Surekha Vani viral photo: ಸುರೇಖಾ ವಾಣಿ ತೆಲುಗು ಮತ್ತು ತಮಿಳು ಚಿತ್ರಗಳಲ್ಲಿ ನಟಿಸಿ ಫೇಮಸ್ ಆಗಿರುವ ನಟಿ. ಹಲವು ನಾಯಕರಿಗೆ ತಾಯಿಯಾಗಿ ನಟಿಸಿರುವ ಇವರಿಗೆ ತಮ್ಮದೇ ಆದ ಅಭಿಮಾನಿ ಬಳಗವಿದೆ. ಇದೀಗ ಸುರೇಖಾ ಇದ್ದಕ್ಕಿದ್ದಂತೆ ತಲೆ ಬೋಳಿಸಿಕೊಂಡಿರುವ ಫೋಟೋ ಹಂಚಿಕೊಳ್ಳುವ ಮೂಲಕ ಅಭಿಮಾನಿಗಳಿಗೆ ಶಾಕ್ ನೀಡಿದ್ದಾರೆ. 


COMMERCIAL BREAK
SCROLL TO CONTINUE READING

ಹೌದು.. ಸುರೇಖಾ ವಾಣಿ ಟಾಲಿವುಡ್‌ ಖ್ಯಾತ ನಟಿಯರಲ್ಲಿ ಒಬ್ಬರು. ತೆಲುಗಿನಲ್ಲಿ ಮುಂಚೂಣಿಯಲ್ಲಿರುವ ನಾಯಕರಿಗೆ ಅಕ್ಕ, ಅಮ್ಮನ ಪಾತ್ರಗಳನ್ನು ನಿರ್ವಹಿಸಿದ್ದಾರೆ. ಅದೇ ರೀತಿ ತಮಿಳಿನಲ್ಲಿಯೂ ಸಹ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ. ಸುರೇಖಾ ಅವರ ಪತಿ ಸುರೇಶ್ ತೇಜ ಕಿರುತೆರೆ ಕಾರ್ಯಕ್ರಮಗಳ ನಿರ್ದೇಶಕರಾಗಿದ್ದರು. ಅವರು ಅನಾರೋಗ್ಯದ ಕಾರಣ 2019 ರಲ್ಲಿ ಹಠಾತ್ ನಿಧನರಾದರು. ಅವರಿಗೆ ಸುಪ್ರಿತಾ ಎಂಬ ಮಗಳಿದ್ದಾಳೆ. 


ಇದನ್ನೂ ಓದಿ:ನಟಿ ಸಮಂತಾ- ನಾಗಜೈತನ್ಯ ಡಿವೋರ್ಸ್‌ಗೆ ಅಲ್ಲು ಅರ್ಜುನ್‌ ಈ ಸಿನಿಮಾ ಕಾರಣ.! ಏಕೆ ಗೊತ್ತಾ..?


ಪತಿಯ ಮರಣದ ನಂತರ ಮತ್ತೆ ಕಮ್‌ಬ್ಯಾಕ್‌ ಮಾಡಿರುವ ಸುರೇಖಾ ಸಾಮಾಜಿಕ ಕೆಲವು ಚಿತ್ರಗಳಲ್ಲಿ ನಟಿಸಿದ್ದಾರೆ, ಸಾಮಾಜಿಕ ಜಾಲತಾಣಗಳಲ್ಲೂ ಸಕ್ರಿಯರಾಗಿದ್ದಾರೆ. ಆಗಾಗ ಮಗಳ ಜೊತೆ ತೆಗೆಸಿಕೊಂಡ ಫೋಟೋಗಳನ್ನು ಪೋಸ್ಟ್ ಮಾಡುವುದು ಮತ್ತು ರೀಲ್ ಮಾಡುವುದು ಅವರ ಹವ್ಯಾಸ. ಹೀಗಿರುವಾಗ ಇತ್ತೀಚೆಗಷ್ಟೇ ಅವರು ಹಂಚಿಕೊಂಡ ಫೋಟೋ ಒಂದು ಅವರ ಫ್ಯಾನ್ಸ್‌ಗೆ ಶಾಖ್‌ ನೀಡಿದೆ. 


ನಟಿ ವಾಣಿ ತಮ್ಮ ತಲೆಯನ್ನು ಬೋಳಿಸಿಕೊಂಡಿರುವ ಎರಡು ಫೋಟೋಗಳನ್ನು ಪೋಸ್ಟ್ ಮಾಡಿದ್ದಾರೆ. ಈ ಫೋಟೋಗಳೂ ವೈರಲ್ ಆಗಿವೆ. ಅಲ್ಲದೆ, ಏಕಾಏಕಿ ನಟಿ ತಮ್ಮ ಕೂದಲನ್ನು ತೆಗೆದಿದ್ದು ಏಕೆ ಅಂತ ಅಭಿಮಾನಿಗಳು ಪ್ರಶ್ನಿಸುತ್ತಿದ್ದಾರೆ. ಕೆಲವರು ನಿಮಗೆ ಕ್ಯಾನ್ಸರ್ ಇದೆಯೇ ಎಂದು ಕೇಳುತ್ತಿದ್ದಾರೆ.


ಇದನ್ನೂ ಓದಿ:ಪುಷ್ಪಾ 2 ಚಿತ್ರಕ್ಕೆ ಗುಡ್ ಬೈ ಹೇಳಿದ ರಶ್ಮಿಕಾ.. ಕಾರಣ?


ಅಲ್ಲದೆ, ವಾಣಿ ತಮ್ಮ ಪೋಸ್ಟ್ ಕೆಳಗೆ ʼಹೊಸ ವರ್ಷ, ಹೊಸ ನಾನುʼ ಎಂದು ಶೀರ್ಷಿಕೆ ಬರೆದುಕೊಂಡಿದ್ದಾರೆ. ಇಂದಿನ ದಿನಗಳಲ್ಲಿ ಶೇವಿಂಗ್ ಹೊಸ ಟ್ರೆಂಡ್ ಆಗಿದೆ. ಅಂತೆಯೇ ಈ ಗೆಟಪ್ ಕೂಡ ಬದಲಾಯಿಸಿದ್ದಾರೆ ಎನ್ನಲಾಗಿದೆ. ಇನ್ನು ಕೆಲವರು ತಿರುಪತಿಗೆ ಹೋಗಿ ಮುಡಿ ಕೊಟ್ಟು ಬಂದಿದ್ದಾರೆ ಎಂದು ಹೇಳುತ್ತಿದ್ದಾರೆ. ಈ ಬಗ್ಗೆ ನಟಿಯೇ ಸ್ಪಷ್ಟತೆ ನೀಡಿದ್ರೆ ಒಳ್ಳೆಯದು..


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.