ಮುಂಬೈ: ಬಾಲಿವುಡ್ ನಲ್ಲಿ ಬೋಲ್ಡ್ ಪಾತ್ರಗಳಿಗೆ ಹೆಸರಾಗಿರುವ ನಟಿ ಈಗ ಬಾಲಿವುಡ್ ಕುರಿತಾಗಿ ನೀಡಿರುವ ಹೇಳಿಕೆ ಎಲ್ಲರಲ್ಲೂ ಅಚ್ಚರಿ ಮೂಡಿಸಿದೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಕೊಹ್ಲಿ ಮತ್ತು ಬಾಬರ್ ನಡುವೆ ಶ್ರೇಷ್ಠ ಆಟಗಾರ ಯಾರು ? ಆಫ್ರಿದಿ ಹೇಳಿದ್ದು ಹೀಗೆ..!


ಈ ಕುರಿತಾಗಿ ಮಾಧ್ಯಮಗಳಿಗೆ ನೀಡಿರುವ ಸಂದರ್ಶನದಲ್ಲಿ ಮಾತನಾಡುತ್ತಾ “ಇತರ ನಟಿಯರಿಗೆ ದೊಡ್ಡ ತುಟಿಗಳು ಮತ್ತು ದೊಡ್ಡ ಸ್ತನಗಳು ಇದ್ದ ಕಾರಣ ನಾನು ಇತ್ತೀಚೆಗೆ ತಿರಸ್ಕರಿಸಲ್ಪಟ್ಟಿದ್ದೇನೆ. 'ಅವಳು ಹೆಚ್ಚು ಸೆಕ್ಸಿಯರ್ ಆಗಿ ಕಾಣುತ್ತಾಳೆ ಮತ್ತು ಹೆಚ್ಚು ಮಾರಾಟ ಮಾಡುತ್ತಾಳೆ' ಎಂದು ನನಗೆ ಹೇಳಲಾಯಿತು.ಇದನ್ನು ನಾನು ಗೌರವಿಸುವ ಜನರಿಂದಲೇ ಈ ಮಾತು ಬಂದಿದೆ.ಕೆಲವು ಜನರನ್ನು ನೋಡಿದಾಗ ಅವರು ಈ ರೀತಿ ಇರುವುದಿಲ್ಲ ಎಂದು ನೀವು ಭಾವಿಸಿರುತ್ತೀರಿ, ಆದರೆ ಅವರು ಕೂಡ ಅಂತಹ ಮನಸ್ಥಿತಿಯನ್ನು ಹೊಂದಿದ್ದಾರೆ. ಒಂದು ವೇಳೆ ಪ್ರಮುಖ ಸ್ಥಾನಗಳಲ್ಲಿ ಮಹಿಳೆಯರ ಸಂಖ್ಯೆ ಹೆಚ್ಚಾದಾಗ ವಿಷಯಗಳು ಬದಲಾಗಬಹುದು ಎಂದು ಅವರು ಹೇಳಿದರು.


ಇದನ್ನೂ ಓದಿ: ಕಾಳಿ ಮಾತೆಯ ಈ ದೇವಾಲಯದಲ್ಲಿ ನೂಡಲ್ಸ್‌ನ್ನು ಪ್ರಸಾದವಾಗಿ ನೀಡ್ತಾರೆ!


ಇನ್ನೂ ಮುಂದುವರೆದು ತನ್ನ ದೇಹದ ಹಲವಾರು ಭಾಗಗಳಲ್ಲಿ ಕತ್ತರಿ ಹಾಕಲಾಯಿತು ಎನ್ನುವುದನ್ನು ಅವರು ಬಹಿರಂಗಪಡಿಸಿದ್ದಾರೆ,ಕೆಲವೊಮ್ಮೆ ಮೂಗು, ಸ್ತನ,ಕಾಲುಗಳು,ಕೆನ್ನೆಗಳಿಗೆ ಕತ್ತರಿ ಹಾಕಿರುವುದನ್ನು ಅವರು ಬಹಿರಂಗಪಡಿಸಿದ್ದಾರೆ.ಮೊದಲ ಬಾರಿಗೆ ತನ್ನ ಕೂದಲಿಗೆ ಬಣ್ಣ ಹಚ್ಚಲು 30 ವರ್ಷಗಳನ್ನು ತೆಗೆದುಕೊಂಡಿದ್ದಾಳೆ ಎಂದು ಅವರು ಹೇಳಿದ್ದಾರೆ.ಶಸ್ತ್ರಚಿಕಿತ್ಸೆ ಮಾಡಿಸಿಕೊಳ್ಳುವುದು ತಮ್ಮ ವ್ಯಾಪ್ತಿಯಾಗಿರಲಿಲ್ಲ ಎಂದು ರಾಧಿಕಾ ಆಫ್ಟೆ ತಿಳಿಸಿದ್ದಾರೆ.


ಈಗ ರಾಧಿಕಾ ಆಪ್ಟೆ ಅವರು ಸೈಕಲಾಜಿಕಲ್ ಥ್ರಿಲ್ಲರ್ ಫೊರೆನ್ಸಿಕ್‌ನಲ್ಲಿ ಈ ಬಾರಿ ಕಾಣಿಸಿಕೊಳ್ಳಲಿದ್ದಾರೆ.https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.