ಬೆಂಗಳೂರು : ಡಾ. ಪುನೀತ್‌ ರಾಜಕುಮಾರ್‌ ಅಭಿನಯದ ಅದ್ಭುತ ಸಿನಿಮಾಗಲ್ಲಿ ಒಂದಾದ ʼಮಿಲನʼದಲ್ಲಿ ನಟಿಸಿ ಕನ್ನಡಿಗರ ಮನಗೆದ್ದಿದ್ದ ನಟಿ ಪಾರ್ವತಿ ಮೆನನ್‌ ಹಾಗೂ ಕಿಚ್ಚ ಸುದೀಪ್‌ ನಟನೆಯ ಕೋಟಿಗೊಬ್ಬ 2 ದಲ್ಲಿ ನಟಿಸಿದ್ದ ನಿತ್ಯಾ ಮೆನನ್‌ ಗರ್ಭಿಣಿಯಾಗಿದ್ದಾರೆ ಎಂಬ ಸುದ್ದಿ ಸೋಷಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿದೆ. ಅಲ್ಲದೆ, ಈ ಕುರಿತು ಅವರು ಹಾಕಿರುವ ಪೋಸ್ಟ್‌ಗಳು ವೈರಲ್‌ ಆಗಿದ್ದು, ಮದುವೆ ಆಗದೆ ಇದು ಹೇಗೆ ಸಾಧ್ಯವಾಯಿತು ಎಂದು ಅಭಿಮಾನಿಗಳು ಪ್ರಶ್ನೆ ಮಾಡುತ್ತಿದ್ದಾರೆ.


COMMERCIAL BREAK
SCROLL TO CONTINUE READING

ಮಾಲಿವುಡ್‌ ಸ್ಟಾರ್‌ ನಟಿ ಪಾರ್ವತಿ, ನಿತ್ಯಾ ಮೆನನ್‌ ತಮ್ಮ ಇನ್‌ಸ್ಟಾಗ್ರಾಮ್‌ನಲ್ಲಿ ಪ್ರೆಗ್ನೆನ್ಸಿ ಟೆಸ್ಟ್‌ ಮಾಡಿರುವ ಕಿಟ್‌ ಫೋಟೋ ಅಪ್‌ ಲೋಡ್‌ ಮಾಡಿ ʼದಿ ವಂಡರ್‌ ಬಿಗಿನ್ಸ್‌ʼ ಎಂಬ ಶೀರ್ಷಿಕೆ ನೀಡಿದ್ದಾರೆ. ಸದ್ಯ ಈ ಫೋಟೋ ಇಬ್ಬರ ಫ್ಯಾನ್ಸ್‌ ತಲೆಕೆಡಿಸಿದೆ. ಮಲಯಾಳಂ ಸೇರಿದಂತೆ ಹಲವು ಸಿನಿಮಾಗಳಲ್ಲಿ ಬ್ಯುಸಿಯಾಗಿರುವ ನಟಿಯರಿಗೆ ಇನ್ನು ಮದುವೆಯಾಗಿಲ್ಲ. ಆದ್ರೆ ಅವರು ತಮ್ಮ ಇನ್‌ಸ್ಟಾಗ್ರಾಮ್‌ ಖಾತೆಯಲ್ಲಿ ಮಾತ್ರ ತಾವು ಗರ್ಭಿಣಿಯಾಗಿರುವುದಾಗಿ ತಿಳಿಸಿದ್ದು ಅಚ್ಚರಿ ಮೂಡಿಸುತ್ತಿದೆ.


ಇದನ್ನೂ ಓದಿ: Gandhada Gudi : ಕರುನಾಡ ಕಂದನಿಗೆ ಮಿಡಿದ ಅನಿವಾಸಿ ಭಾರತೀಯರ ಮನ! ವಿಶ್ವಾದ್ಯಂತ ಗಂಧದ ಗುಡಿ ಘಮಲು


ಇನ್ನು ವೈರಲ್‌ ಆಗಿರುವ ಫೋಟೋದಲ್ಲಿ ಪ್ರೆಗ್ನೆನ್ಸಿ ಟೆಸ್ಟಿಂಗ್ ಕಿಟ್, ಟಿಶ್ಯೂ ಇಟ್ಟಿರುವುದನ್ನು ಕಾಣಬಹುದು. ಸದ್ಯ ಇದನ್ನು ನೋಡುತ್ತಲೇ ಅಭಿಮಾನಿಗಳು ಕಮೆಂಟ್ ಮಾಡಲಾರಂಭಿಸಿದ್ದಾರೆ. ಅಮ್ಮನಾಗುತ್ತಿರುವುದಕ್ಕೆ ಶುಭ ಕೋರಿದ್ದಾರೆ. ಅಲ್ಲದೆ, ಮಾರ್ಡನ್‌ ಜಗತ್ತಿನಲ್ಲಿ ಎಲ್ಲವೂ ಸಾಧ್ಯ ಎಂದು ಕೆಲ ನೆಟ್ಟಿಗರು ನಟಿಯರ ಕಾಲೆಳೆದಿದ್ದಾರೆ. ಇನ್ನು ಮಗುವಿನ ತಂದೆಯಾರು..? ಮದುವೆಯಾಗದೇ ಹೇಗೆ ತಾಯಿಯಾದರು? ಎಂಬ ಹಲವಾರು ಪ್ರಶ್ನೆಗಳನ್ನು ಅವರ ಅಭಿಮಾನಿಗಳ ತಲೆಕೆಡಿಸಿವೆ.


ಇದೇ ರೀತಿಯಲ್ಲಿ ನಟಿ ನಿತ್ಯಾ ಮೆನನ್ ಅವರು ಕೂಡಾ ಪೋಸ್ಟ್ ಮಾಡಿ ʼದಿ ವಂಡರ್‌ ಬಿಗಿಸ್ಸ್‌ʼ ಎಂಬ ಶೀರ್ಷಿಕೆ ನೀಡಿದ್ದಾರೆ. ಇಬ್ಬರ ಇನ್‌ಸ್ಟಾಗ್ರಾಮ್‌ ನೋಡಿದ ಇಬ್ಬರ ಅಭಿಮಾನಿಗಳು ಇದು ಪ್ರೆಗ್ನೆಸ್ನಿ ಸುದ್ದಿ ಅಲ್ಲ. ಬದಲಾಗಿ, ಇದು ಪಕ್ಕಾ ಸಿನಿಮಾ ಪ್ರಮೋಷನ್‌ ಎಂದು ಅರ್ಥಮಾಡಿಕೊಂಡಿದ್ದಾರೆ. ಸದ್ಯ ಈ ಕುರಿತು ಅವರ ಅಭಿಮಾನಿಗಳು ಅವರಿಂದಲೇ ಉತ್ತರ ಬರೋವರೆಗೂ ಸಮಾಧಾನದಿಂದ ಕಾಯಲೆಬೇಕು ಅಷ್ಟೆ.https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.