Soundarya: ಸಾಯುವ ಸಮಯದಲ್ಲಿ ಗರ್ಭಿಣಿಯಾಗಿದ್ರಾ ನಟಿ ಸೌಂದರ್ಯ!?
Soundarya Death Anniversary: 19 ವರ್ಷಗಳ ಹಿಂದೆ ವಿಮಾನ ಅಪಘಾತದಲ್ಲಿ ಚಿತ್ರ ನಟಿ ಸೌಂದರ್ಯ ಸಾವನ್ನಪ್ಪಿದ. ಇಂದು ಸೌಂದರ್ಯ ಅವರ 19ನೇ ಪುಣ್ಯತಿಥಿಯಂದು ಅವರಿಗೆ ಸಂಬಂಧಿಸಿದ ಕೆಲವು ಕುತೂಹಲಕಾರಿ ಸಂಗತಿಗಳನ್ನು ತಿಳಿಯಿರಿ.
Soundarya : ಜುಲೈ 18, 1972 ರಂದು ಬೆಂಗಳೂರಿನಲ್ಲಿ ಸೌಂದರ್ಯ ಜನಿಸಿದರು. ಅವರ ತಂದೆ ದಕ್ಷಿಣದ ಸ್ಕ್ರಿಪ್ಟ್ ರೈಟರ್ ಮತ್ತು ನಿರ್ಮಾಪಕರಾಗಿದ್ದರು. 1992 ರಲ್ಲಿ ಸೌಂದರ್ಯ ಎಂಬಿಬಿಎಸ್ ತೊರೆದು, ಕನ್ನಡದ ಬಾ ನನ್ನ ಪ್ರೀತಿಸು ಸಿನಿಮಾ ಮೂಲಕ ಸಿನಿರಂಗ ಪ್ರವೇಶಿಸಿದರು. ಅವರು ಕೇವಲ 12 ವರ್ಷಗಳಲ್ಲಿ 100 ಕ್ಕೂ ಹೆಚ್ಚು ಚಿತ್ರಗಳನ್ನು ಮಾಡಿದ್ದಾರೆ. ಅವುಗಳಲ್ಲಿ ಹೆಚ್ಚಿನವು ಹಿಟ್ ಆಗಿವೆ. ಆಕೆಯನ್ನು ದಕ್ಷಿಣದ ಮಹಿಳಾ ಸೂಪರ್ ಸ್ಟಾರ್ ಆಗಿದ್ದ ಮಹಾನಟಿ ಸಾವಿತ್ರಿಗೆ ಹೋಲಿಸಲಾಗಿದೆ. ಸೌಂದರ್ಯ 2003 ರಲ್ಲಿ ವಿವಾಹವಾದರು. ಇದಾದ ಒಂದು ವರ್ಷದ ನಂತರ ಅವರು ರಾಜಕೀಯಕ್ಕೆ ಬಂದರು.
17 ಏಪ್ರಿಲ್ 2004 ಕರೀಂನಗರದಲ್ಲಿ ನಡೆಯಲಿರುವ ಬಿಜೆಪಿ ಪ್ರಚಾರಕ್ಕಾಗಿ ಸೌಂದರ್ಯ ಬೆಂಗಳೂರಿನಿಂದ ವಿಮಾನದ ಮೂಲಕ ಹೊರಟರು. 4 ಆಸನಗಳ ಈ ವಿಮಾನದಲ್ಲಿ ಸೌಂದರ್ಯ ಅವರ ಸಹೋದರ ಅಮರನಾಥ್ ಮತ್ತು ಇತರರು ಇದ್ದರು. ಜಕ್ಕೂರು ಏರ್‌ಫೀಲ್ಡ್‌ನಿಂದ 11.5 ನಿಮಿಷಕ್ಕೆ ಟೇಕಾಫ್ ಆದ ವಿಮಾನ 100 ಅಡಿ ಎತ್ತರಕ್ಕೆ ತಲುಪುತ್ತಿದ್ದಂತೆ ಬೆಂಕಿ ಹೊತ್ತಿಕೊಂಡಿತು. ಕೆಲವೇ ನಿಮಿಷಗಳಲ್ಲಿ ವಿಮಾನ ಅಪಘಾತಕ್ಕೀಡಾಗಿ ಗಾಂಧಿ ಕೃಷಿ ವಿಜ್ಞಾನ ಕೇಂದ್ರದ ಆವರಣದಲ್ಲಿ ಬಿದ್ದಿತು.
ಇದನ್ನೂ ಓದಿ: ಉರ್ಫಿ ಜಾವೇದ್‌ಗೆ ಕೊರೊನಾ? ಸೆಲ್ಫಿಯಲ್ಲಿ ನಟಿಯ ಸ್ಥಿತಿ ಕಂಡು ಫ್ಯಾನ್ಸ್ ಶಾಕ್!
ವಿಮಾನದಲ್ಲಿದ್ದ ನಾಲ್ವರೂ ಸುಟ್ಟು ಬೂದಿಯಾಗಿದ್ದಾರೆ. ಈ ಅಪಘಾತದ ಒಂದು ದಿನದ ಮೊದಲು ಸೌಂದರ್ಯ ಅವರು ತಮಿಳು ನಿರ್ದೇಶಕ ಆರ್‌ವಿ ಉದಯಕುಮಾರ್ ಅವರೊಂದಿಗೆ ಒಂದು ಗಂಟೆ ಕಾಲ ಕರೆ ಮಾಡಿ ಮಾತನ್ನಾಡಿದರು. ಸೌಂದರ್ಯ ಅವರಿಗೆ ಒಳ್ಳೆಯ ಸುದ್ದಿಯನ್ನು ನೀಡುತ್ತಾ, ತಾನು ತಾಯಿಯಾಗಲಿದ್ದೇನೆ ಮತ್ತು ಈಗ ಚಿತ್ರರಂಗದಿಂದ ಹೊರಬರಲು ಬಯಸುತ್ತೇನೆ ಎಂದು ಹೇಳಿದ್ದರಂತೆ ಹೇಳಲಾಗಿದೆ. ಮರುದಿನವೇ ಸೌಂದರ್ಯ ತೀರಿಕೊಂಡರು. ಆಕೆಗೆ ಆಗ ಕೇವಲ 31 ವರ್ಷ ವಯಸ್ಸಾಗಿತ್ತು.
ಸೌಂದರ್ಯ ಅನಾಥ ಮಕ್ಕಳಿಗಾಗಿ 3 ಶಾಲೆಗಳನ್ನು ನಡೆಸುತ್ತಿದ್ದರು. ಅವರ ಸಗಲಿಕೆ ಬಳಿಕ ತಾಯಿ ಮಂಜುಳಾ ಈ ಜವಾಬ್ದಾರಿಯನ್ನು ವಹಿಸಿಕೊಂಡರು. 1999 ರಲ್ಲಿ ಬಿಡುಗಡೆಯಾದ ಸೂರ್ಯವಂಶಂ ಚಿತ್ರವು ಸೌಂದರ್ಯ ಅವರ ಮೊದಲ ಮತ್ತು ಕೊನೆಯ ಹಿಂದಿ ಚಲನಚಿತ್ರವಾಗಿತ್ತು. ಕನ್ನಡದಲ್ಲಿಯೂ ಅನೇಕ ಸಿನಿಮಾಗಳಲ್ಲಿ ಸೌಂದರ್ಯ ನಟಿಸಿದ್ದರು. ಇದರಲ್ಲಿ ಅವರು ಅಮಿತಾಬ್ ಜೊತೆ ನಟಿಸಿದರು. ಚಿತ್ರದ ಚಿತ್ರೀಕರಣದ ವೇಳೆ ಅವರಿಗೆ ಹಿಂದಿ ಬರದಿದ್ದ ಕಾರಣ ಅವರ ಜಾಗಕ್ಕೆ ರೇಖಾ ಅವರ ಧ್ವನಿಯನ್ನು ಡಬ್ ಮಾಡಲಾಗಿದೆ.
ಇದನ್ನೂ ಓದಿ: ʻರಾಘು’ ಟ್ರೇಲರ್ ರಿಲೀಸ್.. ಸೋಲೋ ಆಕ್ಟರ್ ಆಗಿ ಬಂದ ಚಿನ್ನಾರಿ ಮುತ್ತನಿಗೆ ಶಿವಣ್ಣ ಸಾಥ್
https://bit.ly/3hDyh4G
Apple Link - https://apple.co/3hEw2hy
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ಕಿಸಿ.