Anushka Shetty Net Worth: ಅನುಷ್ಕಾ ಶೆಟ್ಟಿಗೆ ತಮಿಳು, ತೆಲುಗು ಮಾತ್ರವಲ್ಲದೆ ಭಾರತದಲ್ಲೂ ಅಪಾರ ಅಭಿಮಾನಿಗಳಿದ್ದಾರೆ. 42 ವರ್ಷ ವಯಸ್ಸಿನಲ್ಲೂ ಶ್ರೀಮಂತ ನಟಿಯರ ಪಟ್ಟಿಯಲ್ಲಿ ಒಬ್ಬರಾಗಿದ್ದಾರೆ. ಅನುಷ್ಕಾ ಅವರ ನಿಜವಾದ ಹೆಸರು ಸ್ವೀಟಿ. ಸಿನಿಮಾಗಾಗಿ ತಮ್ಮ ಹೆಸರನ್ನು ಅನುಷ್ಕಾ ಎಂದು ಬದಲಾಯಿಸಿಕೊಂಡರು. 


COMMERCIAL BREAK
SCROLL TO CONTINUE READING

ಅನುಷ್ಕಾ ಶೆಟ್ಟಿ ಅವರ ಮೊದಲ ತಮಿಳು ಚಿತ್ರ 2006 ರಲ್ಲಿ ಬಿಡುಗಡೆಯಾದ ರೆಂಡು. ಇದರಲ್ಲಿ ಮಾಧವನ್ ಜೊತೆ ನಟಿಸಿದ್ದರು. ಆ ಚಿತ್ರದಲ್ಲಿ ಎರಡನೇ ನಾಯಕಿ ಆಗಿದ್ದರಿಂದ ಅಷ್ಟಾಗಿ ಜನಪ್ರಿಯತೆ ಗಳಿಸಿರಲಿಲ್ಲ. ಬಳಿಕ 2009 ರಲ್ಲಿ ಅರುಂಧತಿ ಚಿತ್ರ ಬಿಡುಗಡೆಯಾಯಿತು. ಈ ಚಿತ್ರದ ಮೂಲಕ ಖ್ಯಾತಿ ಗಳಿಸಿದರು. ಬಾಹುಬಲಿ 1 ಮತ್ತು ಬಾಹುಬಲಿ 2 ವಿಶ್ವಾದ್ಯಂತ ಹಿಟ್ ಆದವು. ಈ ಸಿನಿಮಾ ಮೂಲಕ ಅನುಷ್ಕಾ ಶೆಟ್ಟಿ ಫುಲ್‌ ಫೇಮಸ್‌ ಆದರು. 


ಇದನ್ನೂ ಓದಿ: Kiccha Sudeep: ಮಾತಿನಲ್ಲೇ ಗುಮ್ಮಿದ ʻಗೂಳಿʼ.. ಕಿಚ್ಚನಿಗೆ ʻSORRYʼ ಕೇಳಿದ ರಕ್ಷಕ್‌ ಬುಲೆಟ್! 


ಅನುಷ್ಕಾ ಶೆಟ್ಟಿ ಸಂಭಾವನೆ: 


ದಕ್ಷಿಣ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಅನುಷ್ಕಾ ಶೆಟ್ಟಿ ಕೂಡ ಒಬ್ಬರು. ಆರಂಭದಲ್ಲಿ ಕೆಲವು ಸಾವಿರ ಸಂಪಾದಿಸುತ್ತಿದ್ದ ಅನುಷ್ಕಾ ಶೆಟ್ಟಿ ನಂತರ ಲಕ್ಷಗಳಲ್ಲಿ ಸಂಪಾದಿಸತೊಡಗಿದರು. ಕೆಲವೇ ಚಿತ್ರಗಳ ನಂತರ ಕೋಟಿಗಟ್ಟಲೆ ಸಂಭಾವನೆ ಪಡೆಯಲಿ ಆರಂಭಿಸಿದ ಅನುಷ್ಕಾ ಕೊನೆಯದಾಗಿ ನಟಿಸಿದ್ದು 'ಮಿಸ್‌ ಶೆಟ್ಟಿ ಮಿಸ್ಟರ್ ಪೋಲಿಶೆಟ್ಟಿ' ಚಿತ್ರ. ಈ ಚಿತ್ರಕ್ಕೆ 6 ರಿಂದ 8 ಕೋಟಿ ಸಂಭಾವನೆ ಪಡೆದಿದ್ದಾರೆ ಎನ್ನಲಾಗಿದೆ.


ಅನುಷ್ಕಾ ಶೆಟ್ಟಿ ಒಟ್ಟು ಆಸ್ತಿ ಮೌಲ್ಯ:


ಅನುಷ್ಕಾ ಶೆಟ್ಟಿ ಭಾರತದಲ್ಲಿ ಅತಿ ಹೆಚ್ಚು ಸಂಭಾವನೆ ಪಡೆಯುವ ನಟಿಯರಲ್ಲಿ ಒಬ್ಬರು ಎಂದು ಹೇಳಲಾಗುತ್ತದೆ. ಅದರಂತೆ ಇವರ ಒಟ್ಟು ಆಸ್ತಿ ಮೌಲ್ಯ 130 ಕೋಟಿ ರೂ.ವರೆಗೆ ಇದೆ ಎನ್ನಲಾಗಿದೆ. ಜಾಹೀರಾತು ರಾಯಭಾರಿಯಾಗಲು 12 ಕೋಟಿಯವರೆಗೂ ಸಂಭಾವನೆ ಪಡೆಯುತ್ತಿದ್ದಾರೆ ಎನ್ನಲಾಗಿದೆ. ಅನುಷ್ಕಾ ದುಬಾರಿ ಕಾರುಗಳನ್ನು ಹೊಂದಿದ್ದಾರೆ, ಹೈದರಾಬಾದ್‌ನಲ್ಲಿ ದೊಡ್ಡ ಬಂಗಲೆ ಮತ್ತು ಇತರ ಚರಾಸ್ತಿಗಳನ್ನು ಹೊಂದಿದ್ದಾರೆ. ಇದೆಲ್ಲವನ್ನೂ ಸೇರಿಸಿ 130 ಕೋಟಿ ರೂ ವರೆಗೂ ಅನುಷ್ಕಾ ಶೆಟ್ಟಿ ಆಸ್ತಿ ಹೊಂದಿದ್ದಾರೆ. 


ಇದನ್ನೂ ಓದಿ: ಐಶ್ವರ್ಯಾ ರೈ, ಕಾಜೋಲ್‌ಗಿಂತ ಹೆಚ್ಚು ಕ್ರೇಜ್ ಪಡದಿದ್ದ ನಟಿ.. ಆದರೆ ಆ ಒಂದು ತಪ್ಪಿನಿಂದ ವೃತ್ತಿಜೀವನ ನಾಶ! 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.