Actress Tabu: ಕಳೆದ ವರ್ಷ ಚಿತ್ರರಂಗದಲ್ಲಿ ಮದುವೆಯ ಸದ್ದು ಜೋರಾಗಿ ಕೇಳಿಬಂದಿತ್ತು. ಅನೇಕ ನಾಯಕರು ಮತ್ತು ನಾಯಕಿಯರು ಮದುವೆಯಾದರು. ಕೆಲವರು ವಿಚ್ಛೇದನ ಘೋಷಿಸಿ ಶಾಕ್ ಕೊಟ್ಟರು.. ರಾಕುಲ್ ಪ್ರೀತ್ ಸಿಂಗ್, ಲಾವಣ್ಯ ತ್ರಿಪಾಠಿ, ಸೋನಾಕ್ಷಿ ಸಿನ್ಹಾ, ಕೀರ್ತಿ ಸುರೇಶ್ ಮತ್ತು ಪಿವಿ ಸಿಂಧು ಇತ್ತೀಚೆಗೆ ವಿವಾಹವಾಗಿ, ಕುಟುಂಬ ಜೀವನವನ್ನು ಪ್ರಾರಂಭಿಸಿದರು. ಆದರೆ ಇನ್ನೂ ಕೆಲವರು 40 ವರ್ಷ ವಯಸ್ಸಿನ ನಂತರವೂ ಒಂಟಿಯಾಗಿದ್ದಾರೆ.. ಅದೇ ರೀತಿ ಬಾಲಿವುಡ್‌ ಚೆಲುವೆಯೊಬ್ಬಳು 50ನೇ ವಯಸ್ಸಾದರೂ ಮದುವೆಯ ಮಾತು ಎತ್ತದೆ ಮೌನ ಜೀವನ ನಡೆಸುತ್ತಿದ್ದಾಳೆ..  


COMMERCIAL BREAK
SCROLL TO CONTINUE READING

ಇದನ್ನೂ ಓದಿ-ಫಿನಾಲೆ ಹತ್ತಿರವಾಗುತ್ತಿದ್ದಂತೆ ಬಿಗ್‌ ಟ್ವಿಸ್ಟ್‌ ನೀಡಿದ ಬಿಗ್‌ಬಾಸ್! ಎಲಿಮಿನೇಟ್‌ ಆದ ಸ್ಪರ್ಧಿಗಳ ರೀ ಎಂಟ್ರಿ..


ಆದರೆ ಈ ನಟಿ ಒಂಟಿಯಾಗಲು ಒಬ್ಬ ಸ್ಟಾರ್ ಹೀರೋ ಕಾರಣ ಎಂಬುದು ಸುದ್ದಿ. ಆ ನಟನಿಂದಾಗಿಯೇ ಆಕೆ ಒಂಟಿಯಾಗಿ ಉಳಿದಿದ್ದಾಳೆ ಎಂದು ನೆಟಿಜನ್‌ಗಳು ಸಾಮಾಜಿಕ ಜಾಲತಾಣಗಳಲ್ಲಿ ಚರ್ಚಿಸುತ್ತಿದ್ದಾರೆ. ಆ ಸಿಂಗಲ್ ಸಿಂಗಾರಿ ಯಾರು? ಅಂತೀರಾ.. ಆಕೆ ಬೇರಾರೂ ಅಲ್ಲ.. 50ರ ಹರೆಯದಲ್ಲೂ ತನ್ನ ಸೌಂದರ್ಯದಿಂದ ಕಂಗೊಳಿಸುವ ಮೋಹನಾಂಗಿ ಟಬು. ಈ ನಟಿ ತೆಲುಗು, ಹಿಂದಿಯಲ್ಲಿ ಕೆಲವು ಸಿನಿಮಾಗಳನ್ನು ಮಾಡಿ, ಅಪಾರ ಅಭಿಮಾನಿಗಳನ್ನು ಹೊಂದಿದ್ದಾರೆ. ವೆಂಕಟೇಶ್ ಅಭಿನಯದ ಕೂಲಿ ನಂಬರ್ ಒನ್ ಚಿತ್ರದ ಮೂಲಕ ಪ್ರೇಕ್ಷಕರ ಮುಂದೆ ಬಂದಿದ್ದರು.. ‘ಕೂಲಿ ನಂ.1’ ನಂತರ ಬಹುದಿನಗಳ ಕಾಲ ‘ನಿನ್ನೇ ಪೆಲ್ಲದಾಟಾ’ದಲ್ಲಿ ನಟಿಸಿದ್ದರು. ಆ ಚಿತ್ರದಲ್ಲಿ ನಾಗಾರ್ಜುನ ಜೊತೆ ಟಬು ಅವರ ಕೆಮಿಸ್ಟ್ರಿ ಸಖತ್‌ ಆಗಿ ಮೂಡಿ ಬಂದಿತ್ತು.. ಆ ನಂತರ ಅವರು ಅನೇಕ ಸಿನಿಮಾಗಳನ್ನು ಮಾಡುವ ಮೂಲಕ ಎಲ್ಲರ ಗಮನ ಸೆಳೆದಿದ್ದರು.. ನಟಿ ಈ ವಯಸ್ಸಿನಲ್ಲೂ ಹಾಟ್ ಆಗಿ ನಟಿಸಿ ಇಂಪ್ರೆಸ್ ಮಾಡುವ ಟ್ಯಾಲೆಂಟ್‌ ಹೊಂದಿದ್ದಾರೆ.. 


ಇದನ್ನೂ ಓದಿ-ಮತ್ತೊಂದು ಒಳ್ಳೆಯ ಕೆಲಸಕ್ಕೆ ಕೈ ಹಾಕಿದ ಕಿಚ್ಚ ಸುದೀಪ್!‌ ನಟನ ಹಾಲಿನಂತ ಮನಸ್ಸಿಗೆ ಅಭಿಮಾನಿಗಳ ಮೆಚ್ಚುಗೆ!!


ಇತ್ತೀಚೆಗೆ ನಟಿ ತಾವು ಮದುವೆಯಾಗದಿರಲು ನಟನೊಬ್ಬ ಕಾರಣ.. ಅವನಿಂದಾಗಿ ಯಾರೂ ನನ್ನ ಹತ್ತಿರ ಬರಲಿಲ್ಲ ಎಂದು ಸೆನ್ಸೇಷನಲ್ ಕಾಮೆಂಟ್ ಮಾಡಿದ್ದಾರೆ. ಆ ನಾಯಕ ಬಾಲಿವುಡ್ ಹೀರೋ ಬೇರಾರೂ ಅಲ್ಲ.. ಅಜಯ್‌ ದೇವಗನ್..‌ ಒಂದು ಕಾಲದಲ್ಲಿ ಅಜಯ್ ಮತ್ತು ಟಬು ನಡುವೆ ಅನೈತಿಕ ಸಂಬಂಧವಿದೆ ಎಂಬ ಮಾತು ಕೇಳಿಬಂದಿತ್ತು. ಟಬು ಅಜಯ್ ದೇವಗನ್ ಜೊತೆ ಹಲವು ಸಿನಿಮಾ ಮಾಡಿದ್ದು, ಇವರಿಬ್ಬರು ಒಳ್ಳೆಯ ಸ್ನೇಹಿತರು. ಅಲ್ಲದೇ ನಟಿ ಟಬು ಸಹೋದರ ಸಮೀರ್ ಮತ್ತು ಅಜಯ್ ಬಾಲ್ಯದಿಂದಲೂ ಸ್ನೇಹಿತರು. ನಟಿ ತಾವು 13 ವರ್ಷದವಳಿದ್ದಾಗ ಯಾರಾದರೂ ಹುಡುಗರು ನನ್ನನ್ನು ಹಿಂಬಾಲಿಸಿದರೆ ಅಜಯ್‌ ನನ್ನ ಅಣ್ಣನೊಂದಿಗೆ ಅವರಿಗೆ ಹುಚ್ಚನಂತೆ ಹೊಡೆಯುತ್ತಿದ್ದರು. ಹೀಗಾಗಿ ಹುಡುಗರು ನನ್ನೊಂದಿಗೆ ಮಾತನಾಡಲು ಮತ್ತು ನನ್ನನ್ನು ನೋಡಲು ಹೆದರುತ್ತಿದ್ದರು. ಹೀಗಾಗಿ ತಾನು ಇದುವರೆಗೂ ಮದುವೆಯಾಗಿಲ್ಲ ಎಂದು ಟಬು ತಮಾಷೆಯಾಗಿ ಹೇಳಿದ್ದಾರೆ.
 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://tinyurl.com/7jmvv2nz
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ