ಬಹುನಿರೀಕ್ಷಿತ `ತೀರ್ಥರೂಪ ತಂದೆಯವರಿಗೆ` ಚಿತ್ರಕ್ಕೆ ರಚನಾ ನಾಯಕಿ..! ಹೆಂಗೆ ನಾವು...
ಶೀರ್ಷಿಕೆ ಹಾಗೂ ತಾರಾಬಳಗದ ಮೂಲಕವೇ ಸುದ್ದಿಯಲ್ಲಿರುವ ನಿರ್ದೇಶಕ ರಾಮೇನಹಳ್ಳಿ ಜಗನ್ನಾಥ್ ಹೊಸ ಸಿನಿಮಾ ತೀರ್ಥರೂಪ ತಂದೆಯವರಿಗೆ. ಈಗಾಗಲೇ ಹಿರಿಯ ನಟ ಸಿತಾರಾ, ರಾಜೇಶ್ ನಟರಂಗ ಚಿತ್ರತಂಡ ಸೇರಿಕೊಂಡಿದ್ದು, ಇದೀಗ ಜಗನಾಥ್ ಅವರು ನಾಯಕಿಯನ್ನು ಪರಿಚಯಿಸಿದ್ದಾರೆ.
Teertharoopa Tandeyavarige movie : ಹೆಂಗೆ ನಾವು ಅಂತಾನೇ ಖ್ಯಾತಿ ಪಡೆದಿರುವ ಉದಯೋನ್ಮುಖ ನಟಿ ರಚನಾ ಇಂದರ್ ತೀರ್ಥರೂಪ ತಂದೆಯವರಿಗೆ ಸಿನಿಮಾ ತಂಡ ಸೇರ್ಪಡೆಯಾಗಿದ್ದಾರೆ. ನಾಯಕ ನಿಹಾರ್ ಮುಖೇಶ್ ಜೋಡಿಯಾಗಿ ಅಭಿನಯಿಸುತ್ತಿದ್ದಾರೆ. ಅಕ್ಷರ ಪಾತ್ರದಲ್ಲಿ ರಚನಾರನ್ನು ಚಿತ್ರತಂಡ ಪ್ರೇಕ್ಷಕರಿಗೆ ಪರಿಚಯಿಸಿದ್ದು, ಪೋಸ್ಟರ್ ಕೂಡ ಬಹಳ ಇಂಪ್ರೆಸಿವ್ ಆಗಿದೆ.
4ನೇ ಹಂತದ ಚಿತ್ರೀಕರಣಕ್ಕೆ ರೆಡಿ : ತೀರ್ಥರೂಪ ತಂದೆಯವರಿಗೆ ಸಿನಿಮಾದ ಚಿತ್ರೀಕರಣ ಭರದಿಂದ ಸಾಗುತ್ತಿದೆ. ಮೈಸೂರು, ಕೊಚ್ಚಿ ಮೂಡಿಗೆರೆ ಸುತ್ತಮುತ್ತ ಶೇಖಡ 50ರಷ್ಟು ಶೂಟಿಂಗ್ ಕಂಪ್ಲೀಟ್ ಮಾಡಿರುವ ಚಿತ್ರತಂಡ ಸಂಕ್ರಾಂತಿ ಬಳಿಕ ನಾಲ್ಕನೇ ಹಂತದ ಚಿತ್ರೀಕರಣವನ್ನು ಮೂಡಿಗೆರೆಯಲ್ಲಿ ಮಾಡಲು ಪ್ಲ್ಯಾನ್ ಮಾಡಿಕೊಂಡಿದೆ. ಆ ನಂತ್ರ ಉತ್ತರ ಭಾರತದ ಕಡೆ ಚಿತ್ರೀಕರಣ ನಡೆಸಲಿದೆ.
ಜೈ ಚಾಮುಂಡೇಶ್ವರಿ ಪ್ರೊಡಕ್ಷನ್ಸ್ ನಡಿ ತೀರ್ಥರೂಪ ತಂದೆಯವರಿಗೆ ಸಿನಿಮಾ ನಿರ್ಮಾಣವಾಗುತ್ತಿದ್ದು, ರಾಮೇನಹಳ್ಳಿ ಜಗನ್ನಾಥ ಕಥೆ ಬರೆದು ನಿರ್ದೇಶನ ಮಾಡುತ್ತಿದ್ದಾರೆ. ಹೊಂದಿಸಿ ಬರೆಯಿರಿ ಚಿತ್ರ ನಿರ್ಮಾಣ ಮಾಡಿದ್ದ ಸಂಡೇ ಸಿನಿಮಾಸ್ ಈ ಸಿನಿಮಾವನ್ನು ಪ್ರೆಸೆಂಟ್ ಮಾಡುತ್ತಿದೆ. ತೆಲುಗಿನಲ್ಲಿ ಗುಪ್ಪೆಡಂತ ಮನಸು ಸೀರಿಯಲ್ ಖ್ಯಾತಿಯ ನಿಹಾರ್ ಮುಖೇಶ್ ನಾಯಕನಾಗಿ ನಟಿಸುತ್ತಿದ್ದಾರೆ.
ತೀರ್ಥರೂಪ ತಂದೆಯವರಿಗೆ ಚಿತ್ರ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲಿ ಚಿತ್ರ ಮೂಡಿ ಬರುತ್ತಿದೆ. ತೆಲುಗಿನಲ್ಲಿ ಪ್ರಿಯಮೈನ ನಾನ್ನಕು ಎಂಬ ಶೀರ್ಷಿಕೆ ಇಡಲಾಗಿದೆ. ಕೌಟುಂಬಿಕ ಹಿನ್ನೆಲೆ ಕಥೆಯುಳ್ಳ ಸಿನಿಮಾಗೆ ದೀಪಕ್ ಯರಗೇರಾ ಛಾಯಾಗ್ರಹಣ, ಜೋ ಕೋಸ್ಟ್ ಸಂಗೀತ, ಪ್ರಶಾಂತ್ ರಾಜಪ್ಪ ಸಂಭಾಷಣೆ ಇರಲಿದ್ದು, ಬ್ಲಿಂಕ್ ಸಿನಿಮಾ ಖ್ಯಾತಿಯ ರವಿಚಂದ್ರ ಎ.ಜೆ ತೀರ್ಥರೂಪ ತಂದೆಯವರಿಗೆ ಚಿತ್ರಕ್ಕೆ ಎಕ್ಸಿಕ್ಯುಟಿವ್ ಪ್ರೊಡ್ಯೂಸರ್ ಆಗಿ ಸಾಥ್ ಕೊಟ್ಟಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.