Actress Tabu : ಮಗು ಬೇಕಂದ್ರೆ ಮದುವೆ ಆಗ್ಬೇಕು ಅಂತೇನಿಲ್ಲ - ನಟಿ ತಬು
Actress Tabu : 50 ವರ್ಷ ದಾಟಿದರೂ ಮದುವೆಯಾಗದ ಬಾಲಿವುಡ್ ನಟಿ ಮದುವೆಯಾಗದೆಯೂ ಗರ್ಭಿಣಿಯಾಗಬಹುದು ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ.
Actress Tabu : 50 ವರ್ಷ ದಾಟಿದರೂ ಮದುವೆಯಾಗದ ಬಾಲಿವುಡ್ ನಟಿ ಮದುವೆಯಾಗದೆಯೂ ಗರ್ಭಿಣಿಯಾಗಬಹುದು ಎಂದು ಹೇಳುವ ಮೂಲಕ ವಿವಾದಕ್ಕೆ ಕಾರಣವಾಗಿದ್ದಾರೆ. ತಬು ಬಾಲಿವುಡ್‌ನ ಪ್ರಮುಖ ನಟಿ. ಅವರು ತಮಿಳು, ತೆಲುಗು ಮತ್ತು ಮಲಯಾಳಂನಂತಹ ದಕ್ಷಿಣ ಭಾರತದ ಭಾಷೆಯ ಚಲನಚಿತ್ರಗಳಲ್ಲಿಯೂ ನಟಿಸಿದ್ದಾರೆ. ಅದರಲ್ಲೂ ತಮಿಳಿನಲ್ಲಿ ಅಜಿತ್ ಜೊತೆ ಕಾದಲ್ ದೇಶಂ, ಇರುವರ್ ಸೇರಿದಂತೆ ಮುಂತಾದ ಚಿತ್ರಗಳಲ್ಲಿ ನಟಿಸಿದ್ದಾರೆ.
ಇದನ್ನೂ ಓದಿ: Kantara trailer : ಕಾಂತಾರ ಸಿನಿಮಾದ ಟ್ರೈಲರ್ ರಿಲೀಸ್, ರಿಷಬ್ ಶೆಟ್ಟಿ ಫ್ಯಾನ್ಸ್ ದಿಲ್ ಖುಷ್
ಈ ವೇಳೆ ಇತ್ತೀಚೆಗೆ ನಡೆದ ಸಂದರ್ಶನವೊಂದರಲ್ಲಿ ಮಗು ಹೆರುವ ಕುರಿತು ಅವರು ಮಾತನಾಡಿರುವುದು ವಿವಾದಕ್ಕೆ ಎಡೆಮಾಡಿಕೊಟ್ಟಿದೆ. “ಎಲ್ಲ ಮಹಿಳೆಯರಂತೆ ನನಗೂ ತಾಯಿಯಾಗುವ ಆಸೆ ಇದೆ. ಅದಕ್ಕಾಗಿ ಮದುವೆಯಾಗುವ ಅಗತ್ಯವಿಲ್ಲ. ನೀವು ಮದುವೆಯಾಗದೆ ಗರ್ಭಿಣಿಯಾಗಬಹುದು ಎಂದು ಹೇಳುವ ಮೂಲಕ ವಿವಾದಕ್ಕೀಡಾಗಿದ್ದಾರೆ.
ಸಂದರ್ಶನದಲ್ಲಿ ಇಷ್ಟು ವಯಸ್ಸಾದರೂ ನಿಮಗೆ ಅಮ್ಮ ಅನಿಸಿಕೊಳ್ಳುವ ಆಸೆ ಇಲ್ವಾ ಎಂಬ ಪ್ರಶ್ನೆಗೆ ತಬು, "ಎಲ್ಲರಂತೆ ನನಗೂ ತಾಯಿಯಾಗಿ, ಅಮ್ಮ ಎಂದೆನಿಸಿಕೊಳ್ಳಬೇಕು ಎಂಬ ಬಯಕೆಯೂ ಇದೆ. ಅದಕ್ಕೆ ಮದುವೆನೇ ಆಗಬೇಕು ಅಂತೇನಿಲ್ಲ. ಮದುವೆಯಾಗದೆ ಮಗು ಆಗುತ್ತೆ. ಇತ್ತೀಚಿನ ದಿನಗಳಲ್ಲಿ ನೀವು ಮದುವೆಯಾಗದೇ ಗರ್ಭಿಣಿಯಾಗಬಹುದು. ಬಾಡಿಗೆ ತಾಯ್ತನ (ಸರೋಗಸಿ) ಮೂಲಕ ಅಮ್ಮನಾಗುವ ಸಾಧ್ಯತೆಯೂ ಇದೆ. ನನಗೆ ತಾಯಿಯಾಗಬೇಕು ಎಂದು ಅನಿಸಿದರೆ ಆ ವಿಧಾನವನ್ನು ಅನುಸರಿಸುತ್ತೇನೆ" ಎಂದು ತಬು ಹೇಳಿದ್ದಾರೆ.
ಇದನ್ನೂ ಓದಿ: Guess Who: ಅಮ್ಮನೊಂದಿಗಿರುವ ಈ ಬಾಲಕಿ ಇಂದು ದೊಡ್ಡ ಸೆಲಿಬ್ರಿಟಿ, ಯಾರೆಂದು ಗುರುತಿಸಬಲ್ಲೀರಾ?
ನಟಿ ತಬು ಅವರ ಈ ಹೇಳಿಕೆ ಇದೀಗ ಎಲ್ಲೆಡೆ ವಿವಾದ ಹುಟ್ಟುಹಾಕಿದ್ದು, "ನಾವು ಮದುವೆಯಾಗದಿದ್ದರೆ ಸಾಯುವುದಿಲ್ಲ. ಈಗಿನ ಕಾಲದಲ್ಲಿ ಮದುವೆ ಅನಿವಾರ್ಯವಲ್ಲ.ತನಗೆ ಇಷ್ಟವಾದವರು ಇನ್ನೂ ಸಿಕ್ಕಿಲ್ಲ, ಹೆಣ್ಣನ್ನು ಎಲ್ಲ ರೀತಿಯಲ್ಲೂ ಗೌರವಿಸುವ ವ್ಯಕ್ತಿ ಸಿಕ್ಕರೆ ಅವರನ್ನೇ ಮದುವೆಯಾಗುತ್ತೇನೆ" ಎಂದಿದ್ದಾರೆ. ಸದ್ಯ ಹಿಂದಿಯ ದೃಶ್ಯಂ2 ಸಿನಿಮಾದ ಚಿತ್ರೀಕರಣದಲ್ಲಿ ತಬು ಬ್ಯುಸಿಯಾಗಿದ್ದು, ಅಜಯ್ ದೇವಗನ್ ಜತೆಗೆ ಭೋಲಾ ಚಿತ್ರದ ಶೂಟಿಂಗ್ ಸಹ ಮುಗಿಸಿದ್ದಾರೆ.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು Twitter, Facebook, Youtube ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.