Sara Ali Khan Dating With model turned politician: ಬಾಲಿವುಡ್ ನಟಿ ಸಾರಾ ಅಲಿ ಖಾನ್ ಪ್ರಸ್ತುತ ತಮ್ಮ 'ಸ್ಕೈ ಫೋರ್ಸ್' ಚಿತ್ರಕ್ಕಾಗಿ ಸುದ್ದಿಯಲ್ಲಿದ್ದಾರೆ.. ಆದರೆ ಈಗ ಸಾರಾ ಲೈಮ್‌ಲೈಟ್‌ನಲ್ಲಿ ಇರುವುದು ಅವರ ಸಿನಿಮಾಗಳಿಂದಲ್ಲ, ಅವರ ವೈಯಕ್ತಿಕ ಜೀವನದಿಂದ. ಕಳೆದ ಕೆಲವು ದಿನಗಳಿಂದ ಸಾರಾ ಅಲಿಖಾನ್ ಬಿಜೆಪಿ ನಾಯಕರ ಪುತ್ರನ ಜೊತೆ ಡೇಟಿಂಗ್ ನಡೆಸುತ್ತಿದ್ದಾರೆ ಎಂಬ ಮಾತು ಕೇಳಿಬರುತ್ತಿದೆ. ಆದರೆ ಸಾರಾ ಈ ಬಗ್ಗೆ ಅಧಿಕೃತ ಘೋಷಣೆ ಮಾಡಿಲ್ಲ.. ಇಬ್ಬರ ಫೋಟೋಗಳು ಮತ್ತು ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ. ಅದರಲ್ಲೂ ಈಗ ವೈರಲ್‌ ಆಗಿರುವ ವಿಡಿಯೋ ಪ್ರಕಾರ ಸಾರಾ ವದಂತಿಯ ಗೆಳೆಯ ಅರ್ಜುನ್ ಪ್ರತಾಪ್ ಬಾಜ್ವಾ ಜೊತೆ ಇದ್ದಾರೆ ಎಂಬ ಮಾಹಿತಿ ವೇಗವಾಗಿ ಹರಡುತ್ತಿದ್ದೆ.. 


COMMERCIAL BREAK
SCROLL TO CONTINUE READING

ಹೌದು ಸದ್ಯ, ಸಾರಾ ಅಲಿ ಖಾನ್ ಮತ್ತು ಅರ್ಜುನ್ ಬಾಜ್ವಾ ಒಟ್ಟಿಗೆ ಇರುವ ವೀಡಿಯೊ ಸಾಮಾಜಿಕ ಮಾಧ್ಯಮದಲ್ಲಿ ವೈರಲ್ ಆಗುತ್ತಿದೆ. ಇವರಿಬ್ಬರ ವೈರಲ್ ವೀಡಿಯೋ ಗೋವಾದ್ದು ಎನ್ನಲಾಗಿದ್ದು, ಅಲ್ಲಿ ಇಬ್ಬರೂ ರಜಾದಿನಗಳನ್ನು ಆನಂದಿಸುತ್ತಿರುವುದನ್ನು ಕಾಣಬಹುದು. ಈ ವಿಡಿಯೋವನ್ನು ಕೆಫೆಯಲ್ಲಿ ಸೆರೆಹಿಡಿಯಲಾಗಿದೆ ಎಂದು ತಿಳಿದುಬಂದಿದೆ. ಆದರೆ ವೀಡಿಯೊದಲ್ಲಿ ಯಾವುದೇ ಮಾಹಿತಿಯನ್ನು ನೀಡಲಾಗಿಲ್ಲ.


 

 

 

 



 

 

 

 

 

 

 

 

 

 

 

A post shared by Chacha Razii (@chacharazii)


 


ಇದನ್ನೂ ಓದಿ-ಹೊಟೇಲ್‌ನಲ್ಲಿ ಸಿಕ್ಕಿಬಿದ್ದು ಜೈಲುವಾಸ, ಬಂಗಾರದಂತ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ನಟಿ..!


ಸಾರಾ ಅಲಿ ಖಾನ್ ಮತ್ತು ಅರ್ಜುನ್ ಬಾಜ್ವಾ ಅವರ ವೀಡಿಯೊಗಳಿಗೆ ನೆಟಿಜನ್‌ಗಳು ಕಾಮೆಂಟ್ ಮಾಡುತ್ತಿದ್ದಾರೆ. ಫೋಟೋಗಳ ಬಗ್ಗೆ ಪ್ರತಿಕ್ರಿಯಿಸಿದ ನೆಟಿಜನ್, 'ಸಾರಾ ಅಲಿ ಖಾನ್ ಅವರ ಜೀವನದಲ್ಲಿ ಶಾಶ್ವತವಾಗಿ ಜೊತೆಯಲ್ಲಿರುವ ಯಾರಾದರೂ ಅಗತ್ಯವಿದೆ. ಕಾರ್ತಿಕ್ ಆರ್ಯನ್ ಅಲ್ಲ...ʼ ಎಂದಿದ್ದಾರೆ.. ಮತ್ತೊಬ್ಬ ನೆಟಿಜನ್ 'ಯಾರು ಈ ಅರ್ಜುನ್ ಬಾಜ್ವಾ?'‌ ಎಂದೆಲ್ಲ ಕಾಮೆಂಟ್‌ ಮಾಟುತ್ತಿದ್ದಾರೆ.. 


ಇದನ್ನೂ ಓದಿ-ಹೊಟೇಲ್‌ನಲ್ಲಿ ಸಿಕ್ಕಿಬಿದ್ದು ಜೈಲುವಾಸ, ಬಂಗಾರದಂತ ಕೆರಿಯರ್ ಹಾಳು ಮಾಡಿಕೊಂಡ ಸ್ಟಾರ್‌ ನಟಿ..!


ಅರ್ಜುನ್ ಬಾಜ್ವಾ ಯಾರು?
ಸಾರಾ ಅಲಿ ಖಾನ್ ಜೊತೆ ಕಾಣಿಸಿಕೊಂಡ ವ್ಯಕ್ತಿಯ ಪೂರ್ಣ ಹೆಸರು ಅರ್ಜುನ್ ಪ್ರತಾಪ್ ಬಾಜ್ವಾ. ಅರ್ಜುನ್ ಒಬ್ಬ ನಟ ಮತ್ತು ಮಾಡೆಲ್. ಅರ್ಜುನ್ ಬಿಜೆಪಿ ನಾಯಕ ಫತೇ ಜಂಗ್ ಸಿಂಗ್ ಬಾಜ್ವಾ ಅವರ ಪುತ್ರ. ಫತೇ ಜಂಗ್ ಸಿಂಗ್ ಬಾಜ್ವಾ ಅವರು ಪಂಜಾಬ್‌ನಲ್ಲಿ ಭಾರತೀಯ ಜನತಾ ಪಕ್ಷದ (ಬಿಜೆಪಿ) ಉಪಾಧ್ಯಕ್ಷರಾಗಿದ್ದಾರೆ. ಈ ಹಿಂದೆಯೂ ಅವರು ಕಾಂಗ್ರೆಸ್ ಶಾಸಕರಾಗಿದ್ದರು.


ಅರ್ಜುನ್ ಬಾಜ್ವಾ ಕೂಡ ಎಂಎಂಎ ಹೋರಾಟಗಾರ. 'ಸಿಂಗ್ ಈಸ್ ಬ್ಲಿಂಗ್' ಸಿನಿಮಾಗಳಲ್ಲಿ ಅರ್ಜುನ್ ಪೋಷಕ ಪಾತ್ರಗಳಲ್ಲಿ ನಟಿಸಿದ್ದಾರೆ. ಅರ್ಜುನ್ 2019 ರಲ್ಲಿ ಪಂಜಾಬ್‌ನ ಜಿಲ್ಲಾ ಪರಿಷತ್ತಿನ ಕಿರಿಯ ಸದಸ್ಯರಾಗಿ ಕಾಂಗ್ರೆಸ್ ಪಕ್ಷವನ್ನು ಪ್ರತಿನಿಧಿಸಿದ್ದರು. ಅರ್ಜುನ್ ಸಾಮಾಜಿಕ ಜಾಲತಾಣದಲ್ಲಿ ಸದಾ ಸಕ್ರಿಯವಾಗಿದ್ದಾರೆ.. 


 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.