ಅಜ್ಜಿ ಜೊತೆ ರ‍್ಯಾಂಪ್ ವಾಕ್ ಮಾಡಿದ ನಟಿ!
ಎಲ್ಲರೂ ಸೂಪರ್ ಮಾಡೆಲ್ ಗಳ ಜೊತೆ ರ‍್ಯಾಂಪ್ ವಾಕ್ ಮಾಡಿದರೆ ಇಲ್ಲೋರ್ವ ನಟಿ ತನ್ನ ಅಜ್ಜಿಯ ಜೊತೆ ರ‍್ಯಾಂಪ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ.
ಬೆಂಗಳೂರು: ಎಲ್ಲರೂ ಸೂಪರ್ ಮಾಡೆಲ್ ಗಳ ಜೊತೆ ರ‍್ಯಾಂಪ್ ವಾಕ್ ಮಾಡಿದರೆ ಇಲ್ಲೋರ್ವ ನಟಿ ತನ್ನ ಅಜ್ಜಿಯ ಜೊತೆ ರ‍್ಯಾಂಪ್ ಮಾಡಿ ಎಲ್ಲರ ಗಮನ ಸೆಳೆದಿದ್ದಾರೆ. ಆ ನಟಿ ಯಾರು ಅಂತ ಯೋಚನೆ ಮಾಡ್ತಿದ್ದೀರಾ?
ನಮ್ಮ ಸ್ಯಾಂಡಲ್ ವುಡ್ ನಟಿ ಹರ್ಷಿಕಾ ಪೂಣಚ್ಚ ಅವರು ತಾಯಂದಿರ ದಿನಾಚರಣೆ ಅಂಗವಾಗಿ ಖಾಸಗಿ ಕಂಪನಿಯೊಂದು ಏರ್ಪಡಿಸಿದ್ದ ಕಾರ್ಯಕ್ರಮದಲ್ಲಿ ತಮ್ಮ ಅಜ್ಜಿ ಜೊತೆ ರ‍್ಯಾಂಪ್ ವಾಕ್ ಮಾಡಿ ಎಲ್ಲರ ಮೆಚ್ಚುಗೆಗೆ ಪಾತ್ರರಾದರು.
ಈ ಬಗ್ಗೆ ತಮ್ಮ ಟ್ವೀಟರ್ ಖಾತೆಯಲ್ಲಿ ಫೋಟೋಗಳನ್ನು ಹಂಚಿಕೊಂಡಿರುವ ಹರ್ಷಿಕಾ, "ಈಗಾಗಲೇ ನಾನು 100 ಶೋಗಳಲ್ಲಿ ಭಾಗವಹಿಸಿದ್ದೇನೆ. ಆದರೆ ಈ ಶೋ ಬಹಳ ಅಪರೂಪ ಮತ್ತು ವಿಶಿಷ್ಟ ಎನಿಸಿದೆ" ಎಂದು ಬರೆದುಕೊಂಡಿದ್ದಾರೆ. ಇದೀಗ ಈ ಫೋಟೊ ಸಾಮಾಜಿಕ ಜಾಲತಾಣಗಳಲ್ಲಿ ಸಾಕಷ್ಟು ವೈರಲ್ ಆಗಿದೆ.