Actress Kriti Shetty : ಕರಾವಳಿ ಬ್ಯೂಟಿ ಕೃತಿ ಶೆಟ್ಟಿ ಮೊದಲ ಸಿನಿಮಾದ ಮೂಲಕವೇ ಚಿತ್ರರಂಗದಲ್ಲಿ ದೊಡ್ಡ ಖ್ಯಾತಿ ಗಳಿಸಿದರು.. ಇದೀಗ ನಟಿ ತಮ್ಮ ಹೊಸ ಸಿನಿಮಾದಲ್ಲಿ ತಾಯಿಯ ಪಾತ್ರ ಮಾಡಲಿದ್ದಾರೆ ಎನ್ನಲಾಗುತ್ತಿದೆ..


COMMERCIAL BREAK
SCROLL TO CONTINUE READING

ವಾಸ್ತವವಾಗಿ ನಿರ್ದೇಶಕ ಶ್ರೀರಾಮ್ ಆದಿತ್ಯ ನಿರ್ದೇಶಿಸುತ್ತಿರುವ ಶರ್ವಾನಂದ್ ಅಭಿನಯದ ಮನಮೆ ಚಿತ್ರದಲ್ಲಿ ಕೃತಿ ಶೆಟ್ಟಿ ತಾಯಿ ಪಾತ್ರದಲ್ಲಿ ನಟಿಸುತ್ತಿದ್ದಾರೆ ಎನ್ನುವ ಮಾಹಿತಿ ಹೊರಬಿದ್ದಿದೆ..  


ನಿರ್ಮಾಪಕ ಟಿ ಜಿ ವಿಶ್ವಪ್ರಸಾದ್ ನಿರ್ಮಾಣದ ಈ ಚಿತ್ರವನ್ನು ಪೀಪಲ್ ಮೀಡಿಯಾ ಫ್ಯಾಕ್ಟರಿ ಬ್ಯಾನರ್ ಅಡಿಯಲ್ಲಿ ರಾಮ್ಸೆ ಸ್ಟುಡಿಯೋಸ್ ನಿರ್ಮಿಸುತ್ತಿದೆ. ಜೂನ್ 7 ರಂದು ಬಿಡುಗಡೆಯಾಗಲಿರುವ ಈ ಸಿನಿಮಾದಲ್ಲಿ ಕೃತಿ ತಾಯಿ ಪಾತ್ರದಲ್ಲಿ ಮಿಂಚಲಿದ್ದಾರೆ.. 


ಇದನ್ನೂ ಓದಿ-Shravani Subramanya Serial: ಶ್ರಾವಣಿ ಸುಬ್ರಮಣ್ಯ ಸಿರೀಯಲ್‌ ಆಸಿಯಾ ಫಿರ್ದೋಸ್ ನಿಜಕ್ಕೂ ಯಾರು ಗೊತ್ತಾ? ಈಕೆ ಬರೀ ನಟಿ ಮಾತ್ರವಲ್ಲ!!


ಈ ಪಾತ್ರದ ಬಗ್ಗೆ ಮಾತನಾಡಿದ ನಟಿ "ಸುಬ್ರದಾ ಪಾತ್ರ ನನಗೆ ಸಂಪೂರ್ಣ ಹೊಸದು. ಇಲ್ಲಿಯವರೆಗೆ ನಾನು ಮುದ್ದಾದ ಮತ್ತು ಬಬ್ಲಿ ಪಾತ್ರಗಳನ್ನು ಮಾಡಿದ್ದೇನೆ. ಆದರೆ, ಈ ಪಾತ್ರ ತುಂಬಾ ಸ್ಟ್ರಿಕ್ಟ್ ಎಂದು ಹೇಳುವ ಮೂಲಕ ಪ್ರೇಕ್ಷಕರಲ್ಲಿ ಕುತೂಹಲ ಮೂಡಿಸಿದ್ದಾರೆ.. 


ಕೃತಿ ಶೆಟ್ಟಿ ಕೂಡ ತನ್ನ ಫಾಲೋವರ್ಸ್ ಹೆಚ್ಚಿಸಿಕೊಳ್ಳುತ್ತಾ ಸಾಮಾಜಿಕ ಜಾಲತಾಣಗಳಲ್ಲಿ ಸದ್ದು ಮಾಡುತ್ತಿದ್ದಾರೆ. ಆಗೊಮ್ಮೆ ಈಗೊಮ್ಮೆ ಹಾಟ್‌ ಪೋಟೋಗಳನ್ನು ಪೋಸ್ಟ್ ಮಾಡುವ ಮೂಲಕ ಪಡ್ಡೆಹುಡುಗರ ಹಾರ್ಟ್‌ ನ್ನು ಕದಿಯುತ್ತಿದ್ದಾರೆ.. 


ಗ್ಲಾಮರ್ ವಿಚಾರದಲ್ಲಿ ಟಾಪ್‌ನಲ್ಲಿರುವ ಈ ಚೆಲುವೆಗೆ ನಿರೀಕ್ಷೆಯಷ್ಟು ಅವಕಾಶಗಳು ಸಿಗುತ್ತಿಲ್ಲ. ಈ ಹಿನ್ನಲೆಯಲ್ಲಿ ವಿಭಿನ್ನ ಪಾತ್ರಗಳನ್ನು ಒಪ್ಪಿಕೊಂಡು ಮತ್ತೆ ಸಿನಿಮಾಗಳಲ್ಲಿ ಬ್ಯುಸಿಯಾಗಲು ಈ ಮೋಹನಾಂಗಿ ಮುಂದಾಗಿದ್ದಾರೆ. 


ಇದನ್ನೂ ಓದಿ-ಐ ಮಿಸ್ ಯು ಸೋ ಮಚ್ ಅಪ್ಪ... ಭಾವುಕರಾದ ಮಹೇಶ್ ಬಾಬು!


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.