Katrina Kaif: ಕತ್ರಿನಾ ಹೆಸರು ಅನೇಕ ಸೆಲೆಬ್ರಿಟಿಗಳೊಂದಿಗೆ ತಳುಕು ಹಾಕಿಕೊಂಡ ಸಮಯವೂ ಇತ್ತು. ನಟ ಸಲ್ಮಾನ್ ಖಾನ್ ಮತ್ತು ನಟ ರಣಬೀರ್ ಕಪೂರ್ ಜೊತೆಗಿನ ಕತ್ರಿನಾ ಸಂಬಂಧ ಸಾಕಷ್ಟು ಚರ್ಚೆಗೆ ಗ್ರಾಸವಾಗಿದೆ. ಸಲ್ಮಾನ್ ಖಾನ್ ಜೊತೆಗಿನ ಸಂಬಂಧವನ್ನು ಕತ್ರಿನಾ ಎಂದಿಗೂ ಒಪ್ಪಿಕೊಂಡಿಲ್ಲ. ಆದರೆ ರಣಬೀರ್ ಕಪೂರ್ ಜೊತೆಗಿನ ಬ್ರೇಕಪ್ ನಂತರ ನಟಿ ಮೌನ ಮುರಿದಿದ್ದಾರೆ. ರಣಬೀರ್ ಮತ್ತು ಕತ್ರಿನಾ ಸುಮಾರು 7 ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡುತ್ತಿದ್ದರು. ಅಭಿಮಾನಿಗಳು ಕೂಡ ಈ ಜೋಡಿಯನ್ನು ಇಷ್ಟಪಟ್ಟಿದ್ದರು.. ಆದರೆ ರಣಬೀರ್-ಕತ್ರೀನಾ ಬ್ರೇಕಪ್ ನಂತರ ಅಭಿಮಾನಿಗಳಿಗೂ ಬಿಗ್ ಶಾಕ್ ಆಗಿತ್ತು.. 


COMMERCIAL BREAK
SCROLL TO CONTINUE READING

ಸಂದರ್ಶನವೊಂದರಲ್ಲಿ ಕತ್ರಿನಾ ಕೈಫ್ ರಣಬೀರ್ ಕಪೂರ್ ಜೊತೆಗಿನ ಬ್ರೇಕ್ ಅಪ್ ಬಗ್ಗೆ ದೊಡ್ಡ ಹೇಳಿಕೆ ನೀಡಿದ್ದಾರೆ. 'ನಾನು ನನ್ನ ಬಗ್ಗೆ ಮಾತ್ರ ಗಮನ ಹರಿಸುತ್ತಿದ್ದ ಸಮಯ. ಎಲ್ಲವೂ ನನಗೆ ಅರಿವಾದಾಗ ನಾನು ನನ್ನ ಬಗ್ಗೆ ಮಾತ್ರ ಯೋಚಿಸುವ ಸಮಯ ಬಂದಿದೆ ಎಂದು ತಿಳಿದೆ' ಎಂದು ಹೇಳಿದರು.


ಇದನ್ನೂ ಓದಿ-ನಟ ನಾಗಾರ್ಜುನʼಗೆ ಬಿಗ್‌ ಶಾಕ್‌: ಅಕ್ರಮ ನಿರ್ಮಾಣ ಆರೋಪದಡಿ ಕನ್ವೆನ್ಷನ್ ಹಾಲ್ ಧ್ವಂಸ !


'ನನ್ನ ಜೊತೆಗೆ ನನ್ನ ಸಹೋದರಿಯೊಬ್ಬರಿಗೂ ಇಂತಹ ಪರಿಸ್ಥಿತಿ ಎದುರಾಗಿದೆ. ಆದ್ದರಿಂದ ಅವಳು ನನಗೆ ಸಹಾಯ ಮಾಡಿದಳು. ಬದಲಾವಣೆಗಳನ್ನು ನಾನೇ ಗುರುತಿಸಬಲ್ಲೆ. ನನ್ನ ಗೌರವವೇ ಅಪಾಯದಲ್ಲಿದೆ ಎಂದು ನಾನು ಅರಿತುಕೊಂಡೆ. ಆ ಬ್ರೇಕಪ್ ಅನ್ನು ನಾನು ಯಾವಾಗಲೂ ದೇವರ ಆಶೀರ್ವಾದ ಎಂದು ಪರಿಗಣಿಸುತ್ತೇನೆ" ಎಂದು ನಟಿ ಹೇಳಿದ್ದಾರೆ.


ಇದನ್ನೂ ಓದಿ-Bigg Boss 11: ́"ನಮಸ್ಕಾರ ದೇವ್ರು".. ಈ ಬಾರಿ ಬಿಗ್‌ಬಾಸ್‌ ಮನೆಗೆ ಎಂಟ್ರಿ ಕೊಡ್ತಾರಾ ಈ ಖ್ಯಾತ ಯೂಟ್ಯೂಬರ್..‌?! ಯಾರು ಅಂತಾ ಗೆಸ್‌ ಮಾಡಿ!


ಸಂದರ್ಶನವೊಂದರಲ್ಲಿ ಕತ್ರಿನಾ, 'ರಣಬೀರ್ ಮತ್ತು ನಾನು ಈಗಲೂ ಪರಸ್ಪರ ಗೌರವಿಸುತ್ತೇವೆ. ಪಶ್ಚಾತ್ತಾಪವಿಲ್ಲ... ನಡೆದದ್ದು ಒಳ್ಳೆಯದೇ ನನಗೆ ಹೆಚ್ಚು ತಿಳುವಳಿಕೆ ಇದೆ.' ಎಂದಿದ್ದಾರೆ.. ರಣಬೀರ್-ಕತ್ರೀನಾ ಬೇರ್ಪಟ್ಟು ಹಲವು ವರ್ಷಗಳೇ ಕಳೆದಿವೆ. ಇಬ್ಬರೂ ಈಗ ತಮ್ಮ ಜೀವನದಲ್ಲಿ ಮುಂದುವರೆದಿದ್ದಾರೆ.


ಕತ್ರಿನಾ ಜೊತೆ ಬ್ರೇಕ್ ಅಪ್ ಆದ ನಂತರ ನಟಿ ಆಲಿಯಾ ಭಟ್ ರಣಬೀರ್ ಜೀವನಕ್ಕೆ ಕಾಲಿಟ್ಟರು. ಹಲವು ವರ್ಷಗಳ ಕಾಲ ಪರಸ್ಪರ ಡೇಟಿಂಗ್ ಮಾಡಿದ ನಂತರ, ಅವರು ಮದುವೆಯಾದರು. ರಣಬೀರ್ ಮತ್ತು ಆಲಿಯಾ ದಂಪತಿಗೆ ಮಗಳಿದ್ದಾಳೆ. ಅವರ ಮಗಳ ಹೆಸರು ರಾಹಾ ಕಪೂರ್.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.