Vanitha Vijayakumar 4th marriage: ತಮಿಳು ನಟಿ ವನಿತಾ ವಿಜಯಕುಮಾರ್... ಸಾಕಷ್ಟು ವಿವಾದಗಳಿಂದ, ಜೊತೆಗೆ ತನ್ನ ಮದುವೆ ವಿಚಾರಗಳಿಂದಲೇ ಸುದ್ದಿಯಲ್ಲಿರುವ ಈ ನಟಿ ಇದೀಗ ನಾಲ್ಕನೇ ಮದುವೆಗೆ ಸಿದ್ಧರಾಗಿದ್ದಾರೆ. ಅಷ್ಟೇ ಅಲ್ಲದೆ ಮದುವೆ ಡೇಟ್‌ ಕೂಡ ಅನೌನ್ಸ್‌ ಮಾಡಿದ್ದಾರೆ. ನೃತ್ಯ ಸಂಯೋಜಕ ರಾಬರ್ಟ್ ಜೊತೆ ದಾಂಪತ್ಯ ಜೀವನಕ್ಕೆ ಕಾಲಿಡುವುದಾಗಿ ಘೋಷಿಸಿದ್ದಾರೆ.


COMMERCIAL BREAK
SCROLL TO CONTINUE READING

ಇದನ್ನೂ ಓದಿ: BBK11: ʼಸ್ವರ್ಗʼವಾಸಿಗಳಿಗೆ ʼನರಕʼ ತೋರಿಸಿದ ಚೈತ್ರಾ ಕುಂದಾಪುರ ಮೊದಲ ವಾರವೇ ನಾಮಿನೇಟ್!


ಅಂದಹಾಗೆ ವನಿತಾ ವಿಜಯಕುಮಾರ್ ಮದುವೆಯ ದಿನಾಂಕವನ್ನು ಘೋಷಿಸುತ್ತಾ ಪೋಸ್ಟರ್‌ ಒಂದನ್ನು ಶೇರ್‌ ಮಾಡಿಕೊಂಡಿದ್ದಾರೆ. ಇದರಲ್ಲಿ ಮೊಣಕಾಲೂರಿ, ರಾಬರ್ಟ್‌ಗೆ ಪ್ರೇಮ ನಿವೇದನ ಮಾಡುತ್ತಿರುವಂತೆ ತೋರುತ್ತಿದೆ. ಇನ್ನು ಈ ಪೋಸ್ಟ್‌ ನೋಡುತ್ತಿದ್ದಂತೆ ನೆಟ್ಟಿಗರು ಶಾಕ್‌ ಆಗಿದ್ದಾರೆ. ರಾಬರ್ಟ್ ಕೂಡ ತಮ್ಮ ಇನ್‌ಸ್ಟಾಗ್ರಾಂ ಸ್ಟೋರಿಯಲ್ಲಿ ಡೇಟ್‌ ಅನೌನ್ಸ್‌ ಮಾಡಿದ್ದಾರೆ.


ವನಿತಾ ತಮಿಳಿನ ಹಿರಿಯ ನಟ ವಿಜಯಕುಮಾರ್ ಮತ್ತು ಅವರ ಎರಡನೇ ಪತ್ನಿ ತಮಿಳು ನಟಿ ಮಂಜುಳಾ ಅವರ ಪುತ್ರಿ. ಈ ಹಿಂದೆ ವನಿತಾ ಅವರಿಗೆ ಮೂರು ಮದುವೆಯಾಗಿದೆ. 2000 ರಲ್ಲಿ ನಟ ಆಕಾಶ್ ಎಂಬವರನ್ನು ವಿವಾಹವಾಗಿದ್ದ ವನಿತಾ 2005 ರಲ್ಲಿ ವಿಚ್ಛೇದನ ನೀಡಿದರು. ಅದಾದ ಬಳಿಕ 2007ರಲ್ಲಿ, ಉದ್ಯಮಿ ಆನಂದ್ ಜಯ್ ರಾಜನ್ ಅವರನ್ನು ವಿವಾಹವಾದರು. ಆ ದಾಂಪತ್ಯ ಕೂಡ ಮುರಿದುಬಿತ್ತು. ಆ ಬಳಿಕ ಛಾಯಾಗ್ರಾಹಕ ಪೀಟರ್ ಪಾಲ್ ಅವರನ್ನು ಮದುವೆಯಾಗಿದ್ದ ವನಿತಾ 2020ರಲ್ಲಿ ಡಿವೋರ್ಸ್‌ ನೀಡಿದರು. ಇದೀಗ ರಾಬರ್ಟ್‌ ಜೊತೆ ನಾಲ್ಕನೇ ಬಾರಿ ಮದುವೆಯಾಗುತ್ತಿದ್ದಾರೆ.


ಇದನ್ನೂ ಓದಿ: ಖಾಲಿ ಹೊಟ್ಟೆಯಲ್ಲಿ ಇದೊಂದು ಪದಾರ್ಥ ತಿನ್ನಿ: ಮಧುಮೇಹ, ಬಿಪಿ ಸಮಸ್ಯೆ ಎಲ್ಲವೂ ಮಾಯವಾಗುತ್ತೆ!


ವನಿತಾ ಮತ್ತು ರಾಬರ್ಟ್ ಡೇಟಿಂಗ್ ಬಗ್ಗೆ ಈ ಹಿಂದೆಯೇ ಭಾರೀ ಸುದ್ದಿಯಾಗಿತ್ತು. ಇವರಿಬ್ಬರು ಒಟ್ಟಿಗೆ ವಾಸಿಸುತ್ತಿದ್ದಾರೆ ಎಂದು ಹೇಳಲಾಗಿತ್ತು. ಇದೀಗ ಈ ವದಂತಿಗೆ ಫುಲ್‌ ಸ್ಟಾಪ್‌ ಬಿದ್ದಿದ್ದು ಈ ಜೋಡಿ ಮದುವೆಯಾಗುತ್ತಿದ್ದಾರೆ.


https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು 
Twitter Link - https://bit.ly/3n6d2R8
Facebook Link - https://bit.ly/3Hhqmcj 
Youtube Link - https://www.youtube.com/live/RNn4I7iIaYE?si=3G4W5dh0oCdFnu-T
Instagram Link -  https://bit.ly/3LyfY2l 
Sharechat Link - https://bit.ly/3LCjokI 
Threads Link-  https://www.threads.net/@zeekannadanews 
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್ ಮಾಡಿ.