Pooja Hegde : ಕೆಜಿಎಫ್ 3 ನಲ್ಲಿ ಪೂಜಾ ಹೆಗ್ಡೆ!? ಯಶ್ ಭೇಟಿಯಾಗಿದ್ದೇಕೆ ಸೌತ್ ಬ್ಯೂಟಿ!!
Pooja Hegde On Yash: ಇತ್ತೀಚಿನ ಸಂದರ್ಶನವೊಂದರಲ್ಲಿ ಪೂಜಾ ಹೆಗ್ಡೆ ನಟ ಯಶ್ ಬಗ್ಗೆಯೂ ಚರ್ಚಿಸಿದ್ದು, ಇದು ಅನೇಕ ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಕೆಲವರು ಕೆಜಿಎಫ್ 3 ನಲ್ಲಿ ಪೂಜಾ ಹೆಗ್ಡೆ ನಟಿಸುವ ಸಾಧ್ಯತೆಯಿದೆ ಎಂದು ಹೇಳುತ್ತಿದ್ದಾರೆ.
Pooja Hegde On Yash: ಸೌತ್ ಬ್ಯೂಟಿ ಪೂಜಾ ಹೆಗ್ಡೆ ತಮಿಳಿನ ಮುಗಮುಡಿ ಸಿನಿಮಾ ಮೂಲಕ ಸಿನಿರಂಗಕ್ಕೆ ಕಾಲಿಟ್ಟರು. ಅದಾದ ಬಳಿಕ ಹೃತಿಕ್ ರೋಷನ್ ಜೊತೆಗೆ ಮೊಹಂಜೊದಾರೊ ಸಿನಿಮಾದಲ್ಲಿ ನಟಿಸಿದರು. ಈ ಮೂಲಕ ಬಾಲಿವುಡ್‌ಗೆ ಕಾಲಿಟ್ಟರು. ಅಲ್ಲಿ ಹಿಟ್ ಆಗದೆ ದಕ್ಷಿಣ ಚಿತ್ರರಂಗಕ್ಕೆ ಮರಳಿದರು. ಆ ಬಳಿಕ ಸೌತ್ ಸಿನಿ ಇಂಡಸ್ಟ್ರಿಯಲ್ಲಿಯೇ ಸಾಕಷ್ಟು ಖ್ಯಾತಿ, ಹಣ ಗಳಿಸಿದ್ದಾರೆ. ಕರ್ನಾಟಕ ಮೂಲದವರೇ ಆಗಿರುವ ನಟಿ ಪೂಜಾ ಹೆಗ್ಡೆ, ಕನ್ನಡದ ಯಾವುದೇ ಸಿನಿಮಾಗಳಲ್ಲಿಇನ್ನೂ ನಟಿಸಿಲ್ಲ. ಆದರೆ ಇದೀಗ ಆ ಕಾಲ ಕೂಡಿಬಂದಂತಿದೆ ಎಂದು ಹೇಳಲಾಗುತ್ತಿದೆ.
ಇತ್ತೀಚಿನ ಸಂದರ್ಶನವೊಂದರಲ್ಲಿ ಪೂಜಾ ಹೆಗ್ಡೆ, ಪ್ಯಾನ್ ಇಂಡಿಯಾ ಸ್ಟಾರ್ ಯಶ್ ಬಗ್ಗೆ ಮಾತನಾಡಿದ್ದಾರೆ. ಅವರ ಜೊತೆ ನಟಿಸುವ ಕುರಿತು ಹೇಳಿಕೆ ನೀಡಿದ್ದು, ಇದು ಅನೇಕ ಅನುಮಾನಗಳನ್ನು ಹುಟ್ಟು ಹಾಕಿದೆ. "ಕೆಜಿಎಫ್ ನಂತರ ರಾಕಿ ಭಾಯ್ ಈಗ ದಂತಕಥೆಯಾಗಿದ್ದಾರೆ. ಶೀಘ್ರದಲ್ಲೇ ಅವರೊಂದಿಗೆ ನಾನು ಸಹ ಕೆಲಸ ಮಾಡಬಹುದು ಅಂದುಕೊಳ್ಳುತ್ತೇನೆ" ಎಂದು ಅವರು ಪೂಜಾ ಹೆಗ್ಡೆ ಹೇಳಿದರು.
ಇದನ್ನೂ ಓದಿ: Kabzaa 2 Movie: ಕಬ್ಜಾ 2 ದಲ್ಲಿ ಹೊರರಾಜ್ಯಗಳ ಸ್ಟಾರ್ ನಟರು.. ದುಪ್ಪಟ್ಟಾಯ್ತು ನಿರೀಕ್ಷೆ!
ಪೂಜಾ ಹೆಗ್ಡೆ ತಮ್ಮ ಹೇಳಿಕೆಯಲ್ಲಿ ನಟ ಯಶ್ ಬಗ್ಗೆಯೂ ಚರ್ಚಿಸಿದ್ದು, ನಾನು ಅವನೊಂದಿಗೆ ಅಷ್ಟೊಂದು ಮಾತನಾಡಿಲ್ಲ. ನಾನು ಇತ್ತೀಚೆಗೆ ಮೀಟಿಂಗ್‌ವೊಂದರಲ್ಲಿ ಅವರನ್ನು ಭೇಟಿಯಾಗಿದ್ದೆ, ಆದರೆ ಶೀಘ್ರದಲ್ಲೇ ಅವರೊಂದಿಗೆ ನಟಿಸುವ ಭರವಸೆ ಇದೆ" ಎಂದು ತಿಳಿಸಿದರು.
ಪೂಜಾ ಹೆಗ್ಡೆ ಮತ್ತು ಅಮಿತಾಬ್ ಬಚ್ಚನ್ ಕಳೆದ ವರ್ಷ ಜಾಹೀರಾತುವೊಂದರಲ್ಲಿ ಒಟ್ಟಿಗೆ ಕೆಲಸ ಮಾಡಿದರು. ಇತ್ತೀಚಿನ ಸಂದರ್ಶನದಲ್ಲಿ ನಟಿ ಅಮಿತಾಬ್ ಬಚ್ಚನ್ ಜೊತೆಗಿನ ಕೆಲಸ ಮಾಡಿದ ಅನುಭವದ ಬಗ್ಗೆ ಮಾತನಾಡಿದರು. ನಾನು ತುಂಬಾ ಸಂತೋಷವಾಗಿದ್ದೆ. ಬಾಲ್ಯದಲ್ಲಿ ಅವರ ಸಿನಿಮಾ ನೋಡುತ್ತಿದ್ದೆ, ಆದರೆ ಈಗ ಅವರೊಂದುಗೆ ನಟಿಸಿದ್ದು, ನನಗೆ ಸಂತಸ ನೀಡಿದೆ ಎಂದು ಹೇಳಿದರು.
ಇದನ್ನೂ ಓದಿ: Ileana D'cruz : ತಾಯಿಯಾಗಲಿದ್ದಾರಾ ನಟಿ ಇಲಿಯಾನಾ ಡಿಕ್ರೂಜ್? ತಂದೆ ಯಾರು ಎಂದ ನೆಟ್ಟಿಜನ್ಸ್!!
ಯಶ್ ಅವರ ಜೊತೆ ನಟಿಸಬಹುದು, ಅವರನ್ನು ಮೀಟಿಂಗ್ ಒಂದರಲ್ಲಿ ಭೇಟಿಯಾದೆ ಎಂದು ಪೂಜಾ ಹೆಗ್ಡೆ ಹೇಳಿರುವ ಮಾತು ಅನೇಕರಲ್ಲಿ ಕೆಲವು ಪ್ರಶ್ನೆಗಳನ್ನು ಹುಟ್ಟು ಹಾಕಿದೆ. ಇಷ್ಟು ದಿನ ಕನ್ನಡ ಸಿನಿಮಾಗಳಲ್ಲಿ ನಟಿಸದ ಪೂಜಾ ಸ್ಯಾಂಡಲ್‌ವುಡ್‌ಗೆ ಬರುತ್ತಾರಾ? ಯಶ್ ಜೊತೆ ಅವರ ಮುಂದಿನ ಸಿನಿಮಾ ಕನ್ನಡದ್ದಾ ಅಥವಾ ಬೇರೆ ಭಾಷೆಯದ್ದಾ? ಪೂಜಾ ಹೆಗ್ಡೆ ಏನಾದ್ರೂ ಕೆಜಿಎಫ್ 3 ನಲ್ಲಿ ನಟಿಸುವರಾ? ಎಂಬ ನಾನಾ ಪ್ರಶ್ನೆಗಳು ಅಭಿಮಾನಿಗಳಲ್ಲಿ ಮೂಡಿವೆ. ಪೂಜಾ ಹೆಗ್ಡೆ ಹಾಗೂ ಯಶ್ ಕಾಂಬಿನೇಷನ್‌ನಲ್ಲಿ ಯಾವ ಸಿನಿಮಾ ಬರಲಿದೆ ಎಂಬುದಕ್ಕೆ ಇನ್ನೂ ಸ್ಪಷ್ಟನೆ ಸಿಕ್ಕಿಲ್ಲ. ಇದಕ್ಕಾಗಿ ಎಲ್ಲರೂ ಕಾದು ನೋಡಬೇಕಿದೆ.
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.