ನಟಿ ರಶ್ಮಿ ಪ್ರಭಾಕರ್‌ ಬಗ್ಗೆ ನಿಮಗೆಲ್ಲ ಗೊತ್ತೇ ಇರಬಹುದು. ʻಲಕ್ಷ್ಮೀ ಬಾರಮ್ಮʼ ಧಾರಾವಾಹಿಯಲ್ಲಿ ʻಚಿನ್ನುʼ ಎಂಬ ಮುಗ್ಧ ಹುಡುಗಿಯ ಪಾತ್ರ ಮಾಡಿ ಪ್ರೇಕ್ಷಕರ ಮನಗೆದ್ದ ನಟಿ. ಈ ಮುದ್ದು ಮುಖದ ಚೆಲುವೆ ʻಲಕ್ಷ್ಮೀ ಬಾರಮ್ಮʼ ಸೀರಿಯಲ್‌ ಬಳಿಕ ಮನಸೆಲ್ಲಾ ನೀನೇ ಧಾರಾವಾಹಿಯಲ್ಲಿಯೂ ಕೂಡಾ ತನ್ನ ವಿಭಿನ್ನ ನಟನೆ ಶಕ್ತಿಯಿಂದ ಮಿಂಚಿದ್ರು. 


COMMERCIAL BREAK
SCROLL TO CONTINUE READING

ಇದನ್ನೂ ಓದಿ: ಬಾಕ್ಸ್ಆಫೀಸ್‌ನಲ್ಲಿ ಕೆಜಿಎಫ್-2 ತೂಫಾನ್: ಕೇವಲ 6 ದಿನಕ್ಕೆ 676 ಕೋಟಿ ರೂ. ಗಳಿಕೆ!


ಬಳಿಕ ಕಾರಣಾಂತರದಿಂದ ಸೀರಿಯಲ್‌ನಿಂದ ಹೊರನಡೆದ್ರು.. ಇದೀಗ ಕನ್ನಡ ಮಾತ್ರವಲ್ಲದೆ ತೆಲುಗು ನಾಡಿನಲ್ಲಿ ರಶ್ಮಿ ಹವಾ ಜೋರಾಗಿದೆ.. ಹೌದು.. ಸದ್ಯ ರಶ್ಮಿ ತೆಲುಗಿನ ಕಾವ್ಯಾಂಜಲಿ ಧಾರಾವಾಹಿಯಲ್ಲಿ ಮಿಂಚುತ್ತಿದ್ದಾರೆ..


ಈಗ ರಶ್ಮಿ ಬಗ್ಗೆ ಹೇಳಲು ಒಂದು ಪ್ರಮುಖ ವಿಚಾರ ಇದೆ. ಅದೇನಪ್ಪ ಅಂದ್ರೆ, ಇಷ್ಟು ದಿನ ಸಿಂಗಲ್‌ ಆಗಿದ್ದ ರಶ್ಮಿ ಸದ್ಯ ಹೊಸ ಜೀವನಕ್ಕೆ ಕಾಲಿಡಲು ಸಜ್ಜಾಗುತ್ತಿದ್ದಾರೆ.. ಇದೇ ಏಪ್ರಿಲ್‌ 25ಕ್ಕೆ ನಿಖಿಲ್‌ ಭಾರ್ಗವ್‌ ಅವರ ಜೊತೆ 
ಸದ್ಯ ರಶ್ಮಿ ಮನೆಯಲ್ಲಿ ಮದುವೆ ತಯಾರಿಗಳು ಜೋರಾಗಿ ನಡೆಯುತ್ತಿವೆ. ಅದರಲ್ಲೂ ಶೂಟಿಂಗ್‌ನಲ್ಲಿ ಬ್ಯುಸಿ ಇರುವ ರಶ್ಮಿ ಬ್ರೇಕ್‌ ಸಿಕ್ಕಿದಾಗೆಲ್ಲಾ ಶಾಪಿಂಗ್‌ ಜೊತೆಗೆ ಲಗ್ನ ಪತ್ರಿಕೆ ಹಂಚುವ ಕೆಲಸವನ್ನು ಕೂಡಾ ಮುಗಿಸಿದ್ದಾರಂತೆ.. ಇನ್ನೇನು ಮದುವೆಗೆ 5 ದಿನ ಉಳಿದಿದ್ದು ಈಗಾಗಲೇ ಶಾಸ್ತ್ರಗಳು ಕೂಡಾ ಶುರುವಾಗಿವೆ.. ಈ ನಡುವೆ ನಟಿ ರಶ್ಮಿಗೆ ತನ್ನ ಸ್ನೇಹಿತರು ಸಪ್ರೈಸ್‌ ಪಾರ್ಟಿ ಒಂದನ್ನು ನೀಡಿದ್ದಾರೆ..


ಸೂಪರ್‌ ಆಗಿ ಡೆಕೊರೇಟ್‌ ಮಾಡಿ ಕೇಕ್‌ ಕಟ್‌ ಮಾಡಿಸಿದ್ದಾರೆ.. ಆ ಪಾರ್ಟಿಯಲ್ಲಿ ನಿಖಿಲ್‌ ಕೂಡಾ ಭಾಗಿಯಾಗಿದ್ದರು.. ಮುದ್ದಾದ ಜೋಡಿ ಫ್ರೆಂಡ್ಸ್‌ ಜೊತೆ ಬಿಂದಾಸ್‌ ಆಗಿ ಪಾರ್ಟಿ ಎಂಜಾಯ್‌ ಮಾಡಿದ್ದಾರೆ. ಸದ್ಯ ಆ ಫೋಟೋಗಳು ಕೂಡಾ ಸೋಶಿಯಲ್‌ ಮೀಡಿಯಾದಲ್ಲಿ ವೈರಲ್‌ ಆಗುತ್ತಿದ್ದು, ಅಭಿಮಾನಿಗಳು ಶುಭ ಹಾರೈಸಿದ್ದಾರೆ.


ಇದನ್ನೂ ಓದಿ: ‘Love...ಲಿ’ ಮೂಡ್ ನಲ್ಲಿ ಆಂಗ್ರಿ ಯಂಗ್ ಮ್ಯಾನ್..ಮತ್ತೊಂದು ಸಿನಿಮಾಗೆ ವಸಿಷ್ಠ ಸಿಂಹ ಹೀರೋ


ಇನ್ನೇನು ಕೆಲವೇ ದಿನಗಳಲ್ಲಿ ದಾಂಪತ್ಯ ಜೀವನಕ್ಕೆ ಕಾಲಿಡಲು ಸಜ್ಜಾಗಿರುವ ರಶ್ಮಿ & ನಿಖಿಲ್‌ಗೆ ನಮ್ಮ ಕಡೆಯಿಂದಲೂ ಬೆಸ್ಟ್‌ ವಿಶಸ್


https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು TwitterFacebookYoutube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.