Keerthy Suresh Marriage : ಹಿರಿಯ ನಟಿ ಮೇನಕಾ ಅವರ ಪುತ್ರಿ, ಬಹುಭಾಷಾ ನಟಿ ಕೀರ್ತಿ ಸುರೇಶ್ ಅವರ ಮದುವೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟಾಕ್‌ ಆಗುತ್ತಿದೆ. ಮಲಯಾಳಂ ʼಗೀತಾಂಜಲಿʼ ಎಂಬ ಚಿತ್ರದ ಮೂಲಕ ನಾಯಕಿಯಾಗಿ ಬಣ್ಣದ ಲೋಕಕ್ಕೆ ಕಾಲಿಟ್ಟ ನಟಿ ಇದೀಗ ಮದುವೆಯಾಗ್ತಾರೆ ಅಂತ ಹೇಳಲಾಗುತ್ತಿದೆ. ಸದ್ಯ ಮಗಳ ಮದುವೆ ವಿಚಾರದ ಬಗ್ಗೆ ಸ್ವತಃ ಮೇನಕಾ ಅವರು ಕ್ಲಾರೀಟಿ ಕೊಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಮಲಯಾಳಂ ಬೆಡಗಿ ಹೆಚ್ಚಾಗಿ ತೆಲುಗು ಸಿನಿಮಾಗಳ ಮೂಲಕ ಎಲ್ಲರಿಗೂ ಚಿರಪರಿಚಿತರಾಗಿದ್ದಾರೆ. ಕೀರ್ತಿ ಕ್ಯೂಟ್‌ ಸ್ಮೈಲ್‌, ಅಪರೂಪದ ಸೌಂದರ್ಯಕ್ಕೆ ಎಲ್ಲರೂ ಫಿದಾ ಆಗಿದ್ದಾರೆ. ಕನ್ನಡಿಗರಿಗೂ ಈ ಚೆಲುವೆ ಗೊತ್ತು. ತೆಲುಗು ಮೊದಲ ಸಿನಿಮಾ ʼನೇನು ಶೈಲಜಾʼ ಹಿಟ್ ಆಗಿದ್ದರಿಂದ ಕೀರ್ತಿ ಟಾಲಿವುಡ್‌ನಲ್ಲಿ ಗೋಲ್ಡನ್ ಗರ್ಲ್‌ ಆಗಿ ಖ್ಯಾತಿ ಹೊಂದಿದರು. ಟಾಲಿವುಡ್‌ನಲ್ಲಿ ಬಹುಬೇಡಿಕೆಯ ನಟಿಯರಲ್ಲಿ ಕೀರ್ತಿ ಕುಡಾ ಒಬ್ಬರು.


ಇದನ್ನೂ ಓದಿ: ‘ಪೊನ್ನಿಯಿನ್ ಸೆಲ್ವನ್-2’ ತಮಿಳು, ಹಿಂದಿ ಆವೃತ್ತಿ Imaxನಲ್ಲಿ ಬಿಡುಗಡೆ: ಅಧಿಕೃತ ಘೋಷಣೆ


ಇನ್ನು ಕೀರ್ತಿ ಸುರೇಶ್‌ ಅವರ ಖ್ಯಾತಿ ಹೆಚ್ಚಿಸಿದ್ದು, ʼಮಹಾನಟಿʼ ಸಿನಿಮಾ ಅಂದ್ರೆ ತಪ್ಪಾಗಲ್ಲ. ಹಿರಿಯ ನಟಿ ಸಾವಿತ್ರಿಯವರ ಪಾತ್ರವನ್ನು ನಿಭಾಯಿಸಿ ʼಕೀರ್ತಿʼಗಿಟ್ಟಿಸಿಕೊಂಡರು. ಈ ಸಿನಿಮಾ ನಂತರ ಸತತವಾಗಿ ಲೇಡಿ ಓರಿಯೆಂಟೆಡ್ ಚಿತ್ರಗಳು ಬಂದವು. ಆದರೆ ಮಹಾನಟಿ ಚಿತ್ರ ನೀಡಿದ ಎಪೇಕ್ಟ್‌ ಬೇರೆಯಾವ ಸಿನಿಮಾ ನೀಡಲಿಲ್ಲ. ಬಹುತೇಕ ಎಲ್ಲಾ ಮಹಿಳಾ ಪ್ರಧಾನ ಸಿನಿಮಾಗಳು ಗಲ್ಲಾಪೆಟ್ಟಿಗೆಯಲ್ಲಿ ವಿಫಲವಾದವು.


ಇತ್ತೀಚಿಗೆ ಕೀರ್ತಿ ಮದುವೆ ವಿಚಾರ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಟಾಕ್‌ ಆಗುತ್ತಿದೆ. ಕೀರ್ತಿ ತಮ್ಮ ಬಾಲ್ಯದ ಸ್ನೇಹಿತನೊಂದಿಗೆ ರಿಲೇಷನ್‌ಶಿಪ್‌ ಹೊಂದಿದ್ದಾಳೆ ಎಂಬ ವದಂತಿ ಇದೆ. ಸುಮಾರು 13 ವರ್ಷಗಳಿಂದ ಇವರಿಬ್ಬರ ಲವ್‌ ಮಾಡ್ತೀದ್ದಾರೆ ಅಂತ ಟಾಕ್‌ ಇದೆ. ಆದರೆ ಇತ್ತೀಚೆಗೆ ಈ ವಿಚಾರಗಳನ್ನು ಕೀರ್ತಿ ಸುರೇಶ್ ಅವರ ತಾಯಿ ಮೇನಕಾ ಸುರೇಶ್ ಅವರು ಅಲ್ಲಗಳೆದಿದ್ದಾರೆ. ಇವೇಲ್ಲ ರೂಮರ್ಸ್‌ ಅಂತ ಹೇಳುವ ಮೂಲಕ ಸ್ಪಷನೆ ನೀಡಿದ್ದಾರೆ. ಸದ್ಯ ಪ್ಯಾನ್‌ ಇಂಡಿಯಾ ಸಿನಿಮಾ ʼದಸರಾದಲ್ಲಿ ನಾನಿ ಜೊತೆ ಕೀರ್ತಿ ಸುರೇಶ್ ನಟಿಸಿದ್ದಾರೆ. ಅಲ್ಲದೆ, ಮೆಗಾಸ್ಟಾರ್ ಚಿರಂಜೀವಿ ಜೊತೆ ʼಭೋಲಾ ಶಂಕರ್‌ʼದಲ್ಲಿ ಕಾಣಿಸಿಕೊಳ್ಳಲಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.