`12 ವರ್ಷಗಳ ವಯಸ್ಸಿನ ಅಂತರವಿದೆ.. ಅದಕ್ಕಾಗಿಯೇ..` ಕೊನೆಗೂ ವಿಚ್ಛೇದನ ಕುರಿತು ತುಟಿಬಿಚ್ಚಿದ ಖ್ಯಾತ ನಟಿ!
Actress About Divorce: ಖ್ಯಾತ ನಟಿಯೊಬ್ಬರು ಸಂದರ್ಶನವೊಂದರಲ್ಲಿ ತಮ್ಮ ವೈಯಕ್ತಿಕ ಜೀವನದ ಬಗ್ಗೆ ತೆರೆದಿಟ್ಟಿದ್ದಾರೆ. ಸದ್ಯ ಕಳೆದ ಒಂಬತ್ತು ವರ್ಷಗಳಿಂದ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿರುವ ಅವರು ಇದಕ್ಕೂ ಮೊದಲಿನ ಮದುವೆ ಮತ್ತು ವಿಚ್ಛೇದನದ ಬಗ್ಗೆ ಮಾತನಾಡಿದ್ದಾರೆ..
Resham Tipnis: 'ಬಿಗ್ ಬಾಸ್ ಮರಾಠಿ' ಖ್ಯಾತಿಯ ನಟಿ ರೇಶಮ್ ಟಿಪ್ನಿಸ್ ತಮ್ಮ ವೈಯಕ್ತಿಕ ಜೀವನದ ಕಾರಣದಿಂದ ಆಗಾಗ್ಗೆ ಗಮನ ಸೆಳೆಯುತ್ತಿರುತ್ತಾರೆ.. ಅವರು 1993 ರಲ್ಲಿ 'ಯೇ ರಿಶ್ತಾ ಕ್ಯಾ ಕೆಹ್ಲಾತಾ ಹೈ' ಖ್ಯಾತಿಯ ನಟ ಸಂಜೀವ್ ಸೇಠ್ ಅವರನ್ನು ವಿವಾಹವಾದರು. ಇಬ್ಬರಿಗೆ ರಿಷಿಕಾ ಎಂಬ ಪುತ್ರಿ ಹಾಗೂ ಮಾನವ್ ಎಂಬ ಪುತ್ರನಿದ್ದಾನೆ. ಆದರೆ ರೇಶಮ್ ಮತ್ತು ಸಂಜೀವ್ ನಡುವಿನ ಸಂಬಂಧ ಹೆಚ್ಚು ಕಾಲ ಉಳಿಯಲಿಲ್ಲ. ಅವರು 2004 ರಲ್ಲಿ ವಿಚ್ಛೇದನ ಪಡೆದರು. ಅದರ ನಂತರ, ಸಂಜೀವ್ 'ಯೇ ರಿಶ್ತಾ..' ಖ್ಯಾತಿಯ ನಟಿ ಲತಾ ಸಬರ್ವಾಲ್ ಅವರನ್ನು ಮತ್ತೆ ವಿವಾಹವಾದರು. ಸಂದರ್ಶನವೊಂದರಲ್ಲಿ, ರೇಶಮ್ ತನ್ನ ವಿಚ್ಛೇದನದ ಬಗ್ಗೆ ಮಾತನಾಡಿ.. ಡಿವೋರ್ಸ್ ಬಗ್ಗೆ ಪಶ್ಚಾತ್ತಾಪ ಪಡುತ್ತಿದ್ದೇನೆ ಎಂದು ಹೇಳಿದ್ದಾರೆ..
ಇದನ್ನೂ ಓದಿ-ಜೈಲಿನಲ್ಲಿ ವಿವಸ್ತ್ರ ಮಾಡಿ ಕೂರಿಸಿದ್ರು, ಪ್ರೈವೇಟ್ ಪಾರ್ಟ್ ಅನ್ನು ಬಿಡಲಿಲ್ಲ ಎಂದು ಅಳಲುತೋಡಿಕೊಂಡ ನಟಿ!
'ಇ ಟೈಮ್ಸ್' ಗೆ ನೀಡಿದ ಸಂದರ್ಶನದಲ್ಲಿ, ರೇಶಮ್, "ನಾನು ನನ್ನ ವಿಚ್ಛೇದನಕ್ಕೆ ನಾನು ವಿಷಾದಿಸುತ್ತೇನೆ. ನಾನು ಮದುವೆಯಾದಾಗ, ನನಗೆ 20 ವರ್ಷ. ಅದರ ನಂತರ ನಾನು ತಕ್ಷಣ ತಾಯಿಯಾದೆ. ನಾನು ಈ ಎಲ್ಲಾ ಜವಾಬ್ದಾರಿಗಳನ್ನು ನಿಭಾಯಿಸುವಷ್ಟು ಸಮರ್ಥ ಮತ್ತು ಸಂವೇದನಾಶೀಲಳಾಗಿರಲಿಲ್ಲ.. ಸಂಜೀವ್ ಮತ್ತು ನನ್ನ ನಡುವೆ 12 ವರ್ಷಗಳ ವಯಸ್ಸಿನ ಅಂತರವಿತ್ತು. ಆ ಸಮಯದಲ್ಲಿ ನಾವೀಬ್ಬರು ಪ್ರಬುದ್ಧರಾಗಿದ್ದರೆ ಎಂದಿಗೂ ವಿಚ್ಛೇದನ ಪಡೆಯುತ್ತಿರಲಿಲ್ಲ.. " ಎಂದು ಹೇಳಿದ್ದಾರೆ..
ರೇಶಮ್ ಕಳೆದ ಒಂಬತ್ತು-ಹತ್ತು ವರ್ಷಗಳಿಂದ ಸಂದೇಶ್ ಕೀರ್ತಿಕರ್ ಅವರೊಂದಿಗೆ ಲಿವ್-ಇನ್ ಸಂಬಂಧದಲ್ಲಿ ವಾಸಿಸುತ್ತಿದ್ದಾರೆ ಈ ಬಗ್ಗೆಯೂ ಮಾತನಾಡಿದ ಅವರು.. “ಮದುವೆಯಿಂದ ನನ್ನ ಕೊರಳಲ್ಲಿ ಮಂಗಳಸೂತ್ರವನ್ನು ಬೀಳುತ್ತದೆ.. ಇದನ್ನು ಬಿಟ್ಟರೆ ಬೇರೆ ಯಾವ ಬದಲಾವಣೆಯೂ ಆಗಲ್ಲ.. ನಮಗಿಬ್ಬರಿಗೂ ಮದುವೆಯಾಗಲು ಯಾವುದೇ ಆತುರವಿಲ್ಲ.. ಮದುವೆಯ ನಂತರ ನಮ್ಮಿಬ್ಬರ ನಡುವಿನ ಒಂದೇ ಒಂದು ಬದಲಾವಣೆಯೆಂದರೆ ನನ್ನ ಕೊರಳಲ್ಲಿ ಮಂಗಳಸೂತ್ರ. ಉಳಿದೆಲ್ಲವೂ ನಮ್ಮೊಂದಿಗೆ ಹಾಗೆಯೇ ಇರುತ್ತದೆ.. ಮಕ್ಕಳಿಗಾಗಿ ನಾವು ಮದುವೆಯಾಗುವ ಅಗತ್ಯವಿಲ್ಲ. ಈಗ ನಮ್ಮ ಜೀವನದಲ್ಲಿ ಎಲ್ಲವೂ ಚೆನ್ನಾಗಿ ನಡೆಯುತ್ತಿದೆ. ಮದುವೆಯಾಗುವ ಮೂಲಕ ಪರಿಸ್ಥಿತಿಯನ್ನು ಇನ್ನಷ್ಟು ಹದಗೆಡಿಸಲು ನಾನು ಬಯಸುವುದಿಲ್ಲ." ಎಂದು ಹೇಳಿಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.