ಬಿಜೆಪಿಗರೇ ಪ್ರಜ್ವಲ್ ರೇವಣ್ಣ ಮುಸ್ಲಿಂ ಆಗಿದ್ದರೆ, ಸುಮ್ಮನೆ ಇರ್ತಿದ್ರಾ..? ನಟಿ ಸ್ವರಾ ಬಾಸ್ಕರ್ ಆಕೋಶ
Prajwal revanna case : ನಟಿ ಸ್ವರಾ ಭಾಸ್ಕರ್ ತಮ್ಮ ಟ್ಟಿಟರ್ ಖಾತೆಯಲ್ಲಿ ಕೇಂದ್ರ ಬಿಜೆಪಿ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ/ ಕಾಂಗ್ರೆಸ್‌ನವರಾಗಿದ್ದರೆ ಬಿಜೆಪಿಗರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಅಂತ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Swara bhaskar on Prajwal revanna case : ಹಾಸನ ಸಂಸದ ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣ ದಿನದಿಂದ ದಿನಕ್ಕೆ ಹೊಸ ಹೊಸ ತಿರುವು ಪಡೆದುಕೊಳ್ಳುತ್ತಿದೆ. ಇದಿಗ ಈ ಕುರಿತು ಬಾಲಿವುಡ್ ನಟಿ ಸ್ವರಾ ಭಾಸ್ಕರ್ ಗುಡುಗಿದ್ದಾರೆ. ಅಲ್ಲದೆ, ಮೋದಿ ಮತ್ತು ಬಿಜೆಪಿ ಸರ್ಕಾರದ ವಿರುದ್ಧ ಆಕ್ರೋಶ ಹೊರ ಹಾಕಿದ್ದಾರೆ.
ಪ್ರಜ್ವಲ್ ಪ್ರಕರಣದ ಕುರಿತು ಧ್ವನಿ ಎತ್ತಿರುವ ನಟಿ ಸ್ವರಾ ಭಾಸ್ಕರ್ ತಮ್ಮ ಟ್ಟಿಟರ್ ಖಾತೆಯಲ್ಲಿ ಕೇಂದ್ರ ಬಿಜೆಪಿ ಆಡಳಿತಾರೂಢ ಮೋದಿ ಸರ್ಕಾರದ ವಿರುದ್ಧ ಗುಡುಗಿದ್ದಾರೆ. ಅಲ್ಲದೆ, ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ/ ಕಾಂಗ್ರೆಸ್‌ನವರಾಗಿದ್ದರೆ ಬಿಜೆಪಿಗರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಿದ್ದರು ಅಂತ ಕಿಡಿಕಾರಿದ್ದಾರೆ.
ಇದನ್ನೂ ಓದಿ: Actor Abhijith: ಕನ್ನಡದ ನಟ ಅಭಿಜಿತ್ ಹೆಂಡತಿ, ಮಕ್ಕಳು ಹೇಗಿದ್ದಾರೆ ನೋಡಿ!!
ಪ್ರಜ್ವಲ್ ರೇವಣ್ಣ ಲೈಂಗಿಕ ದೌರ್ಜನ್ಯ ಪ್ರಕರಣದಲ್ಲಿ ಮೋದಿ ನೇತೃತ್ವದ ಬಿಜೆಪಿ ಸರ್ಕಾರ ಮೌನವಾಗಿರುವುದು ಏಕೆ..? ಗೊತ್ತಿದ್ದೂ ಮೋದಿ ಅವರ ಪರ ಪ್ರಚಾರ ಮಾಡಿದ್ದು ನಮಗೇಕೆ ಆಘಾತ ತಂದಿದೆ..? ಕಥುವಾ, ಉನ್ನಾವೋ, ಹತ್ರಾಸ್, ಕುಲದೀಪ್ ಸೆಂಗರ್, ಬ್ರಿಜ್‌ಭೂಷಣ್ ಶರಣ್ ಮತ್ತು ಇತರರ ಉದಾಹರಣೆ ನಮ್ಮಲ್ಲಿದೆ..! ಅಪರಾಧಿ ಮುಸ್ಲಿಂ ಅಥವಾ ಟಿಎಂಸಿ ಇಲ್ಲವೇ ಕಾಂಗ್ರೆಸ್‌ನವರಾಗಿದ್ದರೆ ಮಾತ್ರ ಅವರು ಮಹಿಳಾ ಸುರಕ್ಷತೆಯ ಬಗ್ಗೆ ಕಾಳಜಿ ವಹಿಸುತ್ತಾರೆ ಅಂತ ಸ್ವರಾ ಭಾಸ್ಕರ್ ಟ್ಟಿಟರ್ ಖಾತೆಯಲ್ಲಿ ಬರೆದುಕೊಂಡಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.