Actress Nishvika Naidu: ಸಖತ್ ವರ್ಕ್ಔಟ್  ಮೂಲಕ ಪಡ್ಡೆ ಹುಡುಗರ ನಿದ್ದೆ ಕದ್ದ ಚೆಲುವೆ ನಟಿ ನಿಶ್ವಿಕಾ ನಾಯ್ಡು...! ಆಣೆ ಮಾಡಿ ಹೇಳುತ್ತೀನಿ ನಾನು ನಿನ್ನವಳು ಅಂತ ಎಲ್ಲಾರ ದಿಲ್ ಖುಷ್ ಆಗಿಸಿದ ನಟಿ ನಿಶ್ವಿಕಾ ನಾಯ್ಡು ಸದ್ಯ ಸಖತ್ ಬ್ಯುಸಿಯಾಗಿರೋ ಕ್ಯೂಟ್ ನಟಿ. ಮೊನ್ನೆ ಮೊನ್ನೆಯಷ್ಟೇ ಕರ್ನಾಟಕ ವಿಧಾನಸಭಾ ಚುನಾವಣೆ ಸಂದರ್ಭದಲ್ಲಿ ಸಿದ್ದರಾಮಯ್ಯ ಅವರ ಪರವಾಗಿ ಭರ್ಜರಿಯಾಗಿ ಪ್ರಚಾರ ನಡೆಸಿದ ನಿಶ್ವಿಕಾ ಸದ್ಯ ಈಗ ಫುಲ್ ವರ್ಕೌಟ್ನಲ್ಲಿ ಬ್ಯುಸಿಯಾಗಿದ್ದಾರೆ.


COMMERCIAL BREAK
SCROLL TO CONTINUE READING

ಹೌದು ಜಿಮ್ ನಲ್ಲಿ ದೇಹದ ಸೌಂದರ್ಯ ಮತ್ತು ಆರೋಗ್ಯದ ದೃಷ್ಟಿಯಿಂದ ಸಖತ್ ಆಗಿ ವರ್ಕೌಟ್ ಮಾಡೋ ವಿಡಿಯೋವನ್ನ ತಮ್ಮ ಸೋಶಿಯಲ್ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ಇದನ್ನ ನೋಡಿದ ಫ್ಯಾನ್ಸ್ ಅಯ್ಯೋ ಯಪ್ಪಾ!  ಎಷ್ಟು ಚಂದ ಕಾಣಿಸ್ತಾಳೆ ನಮ್ಮ ಹುಡುಗಿ ಅಂತ ಬಾಯಿಬಾಯಿ ಬಡ್ಕೋತ್ತ ಇದ್ದಾರೆ.


ಇದನ್ನೂ ಓದಿ- Ravichandran Birthday: 'ರವಿಬೋಪಣ್ಣ' ಸಿನಿಮಾಗೆ ಜನ ಥೀಯೇಟರ್ ಗೆ ಬಂದಿಲ್ಲ ಅನ್ನೋ ನೋವು ರವಿಚಂದ್ರನ್‌ಗೆ ಇನ್ನೂ ಕಾಡ್ತಿದ್ಯಾ?


ಇನ್ನು ಬೆಂಗಳೂರಿನಲ್ಲಿ ಜನಿಸಿದ ನಿಶ್ವಿಕಾ ನಾಯ್ಡು ಕನ್ನಡ ಚಿತ್ರರಂಗದ ಯುವ ನಟಿ. ಇವರು ಬೆಂಗಳೂರಿನ ಮೌಂಟ್ ಕಾರ್ಮೆಲ್ ಕಾಲೇಜಿನಲ್ಲಿ ಮನಃಶಾಸ್ತ್ರದಲ್ಲಿ ಪದವಿ ಮುಗಿಸಿದ್ದಾರೆ. ಮಾಡೆಲಿಂಗ್ ಕ್ಷೇತ್ರದ ಮೂಲಕ ಚಿತ್ರರಂಗಕ್ಕೆ ಪ್ರವೇಶಿಸಿದ ನಿಶ್ವಿಕಾರ ಮೊದಲ ಚಿತ್ರ 'ವಾಸು ನಾನ್ ಪಕ್ಕಾ ಕಮರ್ಷಿಯಲ್'. ವಿಶೇಷವೆಂದರೆ ಇವರ ಮೊದಲ ಚಿತ್ರ ಬಿಡುಗಡೆಗೂ ಮುನ್ನವೇ ಎರಡನೇ ಚಿತ್ರ 'ಅಮ್ಮಾ ಐ ಲವ್ ಯು' ಚಿತ್ರ ಬಿಡುಗಡೆಯಾಯಿತು.


ಇದನ್ನೂ ಓದಿ- Ravichandran Birthday: 'ರವಿಬೋಪಣ್ಣ' ಸಿನಿಮಾಗೆ ಜನ ಥೀಯೇಟರ್ ಗೆ ಬಂದಿಲ್ಲ ಅನ್ನೋ ನೋವು ರವಿಚಂದ್ರನ್‌ಗೆ ಇನ್ನೂ ಕಾಡ್ತಿದ್ಯಾ?


"ವಾಸು ನಾನ್ ಪಕ್ಕಾ ಕಮರ್ಷಿಯಲ್" ಸಿನಿಮಾ ಮೂಲಕ ಚಂದನವನಕ್ಕೆ ಸುಂದರಿ ನಟಿ ನಿಶ್ವಿಕಾ ನಾಯ್ಡು ಎಂಟ್ರಿ ಕೊಟ್ಟರು. 'ಗುರು ಶಿಷ್ಯರು' ಚಿತ್ರದ ಸೂಜಿ ಅಂದ್ರೆ ಕನ್ನಡಿಗರಿಗೆ ತುಂಬಾ ಇಷ್ಟ. ಬೋಲ್ಡ್‌ ಲುಕ್‌ ಮೂಲಕ ಸಿನಿ ಪ್ರೇಕ್ಷಕರಿಗೆ ನಿಶ್ವಿಕಾ ʼದಿಲ್‌ ಪಸಂದ್‌ʼ ತಿನಿಸಿದರು. ಸದ್ಯ ಯೋಗಾರಜ್‌ ಭಟ್‌ ನಿರ್ದೇಶನದ ಕರಟಕ ದಮನಕ ಸಿನಿಮಾದಲ್ಲಿ ಡಾ. ಶಿವರಾಜ್‌ ಕುಮಾರ್‌ ಮತ್ತು ಪ್ರಭುದೇವ ಜೊತೆ ನಾಯಕಿಯಾಗಿ ನಟಿಸುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://bit.ly/3LwfnhK 
Instagram Link -  https://bit.ly/3LyfY2l 
Sharechat Link - https://bit.ly/3LCjokI ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.