Urfi Javed : ನಟಿ ಉರ್ಫಿ ಜಾವೇದ್ ಬಿಗ್ ಬಾಸ್ ಒಟಿಟಿ ಶೋ ಮೂಲಕ ಫೇಮಸ್ ಆಗಿದ್ದಾರೆ. ಈ ಶೋನಲ್ಲಿ ಭಾಗವಹಿಸಿ ಮೊದಲ ವಾರದಲ್ಲೇ ಹೊರ ಬಂದಿದ್ದರು. ಅಷ್ಟೇ ಅಲ್ಲದೆ, ಉರ್ಫಿ ತನ್ನ ಚಿತ್ರ ವಿಚಿತ್ರ ಪ್ಯಾಸನ್‌ ಸೆನ್ಸ್‌ನಿಂದ ಸೋಷಿಯಲ್‌ ಮೀಡಿಯಾದಲ್ಲಿ ಸಖತ್‌ ಫೇಮಸ್‌..


COMMERCIAL BREAK
SCROLL TO CONTINUE READING

ತನ್ನ ಡ್ರೆಸ್ಸಿಂಗ್ ಶೈಲಿಯಿಂದ ಹಲವಾರು ಬಾರಿ ಟೀಕೆಗೆ ಒಳಗಾಗಿದ್ದಾರೆ. ಆದರೂ ಟೀಕೆಗಳಿಗೆ ತಲೆಕೆಡಿಸಿಕೊಳ್ಳದ ಉರ್ಫಿ, ತನ್ನ ಹವ್ಯಾಸ ಮುಂದುವರೆಸಿದ್ದಾರೆ.. 2016 ರಲ್ಲಿ ಪ್ರಸಾರವಾದ ʼಬಡೇ ಭಯ್ಯಾ ಕಿ ದುಲ್ಹನಿಯಾʼ ಧಾರಾವಾಹಿಯಲ್ಲಿ ಅವ್ನಿ ಪಂತ್ ಪಾತ್ರವನ್ನು ನಿರ್ವಹಿಸಿದ್ದಾರೆ. 


ಇದನ್ನೂ ಓದಿ:ಅನಂತ್‌ ಮದುವೆಗೆ ವಿದೇಶದಿಂದ ಬಂದ ಕಾರ್ಡಶಿಯಾನ್ ಸಹೋದರಿಯರು: ದೇವಸ್ಥಾನದಲ್ಲಿ ಪೂಜೆ..ಬಡ ಮಕ್ಕಳಿಗೆ ಊಟ ನೀಡಿ ಮಾನವೀಯಾತೆ ಮೆರೆದ ಚೆಂದುಳ್ಳಿಯರು...


ಸಾದ್ ಫೆರೋ ಕಿ ಹೀರಾ ಫೇರಿ, ಪೇಪನ್ನಾ, ಗಿಗಿ ಮಾ, ಆಯಿ ಮೇರೆ ಹಮ್ಸಾಫರ್ ಮುಂತಾದ ಹಲವಾರು ಧಾರಾವಾಹಿಗಳಲ್ಲಿ ನಟಿಸಿದ್ದಾರೆ. ಇನ್ನು ಇತ್ತೀಚಿಗೆ ತನ್ನ ಸ್ನೇಹಿತರೊಂದಿಗೆ ಕುಡಿದ ಮತ್ತಿನಲ್ಲಿ ತೂಗಾಡುತ್ತ ಪಬ್‌ನಿಂದ ಹೊರ ಬಂದ ವಿಡಿಯೋಗಳು ಸಾಮಾಜಿಕ ಜಾಲತಾಣಗಳಲ್ಲಿ ವೈರಲ್ ಆಗುತ್ತಿವೆ.



ಉರ್ಫಿ ಕುಡಿದು ಸ್ವಂತ ನಡೆಯಲಾಗದೆ, ಸ್ನೇಹಿತರ ಸಹಾಯ ಪಡೆದು ನಡೆಯುತ್ತಿದ್ದ ದೃಶ್ಯ ವಿಡಿಯೋದಲ್ಲಿ ಸೆರೆಯಾಗಿದೆ.. ಈ ವಿಡಿಯೋಗೆ ನೆಟ್ಟಿಗರು ಚಿತ್ರ ವಿಚಿತ್ರವಾಗಿ ಕಾಮೆಂಟ್‌ ಮಾಡುತ್ತಿದ್ದಾರೆ.. ಒಟ್ಟಾರೆಯಾಗಿ ತಮ್ಮ ವಿಭಿನ್ನ ಪ್ಯಾಶನ್‌ನಿಂದ ಇಷ್ಟು ದಿನ ಗಮನಸೆಳೆದಿದ್ದ ನಟಿ, ಇದೀಗ ಮತ್ತಿನಲ್ಲಿ ಮುಳುಗಿ ನೆಟ್ಟಿಜನ್ಸ್‌ ಟ್ರೋಲ್‌ಗೆ ಒಳಗಾಗಿದ್ದಾರೆ.. 


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.