ಸೂಪರ್ಸ್ಟಾರ್ ಜೊತೆ ಡೇಟಿಂಗ್.. 39 ನೇ ವರ್ಷಕ್ಕೆ ಅಜ್ಜಿ.. ಸಿನಿಮಾ ಇಂಡಸ್ಟ್ರಿಯನ್ನೆ ಹುಚ್ಚಿಬಿಸಿ ಕುಣಿಸಿದ್ದ ಈ ನಟಿ ಯಾರು ಗೊತ್ತಾ..?
Barbara Mori: ಹೃತಿಕ್ ರೋಷನ್ ಅವರ ನಟನೆಯ ಕೈಟ್ಸ್ ಸಿನಿಮಾ 2010ರಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಅಷ್ಟೇನು ಕಲೆಕ್ಷನ್ ಮಾಡಿಲ್ಲವಾದರೂ, ಹೃತಿಕ್ ರೋಷನ್ ಅವರ ಅಭಿನಯ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು.
Barbara Mori: ಹೃತಿಕ್ ರೋಷನ್ ಅವರ ನಟನೆಯ ಕೈಟ್ಸ್ ಸಿನಿಮಾ 2010ರಲ್ಲಿ ಬಿಡುಗಡೆಯಾಗಿ ಸಿಕ್ಕಾಪಟ್ಟೆ ಸದ್ದು ಮಾಡಿತ್ತು. ಆಗಿನ ಕಾಲಕ್ಕೆ ಈ ಸಿನಿಮಾ ಬಾಕ್ಸ್ ಆಫಿಸ್‌ನಲ್ಲಿ ಅಷ್ಟೇನು ಕಲೆಕ್ಷನ್ ಮಾಡಿಲ್ಲವಾದರೂ, ಹೃತಿಕ್ ರೋಷನ್ ಅವರ ಅಭಿನಯ ಎಲ್ಲರ ಮನಸ್ಸನ್ನು ಗೆದ್ದುಕೊಂಡಿತ್ತು.
2010ರಲ್ಲಿ ಎಲ್ಲರ ಮನಗೆದ್ದ ಕೈಟ್ಸ್ ಸಿನಿಮಾಗಾಗಿ ನಟಿ ಬಾರ್ಬಾರಾ ಮೋರಿಯವರು ಬಾಲಿವುಡ್ ಸಿನಿಮಾ ಇಂಡಸ್ಟ್ರಿಗೆ ಕಾಲಿಟ್ಟಿದ್ದರು. ಮೊದಲ ಸಿನಿಮಾದಲ್ಲಿ ತನ್ನ ನಟನೆ ಹಾಗೂ ಆಕೆಯ ಸೌಂದರ್ಯ ಕಂಡ ಅಭಿಮಾನಿಗಳು, ಅವಳ ನೋಟಕ್ಕೆ ಫಿದಾ ಆಗಿದ್ದರು. ಸಿನಿಮಾದಲ್ಲಿ ಹೆಚ್ಚು ಖ್ಯಾತಿ ಪಡೆಯಲು ಸಾಧ್ಯವಾಗಲಿಲ್ಲವಾದರೂ ನಟಿ, ತನ್ನ ವೈಯಕ್ತಿಕ ವಿವಾರದ ಕಾರಣದಿಂದಾಗಿ ಸಿಕ್ಕಾಪಟ್ಟೆ ಚರ್ಚೆಗೆ ಒಳಗಾದರು.
ಬಾರ್ಬರಾ ಅವರು ಬಾಲಿವುಡ್‌ನಲ್ಲಿ ಮಾಡಿದ ಮೊದಲನೆ ಸಿನಿಮಾವೇ ಫ್ಲಾಪ್ ಆಗಿತ್ತು. ನಂತರ ಅವರು ಬಾಲಿವುಡ್‌ನಲ್ಲಿ ಸಿನಿಮಾ ಮಾಡುವುದನ್ನು ತ್ಯಜಿಸಿದರು. ಮಾಧ್ಯಮ ವರದಿಗಳ ಪ್ರಕಾರ, ಕೈಟ್ಸ್ ಚಿತ್ರೀಕರಣದ ಸಮಯದಲ್ಲಿ ಬಾರ್ಬರಾ ಮೋರಿ ಮತ್ತು ಹೃತಿಕ್ ರೋಷನ್ ಇಬ್ಬರು ಕೂಡ ಪರಸ್ಪರ ಒಬ್ಬರನ್ನೊಬ್ಬರು ಪ್ರೀತಿಸ ತೊಡಗಿದ್ದರು. ಅವರಿಬ್ಬರ ಸಂಬಂಧ ಯಾವ ರೇಂಜ್‌ಗೆ ಹೋಗಿತ್ತು ಎಂದರೆ, ಹೃತಿಕ್ ರೋಷನ್ ಅವರು ಬಾರ್ಬರಾ ಅವರಿಗಾಗಿ, 2 ಕೋಟಿ ರೂಪಾಯಿ ಮೌಲ್ಯದ ವ್ಯಾನಿಟಿ ವ್ಯಾನ್ ಅನ್ನು ಉಡುಗೊರೆಯಾಗಿ ನೀಡಿದ್ದರು.
ಈ ಸುದ್ದಿಗಳೆಲ್ಲಾ ಆಗಿನ ಕಾಲಕ್ಕೆ ಬಿ ಟೌನ್‌ನಲ್ಲಿ ಚರ್ಚೆಯ ಹಾಟ್ ಟಾಪಿಕ್ ಆಯಿತು, ಇವರಿಬ್ಬರ ಸಂಬಂಧದ ಕುರಿತು ಮಾಧ್ಯಾಮಗಳಲ್ಲಿ ಪ್ರಸಾರವಾಗಲು ಶುರುವಾಯಿತು. ಈ ಸುದ್ದಿ ಎಲ್ಲೆಡೆ ಕಿಚ್ಚು ಹಚ್ಚಿಸಿತ್ತು. ಹೃತಿಕ್ ರೋಷನ್ ಅವರಿಗೆ ನೀಡಲಾಗಿದ್ದ ವ್ಯಾನಿಟಿ ವ್ಯಾನ್‌ನಲ್ಲಿ ಹೃತಿಕ್ ಹಾಗೂ ಬಾರ್ಬಾರಾ ಆಗಾಗ ಒಟ್ಟಿಗೆ ಸುತ್ತಾಡುವುದು ಕಂಡು ಬಂತು.
ಇನ್ನೂ, ಇದರ ನಂತರ ನಟಿ ಸಿನಿಮಾವನ್ನು ತೊರೆದಳು, ಮೊದಲನೆ ಮಗುವನ್ನು ಪಡೆದಾಗ ನಟಿಯ ಗೆಳೆಯ ಅವರನ್ನು ಬಿಟ್ಟು ಹೋಗಿದ್ದರು, ಮೊದಲ ಮಗುವಿನ ನಂತರ ನಟಿಗೆ ಬ್ರೇಕ್ ಅಪ್ ಆಗಿತ್ತು. ನಂತರ, 2016ರಲ್ಲಿ ನಟಿ ಬಾಸ್ಕೆಟ್ ಬಾಲ್ ಆಟಗಾರನನ್ನು ಮದುವೆಯಾಗಿದ್ದರು, ಈ ಸಂಬಂಧ ಹೆಚ್ಚು ಕಾಲ ಉಳಿಯದೆ ಕೇವಲ ಒಂದೆ ವರ್ಷದಲ್ಲಿ ಈ ಜೋಡಿ ಬೇರೆಯಾಗಿದ್ದರು.
ತಮ್ಮ ಪತಿಯಿಂದ ದೂರವಾದ ಈ ನಟಿ, 2017ರಲ್ಲಿ ತಮ್ಮ ಪತಿಯಾದ ಕೆನ್ನತ್ ರೇ ಅವರಿಂದ ವಿಚ್ಛೇದನ ಪಡೆದಿದ್ದರು. ಇನ್ನೂ, ನಟಿಯ ಮಗ ಸೆರ್ಗಿಯೋ ಮೇಯರ್ ಮೋರಿ ಅವರಿಗೆ ಮಿಲಾ ಎಂಬ ಮಗಳಿದ್ದು, ನಟಿ 39 ವರ್ಷಗಳಿಗೆ ಮೊಮ್ಮಗುವಿನ್ ಅಜ್ಜಿಯಾದರು.
https://bit.ly/3AClgDd
Apple Link - https://apple.co/3wPoNgr
ನಮ್ಮ ಸೋಶಿಯಲ್ ಮೀಡಿಯಾ ಪುಟಗಳಿಗೆ ಸಬ್ ಸ್ಕ್ರೈಬ್ ಆಗಲು
Twitter Link - https://bit.ly/3n6d2R8
Facebook Link - https://bit.ly/3Hhqmcj
Youtube Link - https://tinyurl.com/7jmvv2nz
Instagram Link - https://bit.ly/3LyfY2l
Sharechat Link - https://bit.ly/3LCjokI
Threads Link- https://www.threads.net/@zeekannadanews
WhatsApp Channel- bit.ly/46lENGm ಲಿಂಕ್ ಗಳ ಮೇಲೆ ಕ್ಲಿಕ್.