ಮಾಡೆಲ್ ಆಗಲು ವೈದ್ಯಕೀಯ ವೃತ್ತಿ ತೊರೆದು.. ಮದುವೆಗಾಗಿ ಧರ್ಮ ಬದಲಿಸಿ ವಿಚ್ಛೇದನದ ಪಡೆದು 15 ವರ್ಷ ಕಳೆದರೂ ಸಿಂಗಲ್ ಆಗಿರುವ ನಟಿ ಈಕೆ!
Famous Actress tragedy Life: ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ.. ವೈದ್ಯ ಮತ್ತು ಮನಶ್ಶಾಸ್ತ್ರಜ್ಞರಾಗಿರುವ ಏಕೈಕ ಭಾರತೀಯ ಸೂಪರ್ ಮಾಡೆಲ್ ಈ ನಟಿ..
Actress Aditi Govitrikar: ಈ ನಟಿ 'ಬ್ಯೂಟಿ ವಿತ್ ಬ್ರೈನ್'ಗೆ ಪರಿಪೂರ್ಣ ಉದಾಹರಣೆ. ಮಿಸೆಸ್ ವರ್ಲ್ಡ್ ಪ್ರಶಸ್ತಿಯನ್ನು ಗೆದ್ದ ಮೊದಲ ಭಾರತೀಯ ಮಹಿಳೆ. ಅವರು ವೈದ್ಯ ಮತ್ತು ಮನಶ್ಶಾಸ್ತ್ರಜ್ಞರಾಗಿರುವ ಏಕೈಕ ಭಾರತೀಯ ಸೂಪರ್ ಮಾಡೆಲ್. ಆದರೆ ವೈಯಕ್ತಕ ಜೀವನದಲ್ಲಿ ನಡೆದಿದ್ದು ಮಹಾದುರಂತ..
ಆ ಪ್ರಸಿದ್ಧ ನಟಿ ಬೇರಾರೂ ಅಲ್ಲ.. ಅದಿತಿ ಗೋವಿತ್ರಿಕರ್. ಅದಿತಿ ಗೋವಿತ್ರಿಕರ್ ಅವರು ಮಹಾರಾಷ್ಟ್ರದ ಪನ್ವೆಲ್‌ನಲ್ಲಿ ಜನಿಸಿದರು. ತನ್ನ ಎಂಬಿಬಿಎಸ್ ಮುಗಿಸಿದ ನಂತರ ಮಾಡೆಲಿಂಗ್ ಆರಂಭಿಸಿ 1996 ರಲ್ಲಿ ಗ್ಲಾಡ್ರಾಗ್ಸ್ ಮೆಗಾಮಾಡೆಲ್ ಸ್ಪರ್ಧೆಯಲ್ಲಿ ಗೆದ್ದರು.. ಅಲ್ಲಿಂದ ಅವರ ವೃತ್ತಿಜೀವನವು ಯಶಸ್ವಿಯ ಹಾದಿ ಹಿಡಿಯಿತು.. ಆದರೆ ಅವರ ವೈಯಕ್ತಿಕ ಜೀವನವು ತುಂಬಾ ಪ್ರಕ್ಷುಬ್ಧವಾಗಿತ್ತು. ಲಕ್ಷಾಂತರ ಜನರು ಅವಳನ್ನು ಪ್ರೀತಿಸುತ್ತಿದ್ದರೂ ಆಕೆ ಪ್ರೀತಿಸಿವರು ಮಾತ್ರ ಆಕೆಗೆ ಮುಳುವಾಯಿತು..
ಇದನ್ನೂ ಓದಿ- ರೂಪೇಶ್ ಶೆಟ್ಟಿ ನಟನೆಯ ಅಧಿಪತ್ರ ಸಿನಿಮಾ ರಿಲೀಸ್ ಡೇಟ್ ಫಿಕ್ಸ್
ಅದಿತಿ ಎಜುಕೇಟೆಡ್ ವುಮೆನ್.. ಅದರಂತೆಯೇ ಅವಳ ಸೌಂದರ್ಯವೂ ಯಾವಾಗಲೂ ಎಲ್ಲರ ಗಮನವನ್ನು ಸೆಳೆಯುತ್ತದೆ. ವರದಿಯ ಪ್ರಕಾರ, ಅದಿತಿ ತನ್ನ ವೈದ್ಯಕೀಯ ವಿದ್ಯಾಭ್ಯಾಸದ ಸಮಯದಲ್ಲಿ ತನ್ನ ಸಿನೀಯರ್ ಮುಫಜಲ್ ಲಕ್ಡಾವಾಲಾ ಅವರನ್ನು ಪ್ರೀತಿಸುತ್ತಿದ್ದಳು. ಇಬ್ಬರೂ ಸುಮಾರು ಆರು ವರ್ಷಗಳ ಕಾಲ ಡೇಟಿಂಗ್ ಮಾಡಿ.. 1997 ರಲ್ಲಿ, ಅದಿತಿ ವೈದ್ಯಕೀಯ ಕಾಲೇಜಿನಿಂದ ಪದವಿ ಪಡೆದಾಗ ಇಬ್ಬರೂ ಮದುವೆಯಾಗಲು ನಿರ್ಧರಿಸಿದರು. ಆದರೆ, ಮುಫಜಲ್ ಬೇರೆ ಧರ್ಮಕ್ಕೆ ಸೇರಿದವರಾಗಿದ್ದರು ಎಂಬ ಕಾರಣಕ್ಕೆ ಮುಫಜಲ್ ಪೋಷಕರಿಗೆ ಮದುವೆ ಮಾಡಲು ಇಷ್ಟವಿರಲಿಲ್ಲ. ಆದರೆ ಪ್ರೀತಿಯಲ್ಲಿರುವವರಿಗೆ ಯಾವುದೂ ಮುಖ್ಯವಲ್ಲ ಎಂದು ಹೇಳಲಾಗುತ್ತದೆ. ಮನೆಯವರ ಮಾತನ್ನೂ ಮೀರಿ ಇಬ್ಬರೂ 1998 ರಲ್ಲಿ ಮದುವೆಯಾದರು..
ಅದಿತಿ ಗೋವಿತ್ರಿಕರ್ ಮತ್ತು ಮುಫಜಲ್ ಲಕ್ಡಾವಾಲಾ ಅವರು ಸಿವಿಲ್ ಮತ್ತು ಮುಸ್ಲಿಂ ಕಾನೂನಿನ ಅಡಿಯಲ್ಲಿ ವಿವಾಹವಾದರು. ಮುಫಜಲ್ ಅವರನ್ನು ಮದುವೆಯಾದ ನಂತರ, ಅದಿತಿ ಇಸ್ಲಾಂಗೆ ಮತಾಂತರಗೊಂಡರು ಮತ್ತು ತನ್ನ ಹೆಸರನ್ನು ಸಾರಾ ಲಕ್ಡಾವಾಲಾ ಎಂದು ಬದಲಾಯಿಸಿಕೊಂಡರು. ನಂತರ ಒಂದು ಗಂಡು ಒಂದು ಹೆಣ್ಣು ಮಗುವಿಗೆ ಜನ್ಮ ನೀಡಿದರು..
ಮಗುವಿನ ಜನನದ ನಂತರ, ಅದಿತಿಯ ದಾಂಪತ್ಯ ಜೀವನವು ಹದಗೆಡಲು ಪ್ರಾರಂಭಿಸಿತು. ಮುಫಜಲ್‌ನ ಬಿಡುವಿಲ್ಲದ ಕೆಸಲ.. ಅದಿತಿಯ ಕೆಲವು ರೂಲ್‌ಗಳು ಅವರ ದಾಂಪತ್ಯದಲ್ಲಿ ಸಮಸ್ಯೆಗಳನ್ನು ಉಂಟುಮಾಡಲು ಪ್ರಾರಂಭಿಸಿದವು. ಇಬ್ಬರ ನಡುವೆ ಜಗಳ ನಡೆದಿರುವ ಬಗ್ಗೆ ಹಲವು ವರದಿಗಳು ಬಂದಿದ್ದವು. ಇದಲ್ಲದೇ ಇವರ ವಿಚ್ಛೇದನದ ವದಂತಿಗಳ ನಡುವೆ, ಮುಫಜಲ್ ಆಸ್ಟ್ರೇಲಿಯಾಕ್ಕೆ ತೆರಳಿದ್ದಾರೆ ಮತ್ತು ಅದಿತಿ ತನ್ನ ಮಕ್ಕಳೊಂದಿಗೆ ತನ್ನ ತಾಯಿಯ ಮನೆಗೆ ತೆರಳಿದ್ದಾಳೆ ಎಂದು ಸುದ್ದಿ ಹರಡಿತು.
ಕೊನೆಯಲ್ಲಿ ಅದಿತಿ ಮತ್ತು ಮುಫಜಲ್ 2008 ರಲ್ಲಿ ಬೇರ್ಪಟ್ಟರು ಮತ್ತು ಅದಿತಿ ಮಕ್ಕಳನ್ನು ತಮ್ಮಕಡೆಯೇ ಉಳಿಸಿಕೊಂಡರು. ವಿಚ್ಛೇದನ ನೀಡಬಾರದೆಂದು ಅದಿತಿ ಎಷ್ಟೇ ಪ್ರಯತ್ನಿಸಿದರೂ ಸಂಬಂಧ ಉಳಿಸಿಕೊಳ್ಳು ಅವರಿಂದಾಗಲೇ ಇಲ್ಲ.. "ವಿಚ್ಛೇದನದ 15 ವರ್ಷಗಳ ನಂತರ, 50 ವರ್ಷದ ಅದಿತಿಗೆ ಇನ್ನೂ ವಿಷಾದವಿದೆ" ಎಂದು ನಟಿ ಈ ಹಿಂದೆ ಸಂದರ್ಶನವೊಂದರಲ್ಲಿ ಹೇಳಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.