹೀರೋ ಹೊಸ ಚಿತ್ರದ ಪೋಸ್ಟರ್‌


ಇತ್ತೀಚಿಗೆ ʼವಿಜಯ್ ಪೀಪಲ್ಸ್ ಮೂವ್‌ಮೆಂಟ್ʼ ವತಿಯಿಂದ ಜಿಲ್ಲಾವಾರು 10 ಮತ್ತು 12ನೇ ಸಾಮಾನ್ಯ ಪರೀಕ್ಷೆಯಲ್ಲಿ ಮೊದಲ ಮೂರು ಸ್ಥಾನಗಳನ್ನು ಪಡೆದ ವಿದ್ಯಾರ್ಥಿಗಳಿಗೆ ಪ್ರಮಾಣ ಪತ್ರ ಹಾಗೂ ಪ್ರೋತ್ಸಾಹ ಧನ ನೀಡುವ ಸಮಾರಂಭವನ್ನು ಹಮ್ಮಿಕೊಳ್ಳಲಾಗಿತ್ತು. ನಟ ವಿಜಯ್ ಅಧ್ಯಕ್ಷತೆಯಲ್ಲಿ ನಡೆದ ಈ ಸಮಾರಂಭದಲ್ಲಿ ಸುಮಾರು 1,600 ವಿದ್ಯಾರ್ಥಿನಿಯರು ಭಾಗವಹಿಸಿದ್ದರು. 


ಕಾರ್ಯಕ್ರಮದಲ್ಲಿ ಭಾಗವಹಿಸಿದ್ದ ವಿದ್ಯಾರ್ಥಿಗಳಿಂದ ಹಿಡಿದು ಪೋಷಕರವರೆಗೆ ಹಲವರು ‘ವಿಜಯ್ ರಾಜಕೀಯಕ್ಕೆ ಬಂದು ತಮಿಳುನಾಡು ರಕ್ಷಿಸಬೇಕು’ ಎಂದು ಆಗ್ರಹಿಸಿದರು. ವಿಜಯ್ ಕೂಡ ತಮ್ಮ ರಾಜಕೀಯ ಪ್ರವೇಶದ ಬಗ್ಗೆ ಸುಳಿವು ನೀಡಿದರಂತೆ. ಇದಾದ ನಂತರ 2026ರ ತಮಿಳುನಾಡು ವಿಧಾನಸಭಾ ಚುನಾವಣೆಯನ್ನು ಗುರಿಯಾಗಿಟ್ಟುಕೊಂಡು ವಿಜಯ್ ರಾಜಕೀಯಕ್ಕೆ ಬರಲಿದ್ದಾರೆ ಎಂಬ ವರದಿಗಳು ಬಂದಿದ್ದವು. 


ಇದನ್ನೂ ಓದಿ: ‘ಲೆಟ್ಸ್ ಗೆಟ್ ಮ್ಯಾರೀಡ್’ ಸಿನಿಮಾದ ಟ್ರೇಲರ್ ಹಾಗೂ ಆಡಿಯೋ ರಿಲೀಸ್‌ ಮಾಡಿದ ಕ್ಯಾಪ್ಟನ್ ಕೂಲ್ ಎಂ.ಎಸ್.ಧೋನಿ..!


ವಿಜಯ್ ರಾಜಕೀಯಕ್ಕೆ ಬಂದರೆ ಸಿನಿಮಾದಲ್ಲಿ ನಟಿಸುವುದರಿಂದ ಸಂಪೂರ್ಣವಾಗಿ ಹಿಂದೆ ಸರಿಯುವುದಾಗಿ ಹೇಳಿದ್ದಾರೆ. ಹೀಗಾಗಿ ವಿಜಯ್ ರಾಜಕೀಯಕ್ಕೆ ಬರುವುದು ಬಹುತೇಕ ಖಚಿತವಾಗಿದ್ದು, ಚಿತ್ರರಂಗದಿಂದ ಹೊರ ಬರಲಿದ್ದಾರೆ. ವಿಜಯ್ ಅಭಿನಯದ ಲೋಕೇಶ್ ಕನಕರಾಜ್ ನಿರ್ದೇಶನದ 'ಲಿಯೋ' ಚಿತ್ರ ನಿರ್ಮಾಣ ಹಂತದಲ್ಲಿದೆ. ಇದರಲ್ಲಿ ವಿಜಯ್ ಇತ್ತೀಚೆಗೆ ತಮ್ಮ ಪಾತ್ರವನ್ನು ನಿರ್ವಹಿಸಿದ್ದರು. ಇದಾದ ನಂತರ ನಿರ್ದೇಶಕ ವೆಂಕಟ್ ಪ್ರಭು ಅವರ ನಿರ್ದೇಶನದ ಚಿತ್ರದಲ್ಲಿ ನಟಿಸುತ್ತಿದ್ದಾರೆ. 


ದಳಪತಿಯವರ 68ನೇ ಚಿತ್ರಕ್ಕೆ ಇನ್ನೂ ಶೀರ್ಷಿಕೆ ಇಟ್ಟಿಲ್ಲ. ಚಿತ್ರಕ್ಕೆ ಪಾತ್ರವರ್ಗದ ಆಯ್ಕೆ ನಡೆಯುತ್ತಿದೆ. ವಿಜಯ್ ಅವರ 68 ನೇ ಚಿತ್ರ ಅವರ ಕೊನೆಯ ಚಿತ್ರ ಎಂದು ಹೇಳಲಾಯಿತು. ಹೀಗಿರುವಾಗ ಖ್ಯಾತ ನಿರ್ದೇಶಕರೊಬ್ಬರ ಜೊತೆ ಎರಡನೇ ಬಾರಿಗೆ ಕೈ ಜೋಡಿಸಲಿದ್ದಾರೆ ಎಂದು ವರದಿಯಾಗಿದೆ. ನಟ ವಿಜಯ್-ನಿರ್ದೇಶಕ ಶಂಕರ್ ಮೊದಲು ಕೈಜೋಡಿಸಿದ್ದು 'ನಂಬನ್' ಚಿತ್ರದಲ್ಲಿ. ಈ ಸಿನಿಮಾ ಸೂಪರ್ ಡೂಪರ್ ಹಿಟ್ ಆಗಿತ್ತು. ಇದೀಗ ಸುಮಾರು 11 ವರ್ಷಗಳ ನಂತರ ಇವರಿಬ್ಬರು ಮತ್ತೆ ಕೈಜೋಡಿಸಲಿದ್ದಾರೆ ಎಂಬ ಸುದ್ದಿ ಬಂದಿದೆ. ಈ ಚಿತ್ರ ವಿಜಯ್ ಅವರ 69ನೇ ಚಿತ್ರ ಅಥವಾ 70ನೇ ಚಿತ್ರವಾಗಿರಬಹುದು ಎಂದು ಹೇಳಲಾಗುತ್ತಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.