ಅಂಟಿ ನಾ..! 38ರಲ್ಲೂ ನಾನು ಹಾಟ್ ಕಣ್ರೋ : ಟ್ರೋಲರ್ಸ್ಗೆ ಪ್ರಿಯಾಮಣಿ ಕೌಂಟರ್
Actress Priyamani : ‘ಆಂಟಿ’ ಅಂತ ಕರೆದ ನೆಟಿಜನ್ಗೆ ನಟಿ ಪ್ರಿಯಾಮಣಿ ಸಖತ್ ಉತ್ತರ ನೀಡಿದ್ದಾರೆ. ನನಗೆ 38 ವರ್ಷ ಆದ್ರೂ ನಾನಿನ್ನೂ ಹಾಟ್ ಆಗಿದ್ದೇನೆ ಅಂತ ಕೌಂಟರ್ ಕೊಟ್ಟಿದ್ದಾರೆ. ಈ ಕುರಿತ ಇಂಟ್ರಸ್ಟಿಂಗ್ ವಿಚಾರ ಇಲ್ಲಿದೆ ನೋಡಿ..
Priyamani on aunty : ಇತ್ತೀಚಿನ ದಿನಗಳಲ್ಲಿ ಸಾಮಾಜಿಕ ಜಾಲತಾಣಗಳಲ್ಲಿ ಟ್ರೋಲಿಂಗ್ ಸಂಸ್ಕೃತಿ ಹೆಚ್ಚಾಗಿದೆ. ಮದುವೆಯಾದ ಮತ್ತು 30 ದಾಟಿದ ನಟಿಯರ ಬಾಡಿ ಶೇಮಿಂಗ್ ನಡೆಯುತ್ತಿದೆ. ನಟಿಯವರ ದೇಹದ ಕುರಿತು ಟ್ರೋಲರ್ಸ್ ಬ್ಯಾಡ್ ಕಾಮೆಂಟ್‌ಗಳನ್ನು ಮಾಡುತ್ತಿದ್ದಾರೆ. ‘ಆಂಟಿ’ ಸೇರಿದಂತೆ ಇತರೆ ನಿಂದನಾತ್ಮಕ ಪದಗಳನ್ನು ಬಳಸಿ ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬರುವಂತಹ ಕಾಮೆಂಟ್ ಹಾಕುತ್ತಿದ್ದಾರೆ.
ಇತ್ತೀಚೆಗೆ ಕೆಲವು ನೆಟ್ಟಿಗರು ನಟಿ ಪ್ರಿಯಾಮಣಿ ಅವರಿಗೆ 'ಆಂಟಿ' ಅಂತ ಕಮೆಂಟ್ ಮಾಡಿದ್ದು ಚರ್ಚೆಯ ವಿಷಯವಾಗಿದೆ. ಸಾಮಾಜಿಕ ಮಾಧ್ಯಮದಲ್ಲಿ ಅವರ ಪೋಸ್ಟ್‌ಗಳಿಗೆ ಆಗಾಗ್ಗೆ 'ಕಪ್ಪು ಆಂಟಿ' ಎಂಬ ನಕಾರಾತ್ಮಕ ಕಾಮೆಂಟ್‌ಗಳು ಬರುತ್ತಿವೆ. ಇದೀಗ ತಮ್ಮನ್ನು ‘ಆಂಟಿ’ ಎಂದು ಕರೆದವರಿಗೆ ಪ್ರಿಯಾ ಸಖತ್ ಕೌಂಟರ್ ನೀಡಿದ್ದಾರೆ.
ಇದನ್ನೂ ಓದಿ: ʼಪ್ರಭಾಸ್ʼ ನಟನೆಯ ಈ ಸಿನಿಮಾದ ಫೋಟೋ, ವಿಡಿಯೋ ಶೇರ್ ಮಾಡಿದ್ರೆ ಕಠಿಣ ಕ್ರಮ..!
“ನನಗೆ ಈಗ 38 ವರ್ಷ. ಆದರೂ ನಾನು ಇನ್ನೂ ಹಾಟ್.. ಅಂತ ಪ್ರತ್ಯುತ್ತರ ಕೊಟ್ಟಿದ್ದಾರೆ. ಅಲ್ಲದೆ, ಇಂತಹ ಕಾಮೆಂಟ್‌ಗಳನ್ನು ನಾನು ಸಕಾರಾತ್ಮಕವಾಗಿ ತೆಗೆದುಕೊಳ್ಳುತ್ತೇನೆ ಎಂದು ಬಹಿರಂಗಪಡಿಸಿದ್ದಾರೆ. ನನ್ನ ಅಂಟಿ ಅಂತ ಕರೆಯುವುದರಲ್ಲಿ ತಪ್ಪೇನಿಲ್ಲ. ನೀವು ಯಾವುದೇ ಅಭ್ಯಂತರವಿಲ್ಲದೆ ನನ್ನನ್ನು ಅಂಟಿ ಅಂತ ಕರೆಯಬಹುದು. ವಯಸ್ಸಾಗುತ್ತಿದೆ ಎಂದು ನಾಚಿಕೆಪಡುವ ಅಗತ್ಯವಿಲ್ಲ ಅದು, ಸಹಜ ಪ್ರಕ್ರಿಯೆ ಅಂತ ಹೇಳಿದ ಪ್ರಿಯಾಮಣಿ ಅವರ ಮಾತಿಗೆ ನೆಟಿಜನ್‌ಗಳು ಆಶ್ಚರ್ಯ ವ್ಯಕ್ತಪಡಿಸಿದ್ದಾರೆ. ಅಲ್ಲದೆ, ಅವರ ಫ್ಯಾನ್ಸ್ ಮೆಚ್ಚಿಗೆ ವ್ಯಕ್ತಪಡಿಸಿದ್ದಾರೆ.
ಪ್ರಿಯಾ ಮುಸ್ತಫಾ ಎಂಬುವವರನ್ನು ಮದುವೆಯಾದ ನಂತರ ಸ್ವಲ್ಪ ಕಾಲ ಸಿನಿಮಾದಿಂದ ದೂರ ಉಳಿದಿದ್ದರು. ಆ ಬಳಿಕ ರೀ ಎಂಟ್ರಿ ಕೊಟ್ಟಿದ್ದಾರೆ. 'ದಿ ಫ್ಯಾಮಿಲಿ ಮ್ಯಾನ್' ವೆಬ್ ಸೀರೀಸ್ ನಲ್ಲಿ ನಟಿಸಿದ್ದಾರೆ. ಕಿರುತೆರೆಯ ಕೆಲವು ಶೋಗಳಲ್ಲಿ ತೀರ್ಪುಗಾರರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ಇತ್ತೀಚೆಗೆ ಪ್ರಿಯಾಮಣಿ ‘ಜವಾನ್’ ಸಿನಿಮಾದಲ್ಲಿ ನಟಿಸಿದ್ದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://t.co/lCSPNypK2U
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.