Niharika Konidela divorce reason : ಕಳೆದ ಎರಡ್ಮೂರು ವರ್ಷಗಗಳಿಂದ ನಟ ನಟಿಯರ ವಿಚ್ಛೇದನ ಪ್ರಕರಣಗಳು ಸಂಚಲನ ಸೃಷ್ಟಿಸುತ್ತಿವೆ. ಈ ಪೈಕಿ ಮೆಗಾ ಪ್ರಿನ್ಸೆಸ್ ನಿಹಾರಿಕಾ ಕೊನಿಡೇಲಾ ಅವರ ಡಿವೋರ್ಸ್‌ ಪ್ರಕರಣವೂ ಒಂದು. ನಿಹಾರಿಕಾ ಚೈತನ್ಯ ಜೊನ್ನಲಗಡ್ಡ ಅವರನ್ನು ಪ್ರೀತಿಸಿ ಮದುವೆಯಾದರು. ಅವರ ಡೆಸ್ಟಿನೇಶನ್ ವೆಡ್ಡಿಂಗ್ ಕೂಡ ತುಂಬಾ ಅದ್ಧೂರಿಯಾಗಿ ಜರುಗಿತ್ತು.. ಆದರೆ ಮದುವೆಯಾದ ಒಂದೇ ವರ್ಷಕ್ಕೆ ಇಬ್ಬರೂ ಬೇರ್ಪಟ್ಟಿದ್ದಾರೆ.


COMMERCIAL BREAK
SCROLL TO CONTINUE READING

ಮೊದಲ ಬಾರಿಗೆ ತಮ್ಮ ಡಿವೋರ್ಸ್‌ ಕುರಿತು ಮಾತನಾಡಿರುವ ನಿಹಾರಿಕಾ, ಒಂದು ವರ್ಷದೊಳಗೆ ನಾವು ಡಿವೋರ್ಸ್‌ ಪಡೆಯುತ್ತೇವೆ ಅಂತ ನಾನು ಭಾವಿಸಿರಲಿಲ್ಲ. ಸಂಸಾರ ಬಿಟ್ಟ ನೋವಿನಿಂದ ಯಾರನ್ನೂ ಸುಲಭವಾಗಿ ನಂಬಬಾರದು ಎಂದು ಕಲಿತೆ. ವಿಚ್ಛೇದನದಿಂದ ಜೀವನ ಮುಗಿಯುವುದಿಲ್ಲ. ಅವರನ್ನೆಲ್ಲ ನೆನೆಸಿಕೊಂಡರೂ ಕಣ್ಣೀರು ಬರುತ್ತದೆ ಎಂದು ಭಾವುಕರಾಗಿ ತಮ್ಮ ನೋವನ್ನು ಹೊರಹಾಕಿದ್ದಾರೆ. 


ಇದನ್ನೂ ಓದಿ: ಎಲಿಮಿನೇಟ್ ಆದ ಸ್ಪರ್ಧಿಗಳಿಂದ ಬಯಲಿಗೆ ಬಂತು ವಿನ್ನರ್‌ ಹೆಸರು..! ಗೆಲ್ಲೋದು ಯಾರ್‌ ಗೊತ್ತೆ?


ಮದುವೆಯಾದ ಒಂದೇ ವರ್ಷದಲ್ಲಿ ವಿಚ್ಛೇದನ ಪಡೆದ ನಿಹಾರಿಕಾ ಮೇಲೆ ಸಾಕಷ್ಟು ಟ್ರೋಲ್‌ಗಳು ಬಂದಿದ್ದವು. ಇಷ್ಟಕ್ಕೆ ಡೆಸ್ಟಿನೇಶನ್ ವೆಡ್ಡಿಂಗ್‌ಗೆ ಇಷ್ಟೊಂದು ಖರ್ಚು ಬೇಕಿತ್ತಾ ಅಂತ ಹಲವರು ಟೀಕಿಸಿದರು. ಇದನ್ನೂ ನಿಹಾರಿಕಾ ಪ್ರತಿಕ್ರಿಯಿಸಿದ್ದರು. ಪ್ರತಿಯೊಬ್ಬರ ಜೀವನದಲ್ಲಿ ಮದುವೆ ಎನ್ನುವುದು ಬಹಳ ಮುಖ್ಯ ವಿಷಯ. ಯಾವುದೇ ಜೋಡಿ ಶಾಶ್ವತವಾಗಿ ಜೊತೆಯಾಗಿಯೇ ಇರಬೇಕೆಂಬ ಉದ್ದೇಶದಿಂದ ಮದುವೆಯಾಗುತ್ತಾರೆ ಅಷ್ಟೇ ಎಂದು ತಮ್ಮ ಅಭಿಪ್ರಾಯವನ್ನು ವ್ಯಕ್ತಪಡಿಸಿದ್ದಾರೆ. ಆದರೆ ವರ್ಷದೊಳಗೆ ಬೇರ್ಪಡುತ್ತೇವೆ ಎಂದುಕೊಂಡು ಯಾರೂ ದುಡ್ಡು ಖರ್ಚು ಮಾಡಿ ಮದುವೆಯಾಗುವುದಿಲ್ಲ ಎಂದು ಟ್ರೋಲಿಗರಿಗೆ ಖಡಕ್‌ ಉತ್ತರ ಕೊಟ್ಟಿದ್ದರು.


ಇನ್ನು ಡಿವೋರ್ಸ್‌ ವಿಚಾರವಾಗಿ ಮಾತನಾಡಿ, ಅಂದುಕೊಂಡಂತೆ ಏನೂ ಆಗಲಿಲ್ಲ. ಅದಕ್ಕಾಗಿಯೇ ಸಂಬಂಧವನ್ನು ಕೊನೆಗೊಳಿಸಿದ್ದೇನೆ ಎಂದು ಹೇಳಿದ್ದಾರೆ. ತನ್ನ ಕುಟುಂಬದ ಸದಸ್ಯರು ಮತ್ತು ಸ್ನೇಹಿತರು ತನ್ನ ಬಗ್ಗೆ ಏನು ಯೋಚಿಸುತ್ತಾರೆ ಎಂಬುದೇ ತನಗೆ ಮುಖ್ಯ, ಇತರರ ಮಾತನ್ನ ನಾನು ಲೆಕ್ಕಿಸುವುದಿಲ್ಲ ಎಂದು ಟೀಕೆ ಮಾಡುವವರಿಗೆ ಟಾಂಗ್‌ ನೀಡಿದ್ದಾರೆ.


ಇದನ್ನೂ ಓದಿ:ನನ್ನ ಮಗಳು ದರ್ಶನ್‌ ಪುತ್ರಿ ಅಂತ..! ವಿಜಯಲಕ್ಷ್ಮಿ ದರ್ಶನ್‌ಗೆ ಖಡಕ್‌ ಉತ್ತರ ಕೊಟ್ಟ ಪವಿತ್ರ ಗೌಡ..! 


ವಿಚ್ಛೇದನದ ನಂತರ ಈ ಮೆಗಾ ರಾಜಕುಮಾರಿ ಸಾಲು ಸಾಲು ಸಿನಿಮಾಗಳಲ್ಲಿ ನಟಿಸುತ್ತಿದ್ದಾರೆ. ಸದ್ಯ ತೆಲುಗು ಮತ್ತು ತಮಿಳಿನಲ್ಲಿ ಎರಡು ಚಿತ್ರಗಳನ್ನು ಮಾಡುತ್ತಿರುವುದಾಗಿ ಹೇಳಿಕೊಂಡಿದ್ದಾರೆ. ಈಗಾಗಲೇ 'ಡೆಡ್ ಪಿಕ್ಸೆಲ್ಸ್' ವೆಬ್ ಸೀರೀಸ್ ಮೂಲಕ ನಟಿಯಾಗಿ ರೀ ಎಂಟ್ರಿ ಕೊಟ್ಟಿದ್ದಾರೆ. ನಟಿಯಾಗಿ ಮಾತ್ರವಲ್ಲದೆ ನಿರ್ಮಾಪಕಿಯಾಗಿಯೂ ನಿಹಾರಿಕಾ ಸಖತ್‌ ಬ್ಯುಸಿಯಾಗಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/watch?v=xFI-KJNrEP8
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.