ನಟಿ ಭಾವನಾ ರಾಮಣ್ಣ ಮದುವೆ ಆಗ್ತಾರಾ ಅಥವಾ ಇಲ್ವಾ..? ಇಲ್ಲಿದೆ ಪಕ್ಕಾ ಉತ್ತರ..!
Bhavana Ramanna marriage : ಸ್ಯಾಂಡಲ್ವುಡ್ ನಟಿ ಭಾವನಾ ರಾಮಣ್ಣ ಈಗ ಸಿನಿಮಾ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಇಷ್ಟೂ ವರ್ಷಗಳು ಕಳೆದರೂ ಭಾವನಾ ಯಾಕೆ ಒಂಟಿಯಾಗಿ ಇರಲು ಬಯಸುತ್ತಾರೆ ಅನನ್ನೋದು ನಿಮಗೆ ಗೊತ್ತಾ..? ಜೀ ಕನ್ನಡ ನ್ಯೂಸ್ ನಡಿಸಿದ ಇಂಟರ್ವ್ಯೂನಲ್ಲಿ ತಮ್ಮ ವೈವಾಹಿಕ ಜೀವನದ ಬಗ್ಗೆ ಕೆಲವೊಂದಿಷ್ಟು ಇಂಟ್ರಸ್ಟಿಂಗ್ ವಿಚಾರವನ್ನು ತಿಳಿಸಿದ್ದಾರೆ.
Bhavana Ramanna : ನಟಿ ಭಾವನಾ ರಾಮಣ್ಣ ʼಚಂದ್ರಮುಖಿ ಪ್ರಾಣಸಖಿʼ ಸಿನಿಮಾ ಮೂಲಕ ಮನೆಮಾತಾದ ನಟಿ. ಈಗ ಸಿನಿಮಾ ಜೊತೆಗೆ ರಾಜಕೀಯ ಕ್ಷೇತ್ರದಲ್ಲೂ ಸಂಪೂರ್ಣವಾಗಿ ಬ್ಯುಸಿಯಾಗಿದ್ದಾರೆ. ಈ ಬಾರಿ ಕಾಂಗ್ರೆಸ್ ನಿಂದ ಯಶವಂತಪುರ ಕ್ಷೇತ್ರದಿಂದ ಕಣಕ್ಕಿಳಿಯಲು ಸಕಲ ರೀತಿಯಲ್ಲೂ ಸಿದ್ಧತೆ ಮಾಡಿಕೊಳ್ಳುತ್ತಿದ್ದಾರೆ. ಟಿಕೆಟ್ ಕೂಡ ಆಲ್ಮೋಸ್ಟ್ ಫೈನಲ್ ಆಗಿದೆ ಅನ್ನೋ ಮಾತುಗಳು ಕೂಡ ಕೇಳಿ ಬರುತ್ತಿದೆ. ಭಾವನಾ ರಾಮಣ್ಣ ಸಿನಿಜರ್ನಿಗೆ 20ಕ್ಕೂ ಹೆಚ್ಚು ವರ್ಷಗಳು ಕಳೆದಿವೆ. ಹಲವಾರು ಹಿಟ್ ಸಿನಿಮಾಗಳಲ್ಲಿ ಭಾವನಾ ರಾಮಣ್ಣ ಕೂಡ ಬಹುಮುಖ್ಯ ಪಾತ್ರ ಮಾಡಿದ್ದಾರೆ.
ಇಷ್ಟೂ ವರ್ಷಗಳು ಕಳೆದರೂ ಭಾವನಾ ಯಾಕೆ ಒಂಟಿಯಾಗಿ ಇರಲು ಬಯಸುತ್ತಾರೆ ಅನನ್ನೋದು ನಿಮಗೆ ಗೊತ್ತಾ..? ಯೆಸ್ ನಾನು ಸ್ವಲ್ಪ ಮುಂಗೋಪಿ ನಂಗೆ ಎಲ್ಲವೂ ಪರ್ಫೆಕ್ಟ್ ಆಗಿರಬೇಕು, ಮದುವೆ ಆದರೆ ಸಿಗುವವರು ನನ್ನ ಸಹಿಸಿಕೊಳ್ಳೋದು ಸ್ವಲ್ಪ ಕಷ್ಟ. ಅದಕ್ಕಾಗಿ ನನಗೆ ಮದುವೆ ಆಗಲು ಇಷ್ಟವಿಲ್ಲ. ನಾನು ತುಂಬಾ ನೆಮ್ಮದಿಯಾಗಿ ಇದ್ದೀನಿ. ಹೀಗೆ ಜೀವನ ಕಳೆದುಬಿಡುತ್ತೀನಿ ಅಂತ ಜೀ ಕನ್ನಡ ನ್ಯೂಸ್ ಇಂಟರ್ವ್ಯೂನಲ್ಲಿ ಹೇಳುತ್ತಾರೆ ಭಾವನಾ ರಾಮಣ್ಣ.
ಇದನ್ನೂ ಓದಿ: ಕುತೂಹಲ ಕೆರಳಿಸಿದ ಆರ’ ಸಿನಿಮಾದ ಟೀಸರ್ !
ಸಿನಿಮಾ ರಂಗಕ್ಕೆ ಕಾಲಿಟ್ಟ ಆರಂಭದಲ್ಲಿ ಭಾವನಾ ಹೆಸರು ನಂದಿನಿ ರಾಮಣ್ಣ ಅಂತಿತ್ತು. ನಿರ್ದೇಶಕ ಕೋಡ್ಲು ರಾಮಕೃಷ್ಣ, ನಂದಿನಿ ಹೆಸರನ್ನು ಭಾವನಾ ರಾಮಣ್ಣ ಎಂದು ಬದಲಿಸಿದರು. 1996ರಲ್ಲಿ ತುಳು ಚಿತ್ರದ ಮೂಲಕ ನಟನೆ ಆರಂಭಿಸಿದ ಭಾವನಾ 1997ರಲ್ಲಿ 'ನೀ ಮುಡಿದ ಮಲ್ಲಿಗೆ' ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಬಂದರು. ನಂತರ ನಂ 1, ಚಂದ್ರಮುಖಿ ಪ್ರಾಣಸಖಿ, ದೇವೀರಿ, ದೀಪಾವಳಿ, ಎಲ್ಲರ ಮನೆ ದೋಸೆನೂ, ಕುರಿಗಳು ಸಾರ್ ಕುರಿಗಳು, ಪರ್ವ, ನಿನಗಾಗಿ, ಚೆಲ್ವಿ, ರಾಂಗ್ ನಂಬರ್, ಪ್ರೀತಿ ಪ್ರೇಮ ಪ್ರಣಯ, ಶಾಂತಿ, ಫ್ಯಾಮಿಲಿ, ಇಂತಿ ನಿನ್ನ ಪ್ರೀತಿಯ, ಆಪ್ತರಕ್ಷಕ, ಚಿಂಗಾರಿ, ಭಾಗೀರಥಿ, ಕ್ರೇಜಿ ಸ್ಟಾರ್, ನಿರುತ್ತರ ಸಿನಿಮಾಗಳಲ್ಲಿ ಭಾವನಾ ನಟಿಸಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.