Actress Nidhi Agarwal: ಪ್ರತಿಯೊಂದು ಉದ್ಯಮದಲ್ಲೂ ಮಹಿಳೆಯರ ಮೇಲಿನ ಕಿರುಕುಳ ಇತ್ತೀಚೆಗೆ ಹೆಚ್ಚಾಗುತ್ತಲೇ ಇದೆ. ಹುಡುಗಿಯರು ಎಲ್ಲಿ ಕೆಲಸ ಮಾಡುತ್ತಾರೋ ಅಲ್ಲಿ ಅಭದ್ರತೆಯ ಭಾವನೆ ಇದೆ ಎಂದು ಇತ್ತೀಚಿನ ಸಮೀಕ್ಷೆಯೊಂದು ಬಹಿರಂಗಪಡಿಸಿದೆ. ಚಿತ್ರರಂಗದಲ್ಲಿ ನಡೆಯುತ್ತಿರುವ ಲೈಂಗಿಕ ಕಿರುಕುಳದ ಬಗ್ಗೆ ಹೊಸದಾಗಿ ಹೇಳಬೇಕಿಲ್ಲ. 


COMMERCIAL BREAK
SCROLL TO CONTINUE READING

ಇಂಡಸ್ಟ್ರಿಯಲ್ಲಿ ಕಾಸ್ಟಿಂಗ್ ಕೌಚ್ ನಡೆಯುತ್ತಿದೆ ಎಂದು ಈಗಾಗಲೆ ಹಲವು ನಟ ನಟಿಯರು ಮುಂದೆ ಬಂದು ತಮಗಾದ ಅನುಭವವನ್ನು ಬಿಚ್ಚಿಟ್ಟಿದ್ದಾರೆ. ಇತ್ತೀಚಿಗೆ ನಟಿಯರು ತಮಗೆ ಎದುರಾಗಿರುವ ಲೈಂಗಿಕ ಕಿರುಕುಳ, ಕಾಸ್ಟಿಂಗ್ ಕೌಚ್ ಮತ್ತು ಕಾಮೆಂಟ್‌ಗಳ ಬಗ್ಗೆ ಬಹಿರಂಗಪಡಿಸುತ್ತಿದ್ದಾರೆ. ಇತ್ತೀಚೆಗಷ್ಟೇ ಸ್ಟಾರ್ ಹೀರೋಯಿನ್ ಹನಿರೋಸ್ ಲೈಂಗಿಕ ಕಿರುಕುಳಕ್ಕೊಳಗಾದ ಸುದ್ದಿ ಭಾರೀ ಚರ್ಚೆಗೆ ಗ್ರಾಸವಾಗಿದೆ.


ಇದರ ಬೆನ್ನಲ್ಲೆ, ಮತ್ತೊಬ್ಬ ನಟಿ ಲೈವ್‌ನಲ್ಲಿ ತಮಗಾದ ಲೈಂಗಿಕ ಕಿರುಕುಳದ ಬಗ್ಗೆ ಮಾತನಾಡಿದ್ದಾರೆ. ಅಷ್ಟಕ್ಕೂ ಆ ನಾಯಕಿ ಬೇರೆ ಯಾರೂ ಅಲ್ಲ ನಿಧಿ ಅಗರ್ವಾಲ್. ಈ ವಿಚಾರವನ್ನು ನಿಧಿ ಅಗರ್ವಾಲ್ ಅವರು ಸಾಮಾಜಿಕ ಜಾಲತಾಣಗಳಲ್ಲಿ ತನಗೆ ಕಿರುಕುಳ ನೀಡುತ್ತಿದ್ದಾರೆ ಎಂದು ದೂರಿನಲ್ಲಿ ತಿಳಿಸಿದ್ದು, ಆ ವ್ಯಕ್ತಿಯ ಬೆದರಿಕೆಯಿಂದ ನಿಧಿ ಅಗರ್ವಾಲ್ ಮಾನಸಿಕ ಒತ್ತಡಕ್ಕೆ ಒಳಗಾಗಿರುವುದಾಗಿ ಆರೋಪಿಸಿದ್ದಾರೆ. ನಿಧಿ ಅಗರ್ವಾಲ್ ಅವರಿಂದ ದೂರು ಸ್ವೀಕರಿಸಿದ ಪೊಲೀಸರು ತನಿಖೆ ಆರಂಭಿಸಿದ್ದಾರೆ.


ಇನ್ನು ನಿಧಿ ಅಗರ್ವಾಲ್ ಕೆರಿಯರ್ ವಿಚಾರಕ್ಕೆ ಬಂದರೆ ತನ್ನ ಸೌಂದರ್ಯ ಹಾಗೂ ನಟನೆಯಿಂದ ಮನ ಕದ್ದ ಈ ಮೋಹನಾಂಗಿ ಕಡಿಮೆ ಸಮಯದಲ್ಲಿ ತೆಲುಗು ಚಿತ್ರರಂಗದಲ್ಲಿ ಸ್ಟಾರ್ ಹೀರೋಯಿನ್ ಆಗಿ ಗುರುತಿಸಿಕೊಂಡಿದ್ದಾಳೆ. ತನ್ನ ಸೌಂದರ್ಯ ಮತ್ತು ನಟನೆಯ ಹೊರತಾಗಿ, ಅವರು ಸಾಮಾಜಿಕ ಮಾಧ್ಯಮದಲ್ಲಿ ತುಂಬಾ ಸಕ್ರಿಯರಾಗಿದ್ದಾರೆ ಮತ್ತು ಅವರ ಅಭಿಮಾನಿಗಳೊಂದಿಗೆ ಸಂಪರ್ಕದಲ್ಲಿರುತ್ತಾರೆ. 'ಸವ್ಯಸಾಚಿ' ಚಿತ್ರದ ಮೂಲಕ ತೆಲುಗು ಪ್ರೇಕ್ಷಕರ ಹೃದಯ ಕದ್ದ ನಿಧಿ, ನಂತರ 'ಮಿಸ್ಟರ್ ಮಜ್ನು' ಮತ್ತು 'ಇಸ್ಮಾರ್ಟ್ ಶಂಕರ್' ಚಿತ್ರಗಳಲ್ಲಿ ನಟಿಸಿ ಚಿರಪರಿಚಿತರಾದರು. ನಿಧಿ ಅಗರ್ವಾಲ್ ಪ್ರಸ್ತುತ ಪವನ್ ಕಲ್ಯಾಣ್ ಜೊತೆ 'ಹರಿಹರ ವೀರಮಲ್ಲು' ಚಿತ್ರದಲ್ಲಿ ನಟಿಸುತ್ತಿದ್ದಾರೆ. ಈ ವರ್ಷ ಚಿತ್ರ ತೆರೆಗೆ ಬರಲಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ