ನಟಿ ರಕ್ಷಿತಾ ಪ್ರೇಮ್.. ನಟನೆ,ನೃತ್ಯ ಇವೆಲ್ಲವೂ ಇವತ್ತಿಗೂ  ಎಲ್ಲರಿಗೂ ಫೆವರೇಟ್.. ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಹೀರೋ ಆಗಿ ನಟಿಸಿದ ಅಪ್ಪು ಸಿನಿಮಾ ಮೂಲಕ ಹೀರೋಯಿನ್ ಆಗಿ ಬಣ್ಣ ಹಚ್ಚಿದ ರಕ್ಷಿತಾ ಅಲ್ಲಿಂದ ಮತ್ತೇ ಹಿಂದೆ ತಿರುಗಿ ನೋಡಲೇ ಇಲ್ಲ.ಯಾಕಂದ್ರೆ ಎಲ್ಲಾರ ಮನೆಮಗಳಾಗಿಬಿಟ್ಟಿದ್ದರು ರಕ್ಷಿತಾ ಪ್ರೇಮ್. ಅದಾದ ಬಳಿಕ ಹಲವಾರು ಹಿಟ್ ಸಿನಿಮಾಗಳನ್ನ ಮಾಡಿದ್ರು.ಚಾಲೆಂಜಿಂಗ್ ಸ್ಟಾರ್ ದರ್ಶನ್ ಮತ್ತು ರಕ್ಷಿತಾ ಜೋಡಿ ದೊಡ್ಡ ಮಟ್ದದಲ್ಲಿ ವರ್ಕೌಟ್ ಆಯ್ತು. ಇವರಿಬ್ಬರ ಕೆಮಿಸ್ಟ್ರಿ ತೆರೆಮೇಲೆ ಸಖತ್ ಆಗೇ ಕಿಕ್ ಕೊಡ್ತಾ ಇತ್ತು. 


COMMERCIAL BREAK
SCROLL TO CONTINUE READING

ಎಲ್ಲಾ ಸ್ಟಾರ್ ನಟರ ಜೊತೆ ತೆರೆ ಹಂಚಿಕೊಂಡ ರಕ್ಷಿತಾ ಬೇರೇ ಲ್ಯಾಂಗ್ವೇಜ್ ಸಿನಿಮಾಗಳಿಗೂ ಬೇಡಿಕೆಯ ನಟಿಯಾದ್ರು.ಇಷ್ಟೆಲ್ಲಾ ಆದಮೇಲೆ ಮದುವೆಯಾದ ರಕ್ಷಿತಾ ಸಿನಿಮಾ ರಂಗದಿಂದ ಕೊಂಚ ದೂರವೇ ಉಳಿದರು. ಮದ್ವೆ ಆದ ಮೇಲೆ ದಪ್ಪಗಾದ ರಕ್ಷಿತಾ ತೂಕ ಇಳಿಸೋ ಪ್ರಯತ್ನ ಮಾಡಲೇ ಇಲ್ವಾ ಅಂತ ಅವರ ಅಭಿಮಾನಿಗಳು ಕೇಳುತ್ತಲೇ ಇರುತ್ತಾರೆ ಯಾಕಂದ್ರೆ ಅವರನ್ನ ಮತ್ತೇ ಬಿಗ್ ಸ್ಕ್ರೀನ್ ಮೇಲೆ ನೋಡೋ ಆಸೆ ಫ್ಯಾನ್ಸ್ ಗೆ ಬೆಟ್ಟದಷ್ಟಿದೆ. ಯೆಸ್ ರಕ್ಷಿತಾ ಅರೋಗ್ಯದದಲ್ಲಿ ಏರುಪೇರು ಆದ ಬಳಿಕ ದೇಹದ ತೂಕ ಹೆಚ್ಚಿದೆ ಅಂತ ಹೇಳಲಾಗುತ್ತಿದೆ. 
 


ಇದನ್ನೂ ಓದಿ-ಶುಭ ಪೂಂಜಾಗೆ ದೇಹದ ತೂಕ 17 KG ಇಳಿಸೋ ಟಾರ್ಗೆಟ್..
 


ಮತ್ತೇ ಸಿನಿಮಾಗಳಲ್ಲಿ ನಟಿಸೋ ಮನಸ್ಸು ರಕ್ಷಿತಾ ಮೇಡಂಗೆ ಇಲ್ಲ ಅನ್ನೋದು ತಿಳಿದು ಬಂದಿದೆ.ತಮ್ಮ ಪ್ರೊಡಕ್ಷನ್ ಹೌಸ್ ಮೂಲಕ ಒಳ್ಳೊಳ್ಳೆ ಸಿನಿಮಾಗಳ್ಳನ್ನ ಕೊಡೋ ಆಸೆ ರಕ್ಷಿತಾ ಅವರಿಗಿದೆ.ಆದರೂ ಮತ್ತೇ ಸಿನಿಮಾ ಮಾಡಲಿ ಅನ್ನೋದು ಅಭಿಮಾನಿಗಳ ಮನದಾಳದ ಮಾತು. ಸೋ ನೋಡೋಣ ಮುಂದಿನ ದಿನಗಳಲ್ಲಿ ರಕ್ಷಿತಾ ಯಾವ ರೀತಿಯ ನಿರ್ಧಾರ ತೆಗೆದುಕೊಳುತ್ತಾರೆ ಅನ್ನೋದನ್ನ ಕಾದು ನೋಡೋಣ
 


ಇದನ್ನೂ ಓದಿ-ಪ್ರಧಾನಿ ಮೋದಿ ಭೇಟಿಯಾದ ಅಶ್ವಿನಿ ಪುನೀತ್, ರಾಕಿಂಗ್ ಸ್ಟಾರ್ ಯಶ್ & ರಿಷಬ್ ಶೆಟ್ಟಿ...!  


ಕನ್ನಡ ಭಾಷೆಯಲ್ಲಿ ಮತ್ತಷ್ಟು ತಾಜಾ ಸುದ್ದಿಗಳನ್ನು ಓದಲು ನಮ್ಮ ಜೀ ಕನ್ನಡ ನ್ಯೂಸ್ ಮೊಬೈಲ್ ಅಪ್ಲಿಕೇಶನ್ ಡೌನ್ಲೋಡ್ ಮಾಡಿ...
Android Link - https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.