Samantha About Nag Chaitanya: ದಕ್ಷಿಣ ಭಾರತ ಚಿತ್ರರಂಗದ ಸೂಪರ್‌ ಜೋಡಿಯಂತೆ ಬದುಕಿದ್ದ ಯುವ ತಾರಾ ಜೋಡಿ ಎಂದರೆ ಅದು ಸಮಂತಾ - ನಾಗ ಚೈತನ್ಯ. ಇಬ್ಬರೂ ಸುಮಾರು 7 ವರ್ಷಗಳಿಂದ ಪ್ರೀತಿಸಿ ಮದುವೆಯಾಗಿದ್ದರು.. ಆದರೆ ಸಮಂತಾ ಸಿನಿಮಾ ವಿಚಾರದಲ್ಲಿ ನಾಗ ಚೈತನ್ಯ ಹಸ್ತಕ್ಷೇಪ ಮಾಡಿದ್ದರಿಂದ ಉಂಟಾದ ಸಣ್ಣ ಪುಟ್ಟ ಸಮಸ್ಯೆ ನಂತರ ದೊಡ್ಡದಾಗಿ ಸ್ಫೋಟಗೊಂಡು.. ನಾಗ ಚೈತನ್ಯ ಮೇಲಿನ ಕೋಪವನ್ನು ವ್ಯಕ್ತಪಡಿಸಲು ತನ್ನ ಇನ್ಸ್ಟಾಗ್ರಾಮ್‌ನಿಂದ ಅಕ್ಕಿನೇನಿ ಕುಟುಂಬದ ಹೆಸರನ್ನು ತೆಗೆದುಹಾಕುವ ಮೂಲಕ ವಿಚ್ಛೇದನ ವಿವಾದವನ್ನು ಹೊತ್ತಿಸಿದ ಸಮಂತಾ, ನಂತರ 2021 ರಲ್ಲಿ ವಿಚ್ಛೇದನವನ್ನು ಪಡೆಯುತ್ತಿರುವುದನ್ನು ಘೋಷಿಸಿದರು.. 


COMMERCIAL BREAK
SCROLL TO CONTINUE READING

ಈ ಮಾಹಿತಿಯನ್ನು ನಾಗ ಚೈತನ್ಯ ಕೂಡ ಖಚಿತಪಡಿಸಿದ್ದು, ಈ ವಿಚ್ಛೇದನ ವಿಚಾರದಲ್ಲಿ ನಾಗ ಚೈತನ್ಯಗಿಂತ ಸಮಂತಾ ಮೇಲೆಯೇ ಅನೇಕ ಟೀಕೆಗಳು ಬಂದಿದ್ದವು.. ಮಾದ್ಯಮಗಳಲ್ಲಿ ಸಮಂತಾ-ನಾಗಸೈತನ್ಯ ವಿಚ್ಛೇದನದ ಬಗ್ಗೆ ಕೆಲವು ಚರ್ಚಾ ಕಾರ್ಯಕ್ರಮಗಳು ನಡೆದವು.  


ಇದನ್ನೂ ಓದಿ-BBK 11: ಚೈತ್ರಾ ಕುಂದಾಪುರರನ್ನ ಕಸದ ಬುಟ್ಟಿಗೆ ಹಾಕಿದ ಸ್ಪರ್ಧಿಗಳು; ಈ ಸೂಪರ್ ಸಂಡೆ ಹೇಗಿರಲಿದೆ..?


ಸಮಂತಾ ಸಿನಿಮಾಗಳಲ್ಲಿ ನಟಿಸುವುದರಿಂದ ಅವರು ನಾಗ ಚೈತನ್ಯ ಅವರನ್ನು ಅಗೌರವ ನೀಡಿದರು.. ಮಕ್ಕಳಿಗೆ ಜನ್ಮ ನೀಡಲು ಇಷ್ಟವಿಲ್ಲದೇ ಗರ್ಭನಿರೋಧಕ ಮಾತ್ರೆಗಳನ್ನು ಬಳಸಿದರು ಎಂಬ ವದಂತಿಗಳು ಹುಟ್ಟಿಕೊಂಡವು.. ಆದಷ್ಟು ಸುಮ್ಮನಿದ್ದ ಸಮಂತಾ ಟೀಕೆಗಳು ಹೆಚ್ಚಾದಾಗ ಹೇಳಿಕೆ ನೀಡುವ ಮೂಲಕ ಇದಕ್ಕೆಲ್ಲ ಅಂತ್ಯ ಹಾಡಿದ್ದಾರೆ.


ಇದೀಗ ಸಮಂತಾ ಮತ್ತು ನಾಗ ಚೈತನ್ಯ ವಿಚ್ಛೇದನ ಪಡೆದು 3 ವರ್ಷಗಳಾಗಿವೆ, ವಿಚ್ಛೇದನ ಪಡೆದ ಒಂದೇ ವರ್ಷದಲ್ಲಿ ಪೊನ್ನಿಯ ಸೆಲ್ವನ್ ಸಿನಿಮಾ ನಟಿ ಸೋಭಿತಾ ಅವರನ್ನು ನಾಗ ಚೈತನ್ಯ ಪ್ರೀತಿಸಿ ಡಿಸೆಂಬರ್ 8 ರಂದು ಹೈದರಾಬಾದ್‌ನ ಅನ್ನಪೂರ್ಣ ಸ್ಟುಡಿಯೋದಲ್ಲಿ ವಿವಾಹವಾದರು. ಮದುವೆಗೂ ಮುನ್ನ ಶೋಭಿತಾಗೆ ನಾಗ ಚೈತನ್ಯ ಹಾಕಿದ್ದ ಕೆಲವು ಷರತ್ತುಗಳ ಮಾಹಿತಿ ಬೆಳಕಿಗೆ ಬಂದಿದೆ. ಏಕೆಂದರೇ ನಾಗ ಚೈತನ್ಯ ಅವರ ಮೊದಲ ಮದುವೆಯ ತಪ್ಪುಗಳು ಎರಡನೇ ಮದುವೆಯಲ್ಲಿ ಮರುಕಳಿಸಬಾರದು ಎಂದು ನಾಗಾರ್ಜುನ್ ಇಬ್ಬರಿಗೂ ಈ ಒಪ್ಪಂದ ಮಾಡಿಸಿದ್ದಾರೆ ಎನ್ನಲಾಗಿದೆ. 


ಇದೆಲ್ಲವನ್ನೂ ಬದಿಗಿಟ್ಟು, ಈಗ ಸಮಂತಾ ಹಳೆಯ ಸಂದರ್ಶನವೊಂದರಲ್ಲಿ ನಾಗ ಚೈತನ್ಯ ತನ್ನ ಮನೆಯಲ್ಲಿದ್ದಾಗ ಹೇಗೆ ವರ್ತಿಸುತ್ತಾರೆ ಎಂದು ಹೇಳಿರುವುದು ವೈರಲ್ ಆಗಿದೆ. ಅಂದರೆ ಸಮಂತಾ ಶೂಟಿಂಗ್ ಮುಗಿಸಿ ಮನೆಗೆ ಬಂದರೆ ನಿಮಗೆ ನಟಿಯ ಇಮೇಜ್ ಇಲ್ಲ.. ನೀವು ಸಾಮಾನ್ಯ ಗೃಹಿಣಿ.. ನಮ್ಮೆಲ್ಲರ ಜವಾಬ್ದಾರಿ ನಿನ್ನದು.. ಸಾಮಾನ್ಯ ಗಂಡನಾಗಿ ಮಾತ್ರ ನಾನು ನಿನ್ನ ಹತ್ತಿರ ನಡೆದುಕೊಳ್ಳುತ್ತೇನೆ ಎಂದು ನಾಗಚೈತನ್ಯ ಹೇಳಿದ್ದರಂತೆ.. ಸದ್ಯ ಸಮಂತಾ ಮಾಡಿರುವ ಕಾಮೆಂಟ್‌ ಸೋಷಿಯಲ್‌ ಮಿಡಿಯಾದಲ್ಲಿ ಸಖತ್‌ ವೈರಲ್‌ ಆಗುತ್ತಿದೆ.. 


ಇದನ್ನೂ ಓದಿ-ಆಭರಣ ಪ್ರಿಯರಿಗೆ ಗುಡ್‌ನ್ಯೂಸ್..‌ ವಾರಾಂತ್ಯಕ್ಕೆ ಚಿನ್ನದ ಬೆಲೆಯಲ್ಲಿ ಭಾರೀ ಕುಸಿತ!    


ಉಳಿದಂತೆ ವಿಚ್ಛೇದನದ ನಂತರ ಸಮಂತಾ ತನ್ನ ಮಾಜಿ ಪತಿ ನಾಗ ಚೈತನ್ಯ ವಿರುದ್ಧ ಇದುವರೆಗೂ ಯಾವುದೇ ಆರೋಪ ಮಾಡಿಲ್ಲ. ಬಾಲಿವುಡ್ ಶೋ ಒಂದರಲ್ಲಿ ಮಾತ್ರ ಅವರು ತಮ್ಮ ಕೋಪವನ್ನು ವ್ಯಕ್ತಪಡಿಸಿ ವಿವಾದಕ್ಕೆ ಕಾರಣರಾದರು. ನಾಗ ಚೈತನ್ಯ ಜೊತೆ ಬ್ರೇಕ್ ಅಪ್ ಆಗಿದ್ದರೂ ಇಲ್ಲಿಯವರೆಗೆ ಅವರು ಸಮಂತಾ ನಾಗಾರ್ಜುನ, ಅಮಲಾ ಮತ್ತು ಅಖಿಲ್ ಅವರೊಂದಿಗೆ ಉತ್ತಮ ಸಂಬಂಧ ಹೊಂದಿದ್ದಾರೆ ಎಂದು ಬಾಲಿವುಡ್ ಉದ್ಯಮ ವಲಯಗಳು ತಿಳಿಸಿವೆ. 


ನಾಗ ಚೈತನ್ಯ-ಶೋಭಿತಾ ಮದುವೆಯ ನಂತರ ಸಮಂತಾ ಎರಡನೇ ಮದುವೆ ಬಗ್ಗೆ ಆಗಾಗ ಹಲವು ಸುದ್ದಿಗಳು ಹರಿದಾಡುತ್ತಿದ್ದರೂ ಸಮಂತಾ ಕಡೆಯಿಂದ ಇದುವರೆಗೂ ಯಾವುದೇ ಮಾಹಿತಿ ಬಂದಿಲ್ಲ. ಸಮಂತಾ ‘ತ್ರಾಲಾ ಮೂವಿಂಗ್ ಪಿಕ್ಚರ್ಸ್’ ಎಂಬ ಬ್ಯಾನರ್ ಆರಂಭಿಸಿದ್ದಾರೆ. ‘ಮಾ ಇಂತಿ ಬಂಗಾರಂ’ ಎಂಬ ಪ್ರಾಜೆಕ್ಟ್‌ನ್ನು ಘೋಷಿಸಿದರು. ಸದ್ಯದಲ್ಲೇ ಈ ಚಿತ್ರದ ಇತರೆ ಮಾಹಿತಿ ಹೊರಬೀಳಲಿದೆ ಎನ್ನಲಾಗಿದೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.