Ananya Pandey Intresting Comment: ಸದ್ಯ ಬಾಲಿವುಡ್ ಇಂಡಸ್ಟ್ರಿಯಲ್ಲಿ ಮೇಲೇರುತ್ತಿರುವ ಯುವ ನಾಯಕಿಯರಲ್ಲಿ ಅನನ್ಯಾ ಪಾಂಡೆ ಕೂಡ ಒಬ್ಬರು. ಈ ಬ್ಯೂಟಿ ಬಿಟೌನ್ ಹಿರಿಯ ನಟ ಚಂಕಿ ಪಾಂಡೆ ಅವರ ಪ್ರೀತಿಯ ಮಗಳು. ಈಗ ಚಿತ್ರರಂಗದಲ್ಲಿ ಹೆಸರು ಮಾಡುವ ಪ್ರಯತ್ನದಲ್ಲಿದ್ದಾರೆ. 


COMMERCIAL BREAK
SCROLL TO CONTINUE READING

ಈ ಹಿಂದೆ ವಿಜಯ್ ದೇವರಕೊಂಡ ಅಭಿನಯದ ಲೈಗರ್ ಚಿತ್ರದೊಂದಿಗೆ ನಟಿ ಸೌತ್ ಪ್ರೇಕ್ಷಕರ ಮುಂದೆ ಬಂದಿದ್ದರು... ಆದರೆ ಈ ಸಿನಿಮಾ ಬಾಕ್ಸ್ ಆಫೀಸ್ ನಲ್ಲಿ ಸೋತಿದ್ದರಿಂದ ಅನನ್ಯಾಗೆ ಹೆಚ್ಚಿನ ಅವಕಾಶಗಳು ಸಿಗಲಿಲ್ಲ. ಸದ್ಯ ಹಿಂದಿಯಲ್ಲಿ ಬ್ಯಾಕ್ ಟು ಬ್ಯಾಕ್ ಸಿನಿಮಾ ಮಾಡುತ್ತಿರುವ ಈ ಬ್ಯೂಟಿ ಇತ್ತೀಚೆಗಷ್ಟೇ ಸ್ಟಾರ್ ಹೀರೋ ಮಗನ ಬಗ್ಗೆ ಶಾಕಿಂಗ್ ಕಮೆಂಟ್ಸ್ ಮಾಡಿದ್ದಾಳೆ. ಅನನ್ಯಾ ಅವರ ಕಾಮೆಂಟ್ ಈಗ ವೈರಲ್ ಆಗಿದೆ. 


ಇದನ್ನೂ ಓದಿ-ಸಲ್ಮಾನ್‌ ಖಾನ್‌ ಗೆ ಮುತ್ತಿಟ್ಟು ಸ್ಟೇಜ್‌ ಮೇಲೆಯೇ ಮುದ್ದಾಡಿದ ಖ್ಯಾತ ನಟಿ..! ವಿಡಿಯೋ ಸಖತ್ ವೈರಲ್


ಬಾಲಿವುಡ್ ಇಂಡಸ್ಟ್ರಿಯಲ್ಲಿ ಒಬ್ಬ ಸ್ಟಾರ್ ಹೀರೋ ತನ್ನ ಮಗ ವಿಡಿಯೋ ಲೀಕ್ ಮಾಡುವುದಾಗಿ ಬೆದರಿಕೆ ಹಾಕಿದ್ದಾನೆ ಎಂದು ಹೇಳಿದ್ದಾರೆ. ಅವರು ಬೇರಾರೂ ಅಲ್ಲ, ಬಿಟೌನ್ ಬಾದ್ ಶಾ ಶಾರುಖ್ ಖಾನ್ ಅವರ ಪುತ್ರ ಆರ್ಯನ್ ಖಾನ್.  


ಇದನ್ನೂ ಓದಿ-ಈ ಖ್ಯಾತ ವ್ಯಕ್ತಿಯೊಂದಿಗೆ ಮದುವೆಗೆ ಗ್ರೀನ್‌ ಸಿಗ್ನಲ್‌ ಕೊಟ್ಟ ಶ್ರದ್ಧಾ ಕಪೂರ್!‌ ಬಾಲಿವುಡ್‌ ಬ್ಯೂಟಿ ಕೈ ಹಿಡಿಯೋ ಲಕ್ಕಿಬಾಯ್‌ ಯಾರು ಗೊತ್ತೇ?! 


ವಾಸ್ತವವವಾಗಿ ನಟ ಚಂಕಿ ಪಾಂಡೆ ಮಗಳು ಅನನ್ಯಾ ಪಾಂಡೆ ಮತ್ತು ಆರ್ಯನ್ ಖಾನ್ ಬಾಲ್ಯದ ಸ್ನೇಹಿತರು. ಇತ್ತೀಚೆಗೆ ಸಂದರ್ಶನವೊಂದರಲ್ಲಿ ಭಾಗವಹಿಸಿದ್ದ ಅನನ್ಯಾ, ಆರ್ಯನ್ ಜೊತೆಗಿನ ಬಾಲ್ಯದ ನೆನಪುಗಳನ್ನು ಹಂಚಿಕೊಂಡಿದ್ದಾರೆ. ಆ ಸಂದರ್ಶನದಲ್ಲಿ ಅನನ್ಯಾ, ''ನಾನು ಏನು ಮಾಡುತ್ತೇನೆ, ದಿನವಿಡೀ ಏನು ತಿನ್ನುತ್ತೇನೆ... ಎಲ್ಲವನ್ನೂ ವಿಡಿಯೋದಲ್ಲಿ ರೆಕಾರ್ಡ್ ಮಾಡುತ್ತಾನೆ.. ಅವುಗಳನ್ನು ಸೋಷಿಯಲ್‌ ಮಿಡಿಯಾದಲ್ಲಿ ಶೇರ್‌ ಮಾಡುತ್ತೇನೆ ಎಂದು ಬೆದರಿಕೆ ಹಾಕುತ್ತಿದ್ದರು.. ಅವೆಲ್ಲವೂ ನಮ್ಮ ಬಾಲ್ಯದ ನೆನಪುಗಳು ಎಂದು ಅನನ್ಯ ತಮಾಷೆಯಾಗಿ ಹೇಳಿದ್ದಾರೆ.. ಸದ್ಯ ಅವರ ಈ ಕಾಮೆಂಟ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 


ಈ ಮಧ್ಯೆ ಶಾರುಖ್ ಪುತ್ರ ಆರ್ಯನ್ ಖಾನ್ ಈಗಷ್ಟೇ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದಾರೆ. ಸದ್ಯ ಬಟ್ಟೆ ವ್ಯಾಪಾರದಲ್ಲಿ ಬ್ಯುಸಿಯಾಗಿರುವ ಆರ್ಯನ್, ಬ್ಯುಸಿನೆಸ್ ಕ್ಷೇತ್ರದಲ್ಲಿ ತಮ್ಮದೇ ಆದ ಇಮೇಜ್ ಕ್ರಿಯೇಟ್ ಮಾಡುತ್ತಿದ್ದಾರೆ. ಶೀಘ್ರದಲ್ಲೇ ಅವರ ಚಿತ್ರ ಪ್ರೇಕ್ಷಕರ ಮುಂದೆ ಬರಲಿದೆ. ಅನನ್ಯಾ ಇದುವರೆಗೆ ಹಲವು ಚಿತ್ರಗಳಲ್ಲಿ ಕೆಲಸ ಮಾಡಿದ್ದಾರೆ. ಕಡಿಮೆ ಸಮಯದಲ್ಲಿ ಅಭಿಮಾನಿಗಳ ಮನ ಗೆದ್ದಿದ್ದಾರೆ. ಈ ನಟಿಯ ಮುಂಬರುವ ಚಿತ್ರಕ್ಕಾಗಿ ಅಭಿಮಾನಿಗಳು ಕೂಡ ಕಾಯುತ್ತಿದ್ದಾರೆ. ನಟಿ ಸೋಷಿಯಲ್ ಮೀಡಿಯಾದಲ್ಲೂ ಸಕ್ರಿಯರಾಗಿದ್ದಾರೆ.  


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ