Anju statement about tiger prabhakar: ಅಂಜು ಪ್ರಭಾಕರ್ ಬಾಲನಟಿಯಾಗಿ ಬಂದು ನಂತರ ದಕ್ಷಿಣ ಭಾರತದ ಪ್ರಮುಖ ನಾಯಕಿಯರಲ್ಲಿ ಒಬ್ಬರಾದ ನಾಯಕಿ. ತಮಿಳಿನ ‘ಉದಿರ್ಪೂಕ್ಕಲ್’ ಚಿತ್ರದಲ್ಲಿ ಬಾಲನಟಿಯಾಗಿ ಕಾಣಿಸಿಕೊಂಡಿದ್ದ ಅಂಜು ‘ಒರ್ಮೈಕ್ಕೈ’ ಚಿತ್ರದ ಮೂಲಕ ಮಲಯಾಳಂ ಸಿನಿಜಗತ್ತಿಗೆ ಪಾದಾರ್ಪಣೆ ಮಾಡಿದ್ದಾರೆ. ಅಷ್ಟೇ ಅಲ್ಲದೆ, ಅಂಜು ಸೂಪರ್ ಸ್ಟಾರ್ ಗಳ ಜೊತೆ ಕೂಡ ನಟಿಸಿ ಸೈ ಎನಿಸಿಕೊಂಡಿದ್ದಾರೆ. 


COMMERCIAL BREAK
SCROLL TO CONTINUE READING

ಇದನ್ನೂ ಓದಿ:  50ನೇ ವಯಸ್ಸಿನಲ್ಲಿ ತನಗಿಂತ 12 ವರ್ಷ ಕಿರಿಯ ನಟಿ ಜೊತೆ 2ನೇ ಮದುವೆಗೆ ರೆಡಿಯಾದ ಖ್ಯಾತ ನಟ!


ಸದ್ಯ ತಮಿಳು ಧಾರಾವಾಹಿಗಳಲ್ಲಿ ಸಕ್ರಿಯರಾಗಿರುವ ಅಂಜು ಈಗ ತಮ್ಮ ಜೀವನದ ಬಗ್ಗೆ ಅನೇಕ ವಿಷಯಗಳನ್ನು ಬಹಿರಂಗಪಡಿಸಿದ್ದಾರೆ.


"17ನೇ ವಯಸ್ಸಿನಲ್ಲಿ ಕನ್ನಡ ಚಿತ್ರದಲ್ಲಿ ನಟಿಸಲೆಂದು ಬೆಂಗಳೂರಿಗೆ ಹೋದಾಗ ನನ್ನ ಜೀವನ ತಲೆಕೆಳಗಾಗಿತ್ತು. ಟೈಗರ್ ಪ್ರಭಾಕರ್ ಮೂರು ಮದುವೆಯಾಗಿದ್ದನ್ನು ಮರೆಮಾಚಿ ನನ್ನನ್ನು ಮದುವೆಯಾದರು" ಎಂದು ಶಕೀಲಾ ಜೊತೆಗಿನ ಸಂದರ್ಶನದಲ್ಲಿ ಅಂಜು ಪ್ರತಿಕ್ರಿಯೆ ನೀಡಿದ್ದಾರೆ.


"ಆಗ ತನಗೆ ಕೇವಲ 17 ವರ್ಷ, ಮದುವೆಗೆ ಸಿದ್ಧಳಿರಲಿಲ್ಲ. ಆಗ ಪ್ರಭಾಕರ್‌ʼಗೆ 50 ವರ್ಷ. ಈ ಬಗ್ಗೆ ಮನೆಯಲ್ಲಿ ಹೇಳಿದಾಗ ಬೇಡ ಎಂದು ಹೇಳಿದರೂ ಕೇಳದೆ ಪ್ರಭಾಕರ್ ಜೊತೆ ಓಡಿ ಹೋಗಿದ್ದೆ" ಎಂದು ಅಂಜು ಹೇಳಿದ್ದಾರೆ. 


ಇದನ್ನೂ ಓದಿ:  ಬೊಜ್ಜು ತುಂಬಿದ ಸೊಂಟ ಸ್ಲಿಮ್‌ ಆಗಬೇಕೆ? ಒಂದು ಚಮಚ ತುಪ್ಪವನ್ನು ಇದರಲ್ಲಿ ಬೆರೆಸಿ ಸೇವಿಸಿ... 5 ದಿನದಲ್ಲಿ ಬಳುಕುವ ಬಳ್ಳಿಯಂತಾಗೋದು ಗ್ಯಾರಂಟಿ


"ಇದಾದ ನಂತರ ಸತ್ಯ ಹೊರಬಿತ್ತು. ನಾನು ಬೆಚ್ಚಿಬಿದ್ದಿದ್ದೆ. ಆದರೆ ಆ ಹೊತ್ತಿಗಾಗಲೇ ನಾನು ಗರ್ಭಿಣಿಯಾಗಿದ್ದೆ. ಕೊನೆಗೆ ಅವನೊಂದಿಗೆ ಇರಲು ಇಷ್ಟಪಡದ ಕಾರಣ ಎಲ್ಲವನ್ನೂ ತೊರೆದು ಬಂದೆ. ಆ ನಂತರ ಖಿನ್ನತೆಗೆ ಒಳಗಾಗಿದ್ದ ನಾನು ನಿಧಾನವಾಗಿ ಅದರಿಂದ ಚೇತರಿಸಿಕೊಂಡು ಈಗ ಧಾರಾವಾಹಿಗಳ ಮೂಲಕ ಸಕ್ರಿಯವಾಗಿದ್ದೇನೆ" ಎಂದು ಅಂಜು ಹೇಳಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.