ಚಂದನವನದಲ್ಲಿ ಇತ್ತೀಚಿಗೆ ಮದುವೆಯ ಪರ್ವ ಆರಂಭವಾಗಿದೆ ಎಂದರೆ ಹುಸಿಯಾಗಲಾರದು. ಹೌದು, ಧೃವ ಸರ್ಜಾ- ಮೇಘನಾ, ರಕ್ಷಿತ್ ಶೆಟ್ಟಿ-ರಶ್ಮಿಕ ಮಂದಣ್ಣ ಹೀಗೆ ಹಲವಾರು ತಾರೆಗಳು ಮದುವೆಯ ತಯಾರಿಯಲ್ಲಿದ್ದಾರೆ. ಅಂತಹವರ ಪಟ್ಟಿಗೆ ಹೊಸದಾಗಿ ಸೇರ್ಪಡೆಗೊಳ್ಳುತ್ತಿದ್ದಾರೆ ಗೂಗ್ಲಿ ಚಿತ್ರದ ನಿರ್ದೇಶಕ ಪವನ್ ಒಡೆಯರ್ ಹಾಗೂ ಕಾಫಿತೋಟ ಚಿತ್ರದ ನಟಿ ಅಪೇಕ್ಷಾ ಪುರೋಹಿತ್ ಅವರನ್ನು ವರಿಸಲಿದ್ದಾರೆ. 



COMMERCIAL BREAK
SCROLL TO CONTINUE READING

ಹೌದು, ಪವನ್ ಒಡೆಯರ್ ಮತ್ತು ಅಪೇಕ್ಷಾ ಪುರೋಹಿತ್ ಅವರಿಗೆ ಕಂಕಣ ಭಾಗ್ಯ ಕೂಡಿ ಬಂದಿದ್ದು, 
ಡಿ. 7ರಂದು ಅವರ ನಿಶ್ಚಿತಾರ್ಥ ನಡೆಯಲಿದೆ. 2018ರ ಆಗಸ್ಟ್ ನಲ್ಲಿ ಇವರಿಬ್ಬರ ವಿವಾಹ ನೆರವೇರಲಿದೆ ಎಂದು ತಿಳುದುಬಂದಿದೆ.