Actress Tabu: ಬಾಲಿವುಡ್ ನಟಿಯರು ತಮ್ಮ ಹೆಸರನ್ನು ಅನೇಕ ಬಾರಿ ಬದಲಾಯಿಸುವ ಮೂಲಕ ಉದ್ಯಮಕ್ಕೆ ಪ್ರವೇಶಿಸುತ್ತಾರೆ. ಅದರಲ್ಲೂ ಹಿಂದಿನ ಕಾಲದಲ್ಲಿ ಮುಸ್ಲಿಂ ನಟಿಯರು ಹಿಂದೂ ಹೆಸರಿನಿಂದಲೇ ಇಂಡಸ್ಟ್ರಿಗೆ ಎಂಟ್ರಿ ಕೊಡುತ್ತಿದ್ದುದ್ದು ಎಲ್ಲರಿಗೂ ತಿಳಿದ ಸಂಗತಿ. ಅವರಲ್ಲಿ ಟಬು ಕೂಡ ಒಬ್ಬರು. 


COMMERCIAL BREAK
SCROLL TO CONTINUE READING

ಟಬು ಮುಸ್ಲಿಂ ಆದರೆ ಆಕೆ ಹಿಂದೂ ಹೆಸರಿನೊಂದಿಗೆ ಸಿನಿರಂಗಕ್ಕೆ ಕಾಲಿಟ್ಟಳು. ಆಕೆಯ ನಿಜವಾದ ಹೆಸರು ಟಬಸ್ಸುಮ್ ಫಾತಿಮಾ ಹಶ್ಮಿ. 


ಇದನ್ಮೂ ಓದಿ: ನಟಿ ವಿನಯ ಪ್ರಸಾದ್‌ʼರ 2ನೇ ಪತಿ ಮತ್ತು ಮಗಳು ಯಾರು ಗೊತ್ತೇ? ಗಂಡ ಜನಪ್ರಿಯ ನಟ... ಪುತ್ರಿ ಕೂಡ ಚಿತ್ರರಂಗದ ಖ್ಯಾತ ಹೀರೋಯಿನ್


ಇನ್ನು ಟಬು ಅವರ ತಂದೆ ಪಾಕಿಸ್ತಾನದ ಜನಪ್ರಿಯ ನಟ. ಆತನ ಹೆಸರು ಜಮಾಲ್ ಅಲಿ ಹಶ್ಮಿ. ಜಮಾಲ್ ಒಬ್ಬ ಪ್ರಸಿದ್ಧ ಪಾಕಿಸ್ತಾನಿ ನಟ. 


ಟಬು ಅವರ ತಂದೆಗೆ ದೊಡ್ಡ ಬ್ರೇಕ್‌ ಸಿಕ್ಕಿದ್ದು 1970 ರಲ್ಲಿ. ಆ ಸಮಯದಲ್ಲಿ ಹೊಸ ಮುಖವನ್ನು ಹುಡುಕುತ್ತಿದ್ದ ಸಿಜಾ ಚಿತ್ರದಲ್ಲಿ ನಿರ್ಮಾಪಕ ಅಲಿ ಅಫ್ಫಾನ್ ಸಿದ್ದಿಕಿ ಜಮಾಲ್ ಅವರನ್ನು ಸ್ಟಾರ್‌ ಮಾಡಿದರು. 


ಅಂದಹಾಗೆ ಜಮಾಲ್ ಹೈದರಾಬಾದ್‌ʼನಲ್ಲಿ ವಾಸಿಸುತ್ತಿದ್ದ ರಿಜ್ವಾನಾ ಅವರನ್ನು ವಿವಾಹವಾದರು. ರಿಜ್ವಾನಾ ಶಿಕ್ಷಕಿಯಾಗಿದ್ದು, ಶಬಾನಾ ಅಜ್ಮಿ ಅವರ ಸಂಬಂಧಿಯೂ ಆಗಿದ್ದರು.  ಆದರೆ ಕೆಲ ವರುಷಗಳ ಬಳಿಕ, ರಿಜ್ವಾನಾಗೆ ಜಮಾಲ್ ಅಲಿ ಹಶ್ಮಿ ವಿಚ್ಛೇದನ ನೀಡಿದ್ದ. ಈ ಬಳಿಕ ಭಾರತಕ್ಕೆ ಅವರು, ಮಕ್ಕಳಾದ ಟಬು ಮತ್ತು ಫರಾರನ್ನು ಒಬ್ಬಂಟಿಯಾಗಿ ಬೆಳೆಸಿದರು.


ಇನ್ನು ಟಬು ಅವರ ವೈಯಕ್ತಿಕ ಬದುಕಿನ ಬಗ್ಗೆ ನೋಡುವುದಾದರೆ, ಸದ್ಯ ಆಕೆಗೆ 52 ವರ್ಷ ವಯಸ್ಸು. ದಕ್ಷಿಣದ ಹಿರಿಯ ನಟ ನಾಗಾರ್ಜುನ್ ಜೊತೆ ಟಬು ಡೇಟಿಂಗ್‌ ನಡೆಸಿದ್ದರು ಎಂದು ಹೇಳಲಾಗುತ್ತದೆ.


ಇದನ್ಮೂ ಓದಿ: "ರಿತಿಕಾ ನಿಮ್ಮನ್ನು ನನ್ನ ಕೆಲಸದ ಹೆಂಡತಿ ಅಂತಾಳೆ"... ಟೀಂ ಇಂಡಿಯಾ ನಾಯಕ ಹೇಳಿದ್ದು ಯಾರ ಬಗ್ಗೆ? ರೋಹಿತ್ ಶರ್ಮಾಗೆ 2 ಮದುವೆಯಾಗಿದ್ಯಾ?


ಇದು ಒಂದೆರಡು ವರ್ಷಗಳ ಕಹಾನಿಯಲ್ಲ. ಬದಲಾಗಿ ಬರೋಬ್ಬರಿ 15 ವರ್ಷ ಡೇಟಿಂಗ್‌ ಮಾಡಿದ್ದರು ಎಂದು ಹಲವು ಮಾಧ್ಯಮಗಳಲ್ಲಿ ವರದಿಯಾಗಿದೆ. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews